ತುಮಕೂರು ವಿಶ್ವವಿದ್ಯಾಲಯದಲ್ಲಿ 2021-22ನೇ ಶೈಕ್ಷಣಿಕ ಸಾಲಿಗೆ ಸ್ನಾತಕ ಹಾಗೂ ಸ್ನಾತಕೋತ್ತರ ಪದವಿ ತರಗತಿಗಳಿಗೆ ವಿಷಯವಾರು ಬೋಧನೆ ಮಾಡಲು ಅತಿಥಿ ಉಪನ್ಯಾಸಕರನ್ನು ನೇಮಕ ಮಾಡುವ ಸಂಬಂಧ ಅರ್ಹ ಭಾರತೀಯ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಹುದ್ದೆಗಳ ವಿವರ
*ಸ್ನಾತಕ ಪದವಿಯ ವಿಷಯಗಳು: ಪರಿಸರ ವಿಜ್ಞಾನ ಮತ್ತು ಗಣಕ ವಿಜ್ಞಾನ
*ಸ್ನಾತಕೋತ್ತರ ಪದವಿಯ ವಿಷಯಗಳು: ರಸಾಯನಶಾಸ್ತ್ರ, ಸೂಕ್ಷ್ಮ ಜೀವಶಾಸ್ತ್ರ ಮತ್ತು ಪರಿಸರ ವಿಜ್ಞಾನ
ಶೈಕ್ಷಣಿಕ ಅರ್ಹತೆ
ಹುದ್ದೆಗಳಿಗೆ ಅನುಸಾರ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಲ್ಲಿ ಆಯಾ ವಿಷಯದಲ್ಲಿ ಪದವಿ ಕೇಳಲಾಗಿದೆ.
ಇತರ ಮಾನದಂಡ
ಆಯ್ಕೆಗೆ ಸಂಬಂಧಿಸಿದಂತೆ, ಅಧಿಸೂಚನೆ ಮತ್ತು ಮಾನದಂಡಗಳನ್ನು ವಿಶ್ವವಿದ್ಯಾಲಯದ ಜಾಲತಾಣದಿಂದ ಡೌನ್ಲೋಡ್ ಮಾಡಿಕೊಂಡು ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸತಕ್ಕದ್ದು. ವಿವಿ ಅಂತರ್ಜಾಲದಲ್ಲಿ ಅರ್ಹ ಅಭ್ಯರ್ಥಿಗಳು ಪಟ್ಟಿ ಪ್ರಕಟಿಸಲಾಗುವುದು. ಹಾಗೂ ವೆಬ್ಸೈಟ್ನಲ್ಲಿ ದಿನಾಂಕ ನಿಗದಿಪಡಿಸಿದ ನಂತರ ಸಂದರ್ಶನಕ್ಕೆ ಹಾಜರಾಗಬೇಕು. ಸಂಸ್ಥೆಯ ನಿಯಮದ ಪ್ರಕಾರ ಮಾಸಿಕ ವೇತನ ನಿಗದಿಪಡಿಸಲಾಗಿದೆ. ಸಂದರ್ಶನ ನಡೆಯುವ ದಿನಾಂಕವನ್ನು ಶ್ರೀ ವಿವಿ ವೆಬ್ಸೈಟ್ನಲ್ಲಿ ಪ್ರಕಟಿಸಲಾಗುವುದು.
ಆಯ್ಕೆ ಪ್ರಕ್ರಿಯೆ
ಶೈಕ್ಷಣಿಕ ಅರ್ಹತೆ ಮತ್ತು ವೃತ್ತಿ ಅನುಭವದ ಆಧಾರದ ಮೇಲ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಸರ್ಕಾರದ ನಿಯಮಾವಳಿ ಪ್ರಕಾರ ಆಯ್ಕೆ ನಡೆಯಲಿದೆ. ವಿಷಯ ಮತ್ತು ಅತಿಥಿ ಉಪನ್ಯಾಸಕರ ನೇಮಕಾತಿ ಸಂಖ್ಯೆ ಬದಲಾವಣೆಯಲ್ಲಿ ವಿವಿ ತೀರ್ಮಾನವೇ ಅಂತಿಮ.
ಅರ್ಜಿ ಸಲ್ಲಿಸಲು ಕೊನೇ ದಿನ: 9.6.2022
ಅಧಿಸೂಚನೆಗೆ: https://bit.ly/3aL0wQJ
ಮಾಹಿತಿಗೆ: http://tumkuruniversity.ac.in/