ನ್ಯೂಸ್

ಮೋದಿ ಹೇಳಿಕೊಟ್ಟ ಸಾಬುದಾನಿ ಖಿಚಡಿ: ಪ್ರಧಾನಿಯ ಅಡುಗೆ ಗುಟ್ಟು ಬಿಚ್ಚಿಟ್ಟ ಬಿಜೆಪಿ ಮುಖಂಡ

ಶಿಮ್ಲಾ: ಪ್ರಧಾನಿ ಮೋದಿಯವರು ರಾಜಕೀಯದಲ್ಲಷ್ಟೇ ಅಲ್ಲದೇ ಅಡುಗೆಯಲ್ಲಿಯೂ ಮುಂದೆಯೇ. ಆಹಾರ ಪ್ರಿಯರಾಗಿರುವ ಮೋದಿಯವರು ಖುದ್ದು ಅಡುಗೆ ತಯಾರಿಸುವಲ್ಲಿಯೂ ಖ್ಯಾತಿ ಪಡೆದಿದ್ದಾರೆ. ಇದಕ್ಕೆ ನಿದರ್ಶನ ಎಂದರೆ ಬಿಜೆಪಿ ಮುಖಂಡರೊಬ್ಬರ ಪತ್ನಿ ಮೋದಿಯವರ ಅಡುಗೆ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ.

ಶಿಮ್ಲಾದ ಬಿಜೆಪಿ ನಾಯಕ ದೀಪಕ್ ಶರ್ಮಾ ಅವರು ತಮ್ಮ ಪತ್ನಿ ಸೀಮಾ ಶರ್ಮಾಗೆ ಮೋದಿಯವರು ಅಡುಗೆ ಪಾಕ ವಿಧಾನ ಕಲಿಸಿದ್ದನ್ನು ನೆನಪಿಸಿಕೊಂಡಿದ್ದಾರೆ. ನರೇಂದ್ರ ಮೋದಿಯವರು ಪ್ರಧಾನಿಯಾಗುವುದಕ್ಕೂ ಮುನ್ನ ಅಂದರೆ 1997ರಲ್ಲಿ ಶಿಮ್ಲಾ ಭೇಟಿಗೆ ನೀಡಿದ್ದರು. ಆ ಸಮಯದಲ್ಲಿ ದೀಪಕ್​ ಅವರ ಮನೆಗೆ ಹೋಗಿದ್ದರು. ಅದು ನವರಾತ್ರಿಯ ಸಮಯವಾಗಿತ್ತು. ಮನೆಯಲ್ಲಿ 'ಸಾಬುದಾನಿ ಖಿಚಡಿ' (ಸಬ್ಬಕ್ಕಿ ಖಿಚಡಿ) ಮಾಡುತ್ತಿದ್ದರು. ಆ ಸಮಯದಲ್ಲಿ ತಮ್ಮ ಪತ್ನಿ ಮಾಡಿದ ಖಿಚಡಿ ಅಷ್ಟು ಚೆನ್ನಾಗಿ ಇರಲಿಲ್ಲ. ಆಗ ಖುದ್ದು ಮೋದಿಯವರೇ ಪಾಕ ವಿಧಾನ ಹೇಳಿಕೊಟ್ಟರು. ನಂತರ ಆ ಖಿಚಡಿ ತುಂಬಾ ಟೇಸ್ಟಿಯಾಗಿ ಬಂದಿತ್ತು. ಅಲ್ಲಿಂದ ಅದೇ ಮಾದರಿಯಲ್ಲಿ ಇಂದಿಗೂ ಪತ್ನಿ ಸೀಮಾ ಖಿಚಡಿ ಮಾಡುತ್ತಾಳೆ ಎಂದಿದ್ದಾರೆ ದೀಪಕ್​.

ಮಂಗಳವಾರ ಶಿಮ್ಲಾ ಭೇಟಿ ನೀಡಿದ್ದರು ಮೋದಿ. ಆ ಸಮಯದಲ್ಲಿ ಹಿಂದಿನ ದಿನಗಳನ್ನು ನೆನಪಿಸಿಕೊಂಡರು ದೀಪಕ್​ ಶರ್ಮ.