ವಿಯಾಟ್ನಾಂ: ಈ ಚಿತ್ರದಲ್ಲಿ ಕಾಣುತ್ತಿರುವ ವ್ಯಕ್ತಿಯ ಹೆಸರು ಹೋವಾ ವಾನ್ ಲಂಗ್. ಈತನಿಗೆ ಭೂಮಿಯ ಮೇಲೆ ಹೆಣ್ಣು ಎನ್ನುವವರು ಇರುತ್ತಾರೆ ಎಂದೇ ತಿಳಿದಿಲ್ಲ. 41-42 ವರ್ಷ ಆಸುಪಾಸಿನ ಈ ವ್ಯಕ್ತಿ ಇದುವರೆಗೆ ಹೆಣ್ಣನ್ನೇ ನೋಡಿಲ್ಲ. ಅವರನ್ನು ಇದೇ ಮೊದಲ ಬಾರಿಗೆ ನೋಡಿದ್ದು, ಅವರು ಹೆಣ್ಣುಮಕ್ಕಳು ಎಂದು ತಿಳಿದ ತಕ್ಷಣ ಒಂದು ರೀತಿಯ ವಿಚಿತ್ರವಾಗಿ ಕಂಡಿದ್ದಾನೆ.
ಇದಕ್ಕೆ ಕಾರಣವೆಂದರೆ ಹೋವಾ, ಕಳೆದ 41 ವರ್ಷಗಳಿಂದ ಕಾಡಿನಲ್ಲಿಯೇ ಬೆಳೆದಿದ್ದಾನೆ. 1972ರಲ್ಲಿ ವಿಯೆಟ್ನಾಂ ಯುದ್ಧದ ವೇಳೆ ಅಮೆರಿಕ ಬಾಂಬ್ ದಾಳಿ ನಡೆಸಿತ್ತು. ಆ ಸಮಯದಲ್ಲಿ ಈತ ತಾಯಿ ಮತ್ತು ತನ್ನ ಒಡಹುಟ್ಟಿದವರನ್ನು ಕಳೆದುಕೊಂಡಿದ್ದಾನೆ. ಬದುಕಿ ಉಳಿದದ್ದು ಈತನ ತಂದೆ ಮತ್ತು ಒಬ್ಬ ಸಹೋದರ. ಅದೇ ವೇಳೆ ಜೀವ ಕಾಪಾಡಿಕೊಳ್ಳಲು ಅರಣ್ಯಕ್ಕೆ ಇವರು ಓಡಿಹೋಗಿದ್ದರು.
ಆ ಸಮಯದಲ್ಲಿ ಮಗುವಾಗಿದ್ದ ಹೋವಾ 41 ವರ್ಷ ಬೆಳೆದದ್ದು ಇದೇ ದಟ್ಟಡವಿಯಲ್ಲಿ. ಕಾಂಗ್ ಗಾಯ್ ಪ್ರಾಂತ್ಯದ ಟೇ ಟ್ರಾ ಜಿಲ್ಲೆಯ ದಟ್ಟಡವಿಯಲ್ಲಿಯೇ ಇವರ ವಾಸ. ಜೇನುತುಪ್ಪ, ಹಣ್ಣುಗಳು ಹಾಗೂ ವನ್ಯಜೀವಿಗಳನ್ನು ತಿಂದುಕೊಂಡು ಬದುಕಿತ್ತು ಈ ಕುಟುಂಬ.ಮರಮುಟ್ಟು ಬಳಸಿಕೊಂಡು ಮನೆಕಟ್ಟಿಕೊಂಡಿದ್ದರು.
ಛಾಯಾಗ್ರಾಹಕ ಅಲ್ವಾರೋ ಸೆರೆಜೋ ಕಾಡಿನಲ್ಲಿ ಛಾಯಾಚಿತ್ರ ಮಾಡಲು ಹೋದಾಗ ಇವರನ್ನು ನೋಡಿದ್ದರು. ಹೋವಾ ಇವರ ಕೈಗೆ ಸಿಕ್ಕಿದ್ದಾನೆ. ಕಾಡಿನಿಂದ ನಾಡಿಗೆ ಕರೆತಂದಿದ್ದು, ಈ ಸಮಯದಲ್ಲಿ ಹೆಂಗಸರನ್ನು ಕಂಡು ಈತನಿಗೆ ವಿಚಿತ್ರ ಎನಿಸಿದೆ. ಈ ಸಮಯದಲ್ಲಿ ಹೋವಾನನ್ನು ಅಲ್ವಾರೋ ಮಾತನಾಡಿಸಿದಾಗ ಹೆಣ್ಣುಮಕ್ಕಳು ಭೂಮಿಯ ಮೇಲೆ ಇರೋದೇ ಗೊತ್ತಿಲ್ಲ ಎಂದಿದ್ದಾನೆ.
ಈ ಕುರಿತು ಮಾಹಿತಿ ನೀಡಿರುವ ಅಲ್ವಾರೋ, ಜನರನ್ನು ಕಂಡೊಡನೆಯೇ ಇವರೆಲ್ಲಾ ಓಡಿ ಹೋಗುತ್ತಿದ್ದರು. ಹೋವಾನನ್ನು ಹೇಗೆ ಕರೆತರುವಲ್ಲಿ ಯಶಸ್ವಿಯಾಗಿದ್ದೇನೆ. ಈತನಿಗೆ ಗಂಡು ಮತ್ತು ಹೆಣ್ಣಿನ ನಡುವಿನ ಅಂತರ ಗೊತ್ತಿಲ್ಲ. ಆದ್ದರಿಂದ ಲೈಂಗಿಕ ಆಸಕ್ತಿ ಎನ್ನುವುದೂ ಇಲ್ಲ, ಮಕ್ಕಳು ಹುಟ್ಟಲು ಹೆಣ್ಣುಮಕ್ಕಳು ಬೇಕು ಎನ್ನುವುದೂ ತಿಳಿದಿಲ್ಲ, ಆ ಬಗ್ಗೆ ಆತನಿಗೆ ಯೋಚನೆಯೂ ಬಂದಿಲ್ಲ, ಸೆಕ್ಸ್ ಬಗ್ಗೆ ಕೇಳಿದ್ರೆ ಹಾಗೆಂದರೇನು ಎಂದು ಪ್ರಶ್ನಿಸಿದ್ದಾನೆ ಎಂದಿದ್ದಾರೆ. ಸದ್ಯ ಈತನನ್ನು 'ರಿಯಲ್ ಟಾರ್ಜನ್' ಎಂದು ಕರೆಯಲಾಗಿದೆ. ಕಾಡಿನ ಪ್ರಶಾಂತ ವಾತಾವರಣದಲ್ಲಿ ಈತನಿಗೀಗ ನಾಡಿನ ಗಜಿಬಿಜಿಯನ್ನು ಅರಗಿಸಿಕೊಳ್ಳುವುದು ಕಷ್ಟವಾಗಿದೆಯಂತೆ.