ನ್ಯೂಸ್

ದೇಹ ಪೂರ್ತಿ ತಿರುಗಿಸಿ ರಾಖಿಸಾವಂತ್‌ ವ್ಯಾಯಾಮ: ವಿಡಿಯೋ ಶೇರ್- ಅಲ್ಲೂ ಟ್ರೋಲ್‌!

suchetana

ಮುಂಬೈ: ಬಾಲಿವುಡ್‌ ನಟಿ ರಾಖಿ ಸಾವಂತ್‌ ಇದಾಗಲೇ ಹಲವಾರು ಸಾಮಾಜಿಕ ಕಾರ್ಯಗಳನ್ನು ತೊಡಗಿಸಿಕೊಂಡಿದ್ದಾರೆ. ಇದರ ಹೊರತಾಗಿಯೂ ರಾಖಿ ಎಂದ ತಕ್ಷಣ ಬಹುತೇಕ ಮಂದಿಗೆ ಕಾಣಿಸುವುದು ನೀಲಿ ತಾರೆಯಾಗಿಯೇ. ಇದಕ್ಕಾಗಿಯೇ ಆಕೆ ಹಾಕುವ ಫೋಟೋ ಅಥವಾ ವಿಡಿಯೋಗಳಲ್ಲಿ ಟ್ರೋಲ್‌ ಮಾಡುವುದನ್ನೇ ಕಾಯುತ್ತಿರುತ್ತಾರೆ.

ಇಲ್ಲಿಯೂ ಹಾಗೆಯೇ ಆಗಿದೆ. ಯೋಗ, ಧ್ಯಾನ, ವರ್ಕ್‌ಔಟ್‌ನಲ್ಲಿಯೂ ರಾಖಿ ಸೈ. ಇದೇ ಕಾರಣಕ್ಕೆ ವರ್ಷ 43 ಆದರೂ ರಾಖಿ ಫಿಟ್‌ ಆಗಿದ್ದಾರೆ. ತಾವು ವ್ಯಾಯಾಮ ಮಾಡುತ್ತಿರುವ ವಿಡಿಯೋ ಒಂದನ್ನು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಅವರು ಶೇರ್‌ ಮಾಡಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಅವರು ತಮ್ಮ ದೇಹವನ್ನು ಸಂಪೂರ್ಣ ತಿರುಗಿಸಿ ಅಚ್ಚರಿ ಮೂಡಿಸಿದ್ದಾರೆ. ಇಂಥದ್ದೊಂದು ಕಠಿಣ ವ್ಯಾಯಾಮ ಮಾಡುತ್ತಿರುವುದಕ್ಕೆ ಹಲವರು ಶ್ಲಾಘನೆ ವ್ಯಕ್ತಪಡಿಸಿದರೆ, ಇನ್ನು ಕೆಲವರು ಟ್ರೋಲ್‌ ಮಾಡುತ್ತಿದ್ದಾರೆ.

ಅಷ್ಟಕ್ಕೂ ಈ ವ್ಯಾಯಾಮ ನೋಡಿದಾಗ ಅದರಲ್ಲಿ ಟ್ರೋಲ್‌ ಮಾಡುವುದು ಏನಿದೆ ಎಂದು ಎನಿಸಬಹುದು. ಆದರೆ ಟ್ರೋಲಿಗರ ಬಾಯಿಗೆ ಈಕೆ ಹಾಕಿರುವ ಸ್ಪೋರ್ಟ್‌ ಬ್ರಾದ ಬಣ್ಣ ಆಹಾರವಾಗಿದೆ. ಇದರ ಬಣ್ಣ ಚರ್ಮದ ಬಣ್ಣವನ್ನೇ ಹೋಲುತ್ತದೆ. ಆದ್ದರಿಂದ ಕೆಲವರು ಈಕೆ ಯಾವುದೇ ದಿರಿಸು ಧರಿಸಿಲ್ಲ ಎಂದೂ, ಒಮ್ಮೆ ನೋಡಿದರೆ ಬಟ್ಟೆ ಹಾಕಿಕೊಂಡ ಹಾಗೆಯೇ ಕಾಣಿಸುವುದಿಲ್ಲ ಎಂದು ಟ್ರೋಲ್‌ ಮಾಡಿ ಅದನ್ನು ಶೇರ್‌ ಮಾಡುತ್ತಿದ್ದಾರೆ. ಅಂತೂ ಅವರವರ ಭಾವಕ್ಕೆ ಎಂಬಂತೆ ಈ ವಿಡಿಯೋ ಕಾಣಿಸುತ್ತಿದೆ.

ಇಲ್ಲಿದೆ ನೋಡಿ ವಿಡಿಯೋ: