ನ್ಯೂಸ್

ರಾಜ್ಯಸಭೆ ಚುನಾವಣೆ ದಿನಾಂಕ ಪ್ರಕಟ: ಕರ್ನಾಟಕದ ನಾಲ್ಕು ಸ್ಥಾನಗಳಿಗೆ ಜೂನ್​ 10 ನಿಗದಿ

ಬೆಂಗಳೂರು: ದೇಶಾದ್ಯಂತ 57 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗಿದ್ದು, ಕರ್ನಾಟಕದ ನಾಲ್ಕು ಸ್ಥಾನಗಳಿಗೆ ಜೂನ್​​ 10ರಂದು ಚುನಾವಣೆ ​​​​ ನಡೆಯಲಿದೆ.

ಮೇ 24ರಿಂದ 31ರೊಳಗೆ ನಾಮಪತ್ರ ಸಲ್ಲಿಕೆಗೆ ಅವಕಾಶ ಮಾಡಿಕೊಡಲಾಗುತ್ತದೆ. ಜೂನ್ 10ರಂದೇ ಫಲಿತಾಂಶ ಪ್ರಕಟವಾಗುತ್ತದೆ.

ರಾಜ್ಯಸಭೆಯ 57 ಮಂದಿ ಸದಸ್ಯರ ಅವಧಿಯು ಜೂನ್ 30ರಂದು ಮುಕ್ತಾಯಗೊಳ್ಳಲಿದೆ. ರಾಜ್ಯಸಭಾ ಸದಸ್ಯರಾದ ಕೆ.ಸಿ ರಾಮಮೂರ್ತಿ, ಜಯರಾಮ್ ರಮೇಶ್, ಆಸ್ಕರ್ ಪೊರ್ನಾಂಡಿಸ್ ಹಾಗೂ ನಿರ್ಮಲಾ ಸೀತಾರಾಮನ್ ರಾಜ್ಯಸಭಾ ಸದಸ್ಯರ ಅವಧಿ ಮುಕ್ತಾಯವಾಗಲಿದೆ.