ನ್ಯೂಸ್

ವಿದ್ಯುತ್‌ ತಂತಿ ತಗುಲಿ ಹೊತ್ತಿ ಉರಿದ ಟ್ರ್ಯಾಕ್ಟರ್‌: ಭಯಾನಕ ವಿಡಿಯೋ ಇಲ್ಲಿದೆ ನೋಡಿ...

ರಾಯಚೂರು: ಭತ್ತದ ಮೇವು ತುಂಬಿಕೊಂಡು ಹೋಗುತ್ತಿದ್ದ ಟ್ರ್ಯಾಕ್ಟರ್ ಗೆ ಬೆಂಕಿ ತಗುಲಿರುವ ಘಟನೆ ರಾಯಚೂರು ತಾಲೂಕಿನ ಶಕ್ತಿ ನಗರ ಬಳಿಯ ಯರಗುಂಟ ಗ್ರಾಮದಲ್ಲಿ ನಡೆದಿದೆ.

ವಿದ್ಯುತ್ ತಂತಿ ತಗುಲಿ ಬೆಂಕಿ ಹೊತ್ತಿಕೊಂಡಿದೆ. ಅದೃಷ್ಟವಶಾತ್‌ ಯಾವ ಪ್ರಾಣಹಾನಿಯೂ ಆಗಲಿಲ್ಲ. ರೈತ ತಿಮ್ಮಾರೆಡ್ಡಿ ಎನ್ನುವವರು ಟ್ರ್ಯಾಕ್ಟರ್‌ನಲ್ಲಿ ಭತ್ತದ ಮೇವು ತೆಗೆದುಕೊಂಡು ಹೋಗುತ್ತಿದ್ದಾಗ ಈ ಘಟನೆ ನಡೆದಿದೆ.

ತಂತಿ ತಗುಲಿದ ಪರಿಣಾಮ ಮೇವು ಸಂಪೂರ್ಣ ಭಸ್ಮವಾಗುದೆ, ಮೇವಿಗೆ ಬೆಂಕಿ ತಗಲುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಚಾಲಕ, ಇಂಜಿನ್ ಬೇರ್ಪಡಿಸಿ ಆಗಬಹುದಾದ ಅನಾಹುತವನ್ನು ತಪ್ಪಿಸಿದ್ದಾರೆ. ಅಂದಾಜು 50 ರೂ ಮೌಲ್ಯದ ಭತ್ತದ ಮೇವು ನಷ್ಟವಾಗಿದೆ, ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ.

ವಿಡಿಯೋ ನೋಡಲು ಈ ಲಿಂಕ್‌ ಕ್ಲಿಕ್‌ ಮಾಡಿ: