ನ್ಯೂಸ್

ತಾಯಿಗೆ ಹೆಣ್ಣುಮಕ್ಕಳ ಪೂರೈಕೆ ಮಾಡುತ್ತಿದ್ದ ಮಕ್ಕಳು- ಬೀದಿ ಬದಿಯೇ ಇವರ ಅಡ್ಡಾ!

ಲಖನೌ: ತಾಯಿ ವೇಶ್ಯಾವಾಟಿಕೆ ಮಾಡುತ್ತಿದ್ದರೆ, ಆಕೆಯ ಇಬ್ಬರು ಗಂಡಮಕ್ಕಳು ದಲ್ಲಾಳಿಗಳಾಗಿ ಕೆಲಸ ಮಾಡುತ್ತಿದ್ದರು. ಬೇರೆ ಬೇರೆಕಡೆಗಳಿಂದ ಹೆಣ್ಣಮಕ್ಕಳನ್ನು ಕರೆತಂದು ತಾಯಿಗೆ ಒದಗಿಸುತ್ತಿದ್ದರು. ಬೀದಿಬದಿಯಲ್ಲಿಯೇ ವೇಶ್ಯಾವಾಟಿಕೆ ನಡೆಸುತ್ತಿದ್ದ ಲಖನೌನ ತಾಯಿ-ಮಕ್ಕಳನ್ನು ಪೊಲೀಸರು ಬಂಧಿಸಿದ್ದಾರೆ.

ಕೋತಾವಾಲಿ ಪ್ರದೇಶದಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸಲಾಗುತ್ತಿತ್ತು. ಸರಗನಾ ಎಂಬ ಮಹಿಳೆ ಹಾಗೂ ಈಕೆಗೆ ಇಬ್ಬರು ಗಂಡುಮಕ್ಕಳು ಈ ದಂಧೆಯಲ್ಲಿ ತೊಡಗಿಸಿಕೊಂಡಿದ್ದರು.

ಸರಗನಾಳ ಮಕ್ಕಳು ಒಂದಿಷ್ಟು ಹುಡುಗಿಯರು ಫೋಟೋ ಕಲೆಕ್ಟ್​ ಮಾಡುತ್ತಿದ್ದ ಮಕ್ಕಳು, ಬರುವ ಗ್ರಾಹಕರಿಗೆ ಅವರ ಫೋಟೋ ತೋರಿಸುತ್ತಿದ್ದರು. ಅವರು ಓಕೆ ಎಂದರೆ ಹುಡುಗಿಯರನ್ನು ಕರೆದುಕೊಂಡು ಬರಲಾಗುತ್ತಿತ್ತು. ಕಾಲೇಜು ವಿದ್ಯಾರ್ಥಿನಿಯರಿಗೂ ಹಣದ ಆಸೆ ತೋರಿಸಿ ಈ ದಂಧೆಗೆ ಒಪ್ಪಿಸುವ ಕೆಲಸ ಹುಡುಗರದ್ದಾಗಿತ್ತು.

ಬೀದಿ ಬದಿಗಳಲ್ಲೇ ಅಡ್ಡ ಮಾಡಿಕೊಂಡಿದ್ದ ಈ ತಾಯಿ-ಮಕ್ಕಳು ಅಲ್ಲಿಯೇ ದಂಧೆ ನಡೆಸುತ್ತಿದ್ದರು.

ಖಚಿತ ಮಾಹಿತಿ ಮೇರೆಗೆ ಈ ಅಡ್ಡೆಯ ಮೇಲೆ ದಾಳಿ ನಡೆಸಿದ ಪೊಲೀಸರು, ಐವರು ಯುವತಿಯರು ಸೇರಿ ಹತ್ತು ಮಂದಿಯನ್ನು ಬಂಧಿಸಿದ್ದಾರೆ. ಆರೋಪಿಗಳು ಬಳಸುತ್ತಿದ್ದ ಕಾರನ್ನೂ ವಶಕ್ಕೆ ಪಡೆಯಲಾಗಿದೆ. ಗ್ರಾಮೀಣ ಪ್ರದೇಶದ ಹುಡುಗಿಯರಿಗೆ ವಿವಿಧ ಆಸೆ ತೋರಿಸಿ ಅವರನ್ನು ಸೆಕ್ಸ್​ ದಂಧೆಗೆ ಬಳಸಿಕೊಳ್ಳಲಾಗುತ್ತಿತ್ತು.

ಹೀಗೆ ಹುಡುಗಿಯರನ್ನು ಕರೆದುಕೊಂಡು ಹೋಗುವಾಗ ಸಂದೇಹಗೊಂಡ ಕೆಲವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದರ ಆಧಾರದ ಮೇಲೆ ಪೊಲೀಸರು ದಾಳಿ ನಡೆಸಿ ಎಲ್ಲರನ್ನೂ ಬಂಧಿಸಿದ್ದಾರೆ.