ನ್ಯೂಸ್

ಮಕ್ಕಳಿಗೆ ಆಸ್ತಿ ಕೊಡಲು ಇಷ್ಟವಿಲ್ಲ, ಜಮೀನು ಮಾರಬಹುದೆ? ಸಾಲ ಪಡೆಯಬಹುದೆ?

ಪ್ರಶ್ನೆ: ನನಗೆ ಐದು ಮಂದಿ ಮಕ್ಕಳು. ಯಾರೂ ನಮ್ಮನ್ನು ನೋಡಿಕೊಳ್ಳುತ್ತಿಲ್ಲ. ಅವರ ಮೇಲೆ ಅಸಹ್ಯ ಹುಟ್ಟಿದೆ. ನಮ್ಮ ಜೀವನ ಆಧಾರಕ್ಕೆ ನಾವು ಪಿತ್ರಾರ್ಜಿತ ಆಸ್ತಿಯನ್ನು ಮಾರಬಹುದೇ? ಮಾರಬಹುದಾದರೆ ನಾವು ಏನು ಮಾಡಬೇಕು ಅಥವಾ ಆ ಜಮೀನಿನ ಮೇಲೆ ಸಾಲ ತಗೆದುಕೊಳ್ಳಬಹುದೆ ?

ಉತ್ತರ: ಪಿತ್ರಾರ್ಜಿತ ಆಸ್ತಿಯಲ್ಲಿ ನಿಮ್ಮಭಾಗವನ್ನು ನೀವು ಮಾರಬಹುದು. ಮೊದಲಿಗೆ ಆಸ್ತಿ ನಿಮ್ಮ ಪಿತ್ರಾರ್ಜಿತ ಆಸ್ತಿಯೇ ಅಥವಾ ನಿಮ್ಮ ಪ್ರತ್ಯೇಕ ಆಸ್ತಿಯೇ ಎನ್ನುವುದನ್ನು ದಾಖಲೆಗಳ ಪರಿಶೀಲನೆಯ ಮೂಲಕ ಖಚಿತ ಪಡಿಸಿಕೊಳ್ಳಿ.

ನಿಮ್ಮ ತಂದೆಯ ಮರಣಾ ನಂತರ ನಿಮ್ಮ ತಂದೆಯ ಸ್ವಯಾರ್ಜಿತ ಆಸ್ತಿ ನಿಮಗೆ ಬಂದಿದ್ದರೆ, ಅದು ನಿಮ್ಮ ಪ್ರತ್ಯೇಕ ಆಸ್ತಿ ಆಗುತ್ತದೆ. ಅದನ್ನು ವಿಲೇವಾರಿ ಮಾಡುವ ಸಂಪೂರ್ಣ ಹಕ್ಕು ನಿಮಗೆ ಇರುತ್ತದೆ.