ಉತ್ತರ: ಮೃತ ಹಿಂದೂ ಪುರುಷನ ಆಸ್ತಿ ಆತನ ಹೆಂಡತಿ ಮತ್ತು ಎಲ್ಲ ಮಕ್ಕಳಿಗೂ ಸಮಭಾಗ ಆಗುತ್ತದೆ. ನಿಮ್ಮ ತಾಯಿ ತನ್ನ ಆರನೇ ಒಂದು ಭಾಗದ ಆಸ್ತಿಯನ್ನು ಮಾತ್ರ ತನ್ನ ಇಷ್ಟ ಬಂದವರಿಗೆ ಕೊಡಬಹುದು. ಉಳಿದ ಎಲ್ಲ ಮಕ್ಕಳಿಗೂ ತಲಾ ಆರನೇ ಒಂದು ಭಾಗ ಇರುತ್ತದೆ.
ತೀರಿಕೊಂಡಿರುವ ಮಗಳ ಪಾಲು ಆಕೆಯ ಗಂಡ ಮತ್ತು ಮಕ್ಕಳಿಗೆ ಹೋಗುತ್ತದೆ. ತೀರಿಕೊಂಡಿರುವ ಮಗನ ಪಾಲಿನಲ್ಲಿ ಮತ್ತೆ ಆತನ ಹೆಂಡತಿ ಮತ್ತು ಮಕ್ಕಳಿಗೆ ಮತ್ತು ತಾಯಿಗೂ ಸಹ ಪಾಲು ಬರುತ್ತದೆ. ಯಾವಾಗ ಮದುವೆ ಆದರೂ ಆಸ್ತಿಯ ಹಕ್ಕಿಗೆ ಚ್ಯುತಿ ಬರುವುದಿಲ್ಲ.