ನ್ಯೂಸ್

ಆಸ್ತಿಯಲ್ಲಿ ಅಜ್ಜನಿಗೆ ಮೋಸ ಮಾಡಿದ್ರೆ ನೀವೀಗ ಪ್ರಶ್ನಿಸುವಂತಿಲ್ಲ... ಕಾನೂನು ಏನು ಹೇಳುತ್ತದೆ ನೋಡಿ...

ನಮ್ಮ ಅಜ್ಜನ ಒಂದು ಆಸ್ತಿಯನ್ನು ಅವರಿಗೆ ಮೋಸ ಮಾಡಿ, ಲೋನು ಕೊಡಿಸುತ್ತೇನೆ ಎಂದು ಸುಳ್ಳು ಹೇಳಿ ಬೇರೆಯವರು ತಮ್ಮ ಹೆಸರಿಗೆ ಅರವತ್ತು ವರ್ಷಗಳ ಹಿಂದೆ ಕ್ರಯ ಪತ್ರ ಮಾಡಿಸಿಕೊಂಡಿದ್ದಾರೆ. ನಮ್ಮ ತಾತ ಸತ್ತು ಇಪ್ಪತ್ತು ವರ್ಷ ಆಗಿದೆ. ನಮ್ಮ ಅಜ್ಜಿಯೂ ಇಲ್ಲ. ನಮ್ಮ ತಂದೆ ತೀರಿಕೊಂಡು ಐದು ವರ್ಷ ಆಗಿದೆ. ಈಗ ನಾನು, ಅಜ್ಜನ ಮೊಮ್ಮಗ ನನ್ನ ಹಕ್ಕು ಅಂತ ಹೇಳಿ ಕೇಸು ಹಾಕಿ ಆಸ್ತಿ ವಾಪಸ್ಸು ಪಡೆಯಬಹುದೇ?

ಉತ್ತರ: ಯಾವುದೇ ವ್ಯವಹಾರ ಮೋಸದಿಂದ ಆಗಿದ್ದರೆ, ಮೋಸದ ವಿಷಯ ತಿಳಿದ ಮೂರು ವರ್ಷದ ಒಳಗೆ ದಾವೆ ಹಾಕಬೇಕು.

ನಿಮ್ಮ ಅಜ್ಜ ತಮ್ಮ ಜೀವಿತ ಕಾಲದಲ್ಲಿ ಪ್ರಶ್ನೆ ಮಾಡದೇ ಇದ್ದದ್ದನ್ನು, ಕ್ರಯ ಆದ ಅರವತ್ತು ವರ್ಷಗಳ ನಂತರ, ಮತ್ತು ನಿಮ್ಮ ಅಜ್ಜ ತೀರಿಕೊಂಡ ಇಪ್ಪತ್ತು ವರ್ಷಗಳ ನಂತರ , ಪ್ರಶ್ನೆ ಮಾಡಲು ಆಗುವುದಿಲ್ಲ. ಲಿಮಿಟೇಷನ್‌ ಕಾಲಮಿತಿ ಕಾಯ್ದೆ ನಿಮಗೆ ಅಡ್ಡ ಬರುತ್ತದೆ. ವೃಥಾ ಕೇಸು ಹಾಕಿ ಹಣ ನಷ್ಟ ಮಾಡಿಕೊಳ್ಳಬೇಡಿ.