ನ್ಯೂಸ್

ಅವಳಿ ಮಕ್ಕಳ ಅಮ್ಮನಾದ ಬಾಲಿವುಡ್‌ ನಟಿ ಪ್ರೀತಿ ಜಿಂಟಾ- ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ ಖುಷಿಯ ಕ್ಷಣ

ಮುಂಬೈ: ಬಾಲಿವುಡ್‌ ನಟಿ ಪ್ರೀತಿ ಜಿಂಟಾ (46) ಮತ್ತು ಅವರ ಪತಿ ಜಿನ್‌ ಗುಡ್ಡೆಫಾನ್‌ ಅವರು ಅವಳಿ ಮಕ್ಕಳ ಅಪ್ಪ-ಅಮ್ಮನಾಗಿದ್ದಾರೆ. ಈ ಕುರಿತು ಪ್ರೀತಿ ಇನ್‌ಸ್ಟಾಗ್ರಾಮ್‌ನಲ್ಲಿ ಮಾಹಿತಿ ನೀಡಿದ್ದು, ತಮ್ಮ ಖುಷಿಯ ಕ್ಷಣಗಳನ್ನು ಹಂಚಿಕೊಂಡಿದ್ದಾರೆ.

ಇವರ ಮದುವೆ 2016ರಲ್ಲಿ ನಡೆದಿತ್ತು. ಮದುವೆಯ ಬಳಿಕ ಸಿನಿಮಾದಿಂದ ದೂರವೇ ಇರುವ ಪ್ರೀತಿ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಆಗಾಗ್ಗೆ ಕೆಲವು ಅನಿಸಿಕೆಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇದೀಗ ಅಮ್ಮನಾಗಿರುವ ಖುಷಿಯನ್ನು ಹಂಚಿಕೊಂಡಿದ್ದು, ತಮ್ಮ ಪತಿಯ ಜತೆಗಿರುವ ಫೋಟೋ ಶೇರ್ ಮಾಡಿದ್ದಾರೆ.

ಅಂದಹಾಗೆ ಈ ಅವಳಿ-ಜವಳಿ ಮಕ್ಕಳು ಹುಟ್ಟಿರುವುದು ಬಾಡಿಗೆ ತಾಯ್ತತನದ ಮೂಲಕ. ಅಂದರೆ ಪತಿ-ಪತ್ನಿಯ ವೀರ್ಯ ಮತ್ತು ಅಂಡಾಣುಗಳನ್ನು ತೆಗೆದು ಅದನ್ನು ಬೇರೊಬ್ಬ ಮಹಿಳೆಯ ಗರ್ಭದಲ್ಲಿ ಇರಿಸಿ ಆ ಮೂಲಕ ಮಗುವನ್ನು ಪಡೆಯುವ ಪ್ರಕ್ರಿಯೆ ಇದು. ಈ ಪ್ರಕ್ರಿಯೆ ಮೂಲಕ ಈ ದಂಪತಿ ಈಗ ಪಾಲಕರಾಗಿದ್ದಾರೆ.

‘ಇಂದು ನಾನು ನಿಮ್ಮೆಲ್ಲರೊಂದಿಗೆ ಸಿಹಿ ವಿಚಾರವೊಂದನ್ನು ಹಂಚಿಕೊಳ್ಳಲು ಬಯಸುತ್ತಿದ್ದೇನೆ. ನಮ್ಮ ಮನೆಗೆ ಅವಳಿ ಮಕ್ಕಳು ಬಂದಿದ್ದಾರೆ. ಅವರನ್ನು ಸ್ವಾಗತಿಸುತ್ತಿದ್ದೇನೆ. ಅವರ ಹೆಸರು ಜೈ ಜಿಂಟಾ ಗುಡೇನಾಫ್‌ ಮತ್ತು ಜಿಯಾ ಜಿಂಟಾ ಗುಡೇಫಾನ್‌ ಎಂದಿದ್ದಾರೆ. ಇವರನ್ನು ಸ್ವಾಗತಿಸಲು ನನಗೆ ತುಂಬಾ ಸಂತೋಷವಾಗುತ್ತಿದೆ. ಇದಕ್ಕಾಗಿ ಶ್ರಮಿಸಿರುವ ವೈದ್ಯರ ತಂಡ ಹಾಗೂ ಬಾಡಿಗೆ ತಾಯಿಯಾಗಲು ಮುಂದೆ ಬಂದ ಮಹಿಳೆಗೆ ಹೃತ್ಪೂರ್ವಕ ಧನ್ಯವಾದ ಎಂದಿದ್ದಾರೆ.