ನ್ಯೂಸ್

ಅಪ್ರಾಪ್ತೆಯ ಕೈಹಿಡಿದು ಪ್ರೀತಿ ವ್ಯಕ್ತಪಡಿಸಿದರೆ ಲೈಂಗಿಕ ದೌರ್ಜನ್ಯವಾಗತ್ತಾ? ಕೋರ್ಟ್​ ಏನು ಹೇಳಿದೆ ನೋಡಿ...

ಮುಂಬೈ: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಹೊತ್ತವನ ವಿಚಾರಣೆ ವೇಳೆ ಮುಂಬೈನ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ ಕಾಯ್ದೆಯ (ಪೋಕ್ಸೊ) ಕೋರ್ಟ್​ ಮಹತ್ವದ ಆದೇಶ ಹೊರಡಿಸಿದೆ.

ಅದೇನೆಂದರೆ ಬಾಲಕಿಯ ಕೈಯನ್ನು ಹಿಡಿದು ಪ್ರೀತಿಯನ್ನು ವ್ಯಕ್ತಪಡಿಸುವುದು ಲೈಂಗಿಕ ದೌರ್ಜನ್ಯ ಆಗಲಾರದು ಎಂದಿದೆ ಕೋರ್ಟ್​, 17 ವರ್ಷದ ಬಾಲಕಿಗೆ ಲೈಂಗಿಕ ದೌರ್ಜನ್ಯ ನೀಡಿರುವ ಆರೋಪದ ಮೇಲೆ ಬಂಧಿತನಾಗಿದ್ದ ವ್ಯಕ್ತಿಯೊಬ್ಬನು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಕೋರ್ಟ್​ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

2017ರಲ್ಲಿ 17 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪವನ್ನು 28 ವರ್ಷದ ಯುವಕ ಎದುರಿಸುತ್ತಿದ್ದ. ಆತನನ್ನು ಬಂಧಿಸಿ ಜೈಲಿನಲ್ಲಿ ಇಡಲಾಗಿತ್ತು. ಆದರೆ ಈತ ದುರುದ್ದೇಶಪೂರ್ವಕವಾಗಿ ಬಾಲಕಿಯ ಕೈಹಿಡಿದಿರುವ ಬಗ್ಗೆ ಯಾವುದೇ ದಾಖಲೆಗಳು ಇಲ್ಲ ಹಾಗೂ ಇದನ್ನು ಸಾಬೀತು ಮಾಡಲು ವಕೀಲರು ವಿಫಲರಾಗಿದ್ದಾರೆ. ಆದ್ದರಿಂದ ಬಾಲಕಿಯ ಮೇಲೆ ಪ್ರೀತಿ ತೋರಿಸುವುದಕ್ಕಾಗಿ ಅಕೆಯ ಕೈಯನ್ನು ಹಿಡಿದ ಮಾತ್ರಕ್ಕೆ ಇದು ಲೈಂಗಿಕ ದೌರ್ಜನ್ಯ ಆಗುವುದಿಲ್ಲ ಎಂದು ಕೋರ್ಟ್​ ಹೇಳಿ ಯುವಕನ ಬಿಡುಗಡೆಗೆ ಆದೇಶಿಸಿದೆ.