ನ್ಯೂಸ್

ಕೇಂದ್ರ ಸರ್ಕಾರ ಬ್ಯಾನ್​ ಮಾಡಿದ ಒಂದು ದಿನದ ಬಳಿಕ ಪಿಎಫ್​ಐ ತವರು ಕೇರಳದಿಂದ ಹೊರಟಿತು ಈ ಆದೇ

ತಿರುವನಂತಪುರ: ಕೇಂದ್ರ ಸರ್ಕಾರ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾವನ್ನು ನಿಷೇಧಿಸಿದ ಒಂದು ದಿನದ ಬಳಿಕ ಪಿಎಫ್​ಐ ತವರು ಎಂದು ಎನಿಸಿಕೊಂಡಿರುವ ಕೇರಳದಲ್ಲಿ ಮಹತ್ವದ ಆದೇಶವೊಂದು ಹೊರಟಿದೆ. ಕೇಂದ್ರ ಸರ್ಕಾರ ಇಡೀ ದೇಶಕ್ಕೆ ಅನ್ವಯ ಆಗುವಂತೆ ಪಿಎಫ್​ಐ ಹಾಗೂ ಅದರ ಅಂಗಸಂಸ್ಥೆಗಳನ್ನು ಬ್ಯಾನ್​ ಮಾಡಿದ್ದರೂ ಕೆಲವು ರಾಜ್ಯಗಳು ಅಧಿಕೃತವಾಗಿ ತಮ್ಮ ರಾಜ್ಯಕ್ಕೆ ಅನ್ವಯ ಆಗುವಂತೆ ಹೊಸದೊಂದು ಆದೇಶ ಹೊರಡಿಸಿದೆ. ಅದರಲ್ಲಿ ಕೇರಳವೂ ಒಂದು.

ಕೇರಳ ಸೇರಿದಂತೆ ತಮಿಳುನಾಡು ಹಾಗೂ ಮಹಾರಾಷ್ಟ್ರ ಸರ್ಕಾರಗಳು ಪಿಎಫ್​ಐ ಮತ್ತು ಕೇಂದ್ರ ಸರ್ಕಾರ ನಿಷೇಧಿಸಿರುವ ಎಂಟು ಸಂಸ್ಥೆಗಳನ್ನು ಕಾನೂನು ಬಾಹಿರ ಎಂದು ಘೋಷಿಸಿ ಆದೇಶ ಹೊರಡಿಸಿವೆ. ರಿಹ್ಯಾಬ್ ಇಂಡಿಯಾ ಫೌಂಡೇಶನ್, ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ, ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್, ನ್ಯಾಷನಲ್ ಕಾನ್ಫೆಡರೇಶನ್ ಆಫ್ ಹ್ಯೂಮನ್ ರೈಟ್ಸ್ ಆರ್ಗನೈಸೇಶನ್, ನ್ಯಾಷನಲ್ ವುಮೆನ್ಸ್ ಫ್ರಂಟ್, ಜೂನಿಯರ್ ಫ್ರಂಟ್, ಎಂಪವರ್ ಇಂಡಿಯಾ ಫೌಂಡೇಶನ್ ಮತ್ತು ರಿಹ್ಯಾಬ್ ಫೌಂಡೇಶನ್ ಕೇರಳವನ್ನು ಈ ರಾಜ್ಯಗಳು ನಿಷೇಧಿಸಿ ಆದೇಶ ಹೊರಡಿಸಿವೆ.

ಅಷ್ಟೇ ಅಲ್ಲದೇ, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮತ್ತು ಈ ಸಂಘಟನೆಯ ಹಲವಾರು ನಾಯಕರ ಟ್ವಿಟರ್ ಖಾತೆಯನ್ನು ಸಾಮಾಜಿಕ ಮಾಧ್ಯಮಗಳ ಕೇಂದ್ರ ಸರ್ಕಾರ ತೆಗೆದುಹಾಕಲಾಗುವ ಪ್ರಕ್ರಿಯೆಯಲ್ಲಿ ತೊಡಗಿದ್ದು, ಅದಕ್ಕೆ ಕೇರಳವೂ ಈ ಬಗ್ಗೆ ಆದೇಶದಲ್ಲಿ ಸೂಚನಿಸಿದೆ. ಪಿಎಫ್​ಐನ ಫೇಸ್​ಬುಕ್​ ಪೇಜ್​ ಮತ್ತು ಇನ್‌ಸ್ಟಾಗ್ರಾಮ್ ಪ್ರೊಫೈಲ್ ಸಹ ಇನ್ನು ಮುಂದೆ ಲಭ್ಯವಿರುವುದಿಲ್ಲ.

ಸಂಸ್ಥೆಯ ಖಾತೆ, @PFIofficial, ಸುಮಾರು 81,000 ಅನುಯಾಯಿಗಳನ್ನು ಹೊಂದಿತ್ತು. ಟ್ವಿಟರ್​ನಲ್ಲಿ ಪಿಎಫ್​ಐ ಅಧ್ಯಕ್ಷ OMA ಸಲಾಮ್ ಕೇವಲ 50,000 ಕ್ಕಿಂತ ಕಡಿಮೆ ಅನುಯಾಯಿಗಳನ್ನು ಹೊಂದಿದ್ದರು. ಸುಮಾರು 85 ಸಾವಿರ ಅನುಯಾಯಿಗಳನ್ನು ಹೊಂದಿದ್ದ ಪ್ರಧಾನ ಕಾರ್ಯದರ್ಶಿ ಅನಿಸ್ ಅಹ್ಮದ್ ಅವರ ಹ್ಯಾಂಡಲ್‌ಗಳನ್ನು ತಡೆಹಿಡೆಯಲಾಗಿದೆ. (ಏಜೆನ್ಸೀಸ್​)