ನವದೆಹಲಿ: ಕಥಕ್ ನ್ಯತ್ಯಕ್ಕೆ ತಮ್ಮದೇ ಆದ ಅಮೋಘ ಕೊಡುಗೆ ನೀಡಿದ, ಕಥಕ್ ನೃತ್ಯಲೋಕದ ದಂತಕಥೆ ಎಂದೇ ಬಿಂಬಿತರಾಗಿರುವ ನೃತ್ಯ ಪಟು ಪದ್ಮವಿಭೂಷಣ ಪಂಡಿತ್ ಬಿರ್ಜು ಮಹಾರಾಜ್ ಅವರು ಭಾನುವಾರ ತಡರಾತ್ರಿ ಕೊನೆಯುಸಿರೆಳೆದಿದ್ದಾರೆ.
ಅವರಿಗೆ 83 ವರ್ಷ ವಯಸ್ಸಾಗಿತ್ತು. ಮೊಮ್ಮಕ್ಕಳ ಜತೆ ಆಡುವಾಗ ಲಘು ಹೃದಯಾಘಾತವಾಗಿತ್ತು. ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಪ್ರಯೋಜನವಾಗಲಿಲ್ಲ ಎಂದು ಮೂಲಗಳು ಹೇಳಿವೆ. ಬಿರ್ಜೂ ಮಹಾರಾಜ್ ಕೆಲವು ದಿನಗಳಿಂದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರು. ಅವರಿಗೆ ಡಯಾಲಿಸಿಸ್ ಕೂಡ ಮಾಡಲಾಗಿತ್ತು. ಲಘು ಹೃದಯಾಘಾತದಿಂದ ಪ್ರಜ್ಞೆ ತಪ್ಪಿ ಬಿದ್ದರು ಎಂದು ಕುಟುಂಬಸ್ಥರು ಹೇಳಿದ್ದಾರೆ.
ಬಿರ್ಜು ಮಹಾರಾಜ್ ಅವರ ಮೂಲ ಹೆಸರು ಬ್ರಿಜ್ ಮೋಹನ್ ನಾಥ್ ಮಿಶ್ರಾ. ಅವರು 1937ರ ಫೆಬ್ರವರಿ 4ರಂದು ಉತ್ತರ ಪ್ರದೇಶದ ಹಂಡಿಯಾದಲ್ಲಿ ಜನಿಸಿದ್ದರು. ಉತ್ತರಪ್ರದೇಶದ ಲಖನೌ ಘರಾನಾದ ಅಚ್ಚನ್ ಮಹಾರಾಜ್ ಎಂದೇ ಜನಪ್ರಿಯರಾಗಿದ್ದ ಜಗನ್ನಾಥ ಮಹಾರಾಜ್ ಬಿರ್ಜೂ ಅವರ ತಂದೆ. ಬಿರ್ಜೂ ಅವರು 13ನೇ ವಯಸ್ಸಿನಲ್ಲಿ ನವದೆಹಲಿಯ ಸಂಗೀತ ಭಾರತಿಯಲ್ಲಿ ನೃತ್ಯ ಪ್ರಕಾರ ಕಲಿಸಲು ಪ್ರಾರಂಭಿಸಿದರು. ತಂದೆ ಅಚ್ಚನ್ ಮಹಾರಾಜ್ ಮತ್ತು ಚಿಕ್ಕಪ್ಪಂದಿರಾದ ಶಂಭು ಮತ್ತು ಲಚ್ಚು ಮಹಾರಾಜ್ ಕೂಡ ಕಥಕ್ ನೃತ್ಯಪಟುಗಳೇ. ಪಂಡಿತ್ ಬಿರ್ಜೂ ಅವರು ಬಾಲ್ಯದಿಂದಲೇ, ತಮ್ಮ ತಂದೆಯೊಂದಿಗೆ ಸೇರಿ ನೃತ್ಯಪ್ರದರ್ಶನ ನೀಡಲು ಪ್ರಾರಂಭಿಸಿದ್ದರು. ಹರೆಯದಲ್ಲೇ ನೃತ್ಯ ಕಲಿಸಲು ಪ್ರಾರಂಭಿಸಿದ ಗುರುಸ್ಥಾನಕ್ಕೆ ಏರಿದರು. ರಾಂಪುರ ನವಾಬನ ದರ್ಬಾರ್ನಲ್ಲೂ ನೃತ್ಯಪ್ರದರ್ಶನ ನೀಡಿದ್ದರು.
ಅದರೊಂದಿಗೆ ಅದ್ಭುತ ಗಾಯಕರೂ ಹೌದು. ಜತೆಗೆ ಸುಂದರವಾಗಿ ಡ್ರಮ್ ಬಾರಿಸುತ್ತಿದ್ದರು. ತಬಲಾ ಮತ್ತು ನಾಲ್ಗಳನ್ನು ವಿಶೇಷವಾಗಿ ನುಡಿಸುತ್ತಿದ್ದರು. ಯಾವುದೇ ವಿಧದ ಡ್ರಮ್ ಆದರೂ ಸರಿ ತುಂಬ ನಿಖರವಾಗಿ ಬಾರಿಸುತ್ತಿದ್ದರು. ಠುಮ್ರಿ, ದಾದ್ರಾ, ಭಜನ್ ಮತ್ತು ಗಝಲ್ಗಳನ್ನು ಸುಂದರವಾಗಿ ಪ್ರಸ್ತುತಪಡಿಸುತ್ತಿದ್ದರು.
ಬಿರ್ಜು ಅವರು ದೆಹಲಿಯ ಭಾರತೀಯ ಕಲಾ ಕೇಂದ್ರದಲ್ಲಿ ಮತ್ತು ಕಥಕ್ ಕೇಂದ್ರದಲ್ಲಿ (ಸಂಗೀತ ನಾಟಕ ಅಕಾಡೆಮಿಯ ಘಟಕ) ಅಧ್ಯಾಪಕರ ಮುಖ್ಯಸ್ಥರಾಗಿದ್ದರು ಮತ್ತು ನಿರ್ದೇಶಕರಾಗಿದ್ದರು. ಚಿಕ್ಕವಯಸ್ಸಿನಲ್ಲಿಯೇ ನೃತ್ಯ ಕಲಿಸಲು ಪ್ರಾರಂಭಿಸಿದ ಗುರುಸ್ಥಾನಕ್ಕೆ ಏರಿದರು. ರಾಂಪುರ ನವಾಬನ ದರ್ಬಾರ್ನಲ್ಲೂ ನೃತ್ಯಪ್ರದರ್ಶನ ನೀಡಿದ್ದರು.
ಬಿರ್ಜು ಅವರ ಕಲಾಶ್ರಮ ದೆಹಲಿಯಲ್ಲಿಯೂ ಇದೆ. ಅವರು ಸತ್ಯಜಿತ್ ರೇ ಅವರ ಶತ್ರಂಜ್ ಕೆ ಖಿಲಾರಿಯಲ್ಲಿ ಎರಡು ನೃತ್ಯದ ಸರಣಿಗಳಿಗೆ ಸಂಗೀತ ಸಂಯೋಜಿಸಿ ಹಾಡಿದ್ದರು. 2002 ರ ಕಾದಂಬರಿ ದೇವದಾಸ್‌ನ ಚಲನಚಿತ್ರ ಆವೃತ್ತಿಯಿಂದ ಕಾಹೆ ಛೇದ್ ಮೋಹೆ ಹಾಡಿಗೆ ನೃತ್ಯ ಸಂಯೋಜನೆ ಮಾಡಿ ಗಮನ ಸೆಳೆದಿದ್ದರು.