ನ್ಯೂಸ್

VIDEO: ಪಾಕ್‌ ಪತ್ರಕರ್ತನ ಪ್ರಶ್ನೆಗಳಿಗೆ ಉತ್ತರಿಸಿದ ಎಮ್ಮೆ- ನೀವಿಂಥ ಇಂಟರ್‌ವ್ಯೂ ನೋಡಿರಲಾರಿರಿ!

suchetana

ಲಾಹೋರ್‌: ಈದ್‌ ಸಂದರ್ಭದಲ್ಲಿ ಪಾಕಿಸ್ತಾನದ ಪತ್ರಕರ್ತನೊಬ್ಬ ಎಮ್ಮೆಯ ಸಂದರ್ಶನ ಮಾಡಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್‌ ಆಗಿದೆ. ನೋಡಿದ ಜನರು ಬಿದ್ದೂ ಬಿದ್ದೂ ನಗುವ ವಿಡಿಯೋ ಇದಾಗಿದೆ.

ಲಾಹೋರ್‌ನ ಪತ್ರಕರ್ತ ಅಮೀನ್ ಹಫೀಜ್ ಎಮ್ಮೆಯ ಸಂದರ್ಶನ ಮಾಡಿದ್ದಾರೆ. 28 ಸೆಕೆಂಡುಗಳ ವೀಡಿಯೋವನ್ನು ನೈಲಾ ಇನಾಯತ್ ಎಂಬುವವರು ಶೇರ್‌ ಮಾಡಿದ್ದು, ಸಹಸ್ರಾರು ಮಂದಿ ಕಮೆಂಟ್‌ ಮಾಡಿ ನಕ್ಕು ನಕ್ಕು ಸುಸ್ತಾಗಿದ್ದಾರೆ.

ಸಂದರ್ಶನದ ವೇಳೆ ಪತ್ರಕರ್ತ ಎಮ್ಮೆಯ ಬಳಿ ನೀವು ಲಾಹೋರ್ ಅನ್ನು ಹೇಗೆ ಇಷ್ಟಪಟ್ಟಿದ್ದೀರಿ? ಲಾಹೋರ್‌ನ ಆಹಾರ ನಿಮಗೆ ಇಷ್ಟವಾಯಿತೇ ಅಥವಾ ನಿಮ್ಮ ಹಳ್ಳಿಯಲ್ಲಿನ ಆಹಾರ ರುಚಿಯಾಗಿತ್ತೋ ಅಥವಾ ಲಾಹೋರ್‌ದೋ ಎಂದು ಪ್ರಶ್ನಿಸಿದ್ದಾನೆ. ಅಚ್ಚರಿ ಎಂದರೆ ಎಮ್ಮೆಗೆ ಅವನ ಪ್ರಶ್ನೆ ಅರ್ಥವಾದಂತೆ ಪ್ರಶ್ನೆ ಕೇಳಿದಾಗಲೆಲ್ಲಾ ಮ್ಯಾ... ಎಂದು ಉತ್ತರಿಸಿದೆ!
ಈ ಉತ್ತರ ಏನೆಂದು ಪತ್ರಕರ್ತ ಹಾಸ್ಯದ ರೂಪದಲ್ಲಿ ಹೇಳಿದ್ದಾರೆ. ಹೀಗೆ ಇವರ ನಡುವಿನ ಹಾಸ್ಯದ ಸಂವಾದ ಮನರಂಜಿಸುವಂತಿದೆ.

ನೀವೂ ನೋಡಿ ಈ ವಿಡಿಯೋ