ನ್ಯೂಸ್

ನನ್ನ ಗಂಡನಿಗೆ ಮೊದಲೇ ಮದ್ವೆಯಾಗಿದ್ದು ಗೊತ್ತೇ ಇರಲಿಲ್ಲ, ಮೋಸಕ್ಕೆ ಸಿಲುಕಿರುವ ನನಗೇನು ದಾರಿ?

ನನ್ನ ಪತಿಗೆ ಮೊದಲು ಮದುವೆ ಆಗಿದ್ದನ್ನು ಮುಚ್ಚಿಟ್ಟು ನನ್ನನ್ನು ಮತ್ತೆ ರಿಜಿಸ್ಟರ್‌ ಮದುವೆ ಆಗಿದ್ದಾರೆ. ಈಗ ನಾನು ಏನು ಮಾಡಬಹುದು ಎಂದು ತಿಳಿಸಿ.

ಉತ್ತರ: ಹಿಂದೂ ವಿವಾಹ ಕಾಯ್ದೆಯ ಕಲಂ ೫ರಂತೆ ಪತಿ ಅಥವಾ ಪತ್ನಿ ಜೀವಿತವಾಗಿರುವಾಗ ವಿಚ್ಛೇದನ ಪಡೆಯದೇ ಮತ್ತೊಂದು ಮದುವೆ ಆಗುವಂತಿಲ್ಲ.

ಹೀಗಾಗಿ ನೀವು ಕೂಡಲೇ ವಿವಾಹವನ್ನು ಶೂನ್ಯವೆಂದು ಘೋಷಿಸಬೇಕು ಎಂದು ನ್ಯಾಯಾಲಯವನ್ನು ಕೇಳಿಕೊಂಡು ಕಲಂ 11ರಲ್ಲಿ ಪ್ರಕರಣವನ್ನು ದಾಖಲಿಸಿ.

ನಿಮ್ಮ ಪತಿಗೆ ಮೊದಲೇ ಮದುವೆ ಆಗಿತ್ತು ಎನ್ನುವುದನ್ನು ಸಾಬೀತು ಪಡಿಸಿದರೆ ನಿಮ್ಮ ಈ ಮದುವೆಯನ್ನು ಶೂನ್ಯವೆಂಬ ಹಕ್ಕು ಘೋಷಣೆಯ ಆದೇಶವನ್ನು ನ್ಯಾಯಾಲಯ ಕೊಡುತ್ತದೆ.

ಕಾನೂನಿಗೆ ಸಂಬಂಧಿಸಿದ ಇತರ ಪ್ರಶ್ನೋತ್ತರಗಳಿಗಾಗಿ ಈ ಲಿಂಕ್​ ಕ್ಲಿಕ್ಕಿಸಿ