ಕಡೆಯಲ್ಲಿ ಸಾಯುವಾಗ ನಮ್ಮ ಕಡೆಯ ತಂಗಿಯ ಮನೆಯಲ್ಲಿ ಇದ್ದರು. ಅವಳು, ಅವರ ಸಹಿ ಮಾಡಿಸಿಕೊಂಡು ಖಾತೆ ಪಹಣಿಯಲ್ಲಿ ತನ್ನ ಹೆಸರನ್ನು ತಾಯಿ ಬದುಕಿದ್ದಾಗಲೇ ಮಾಡಿಸಿಕೊಂಡಿದ್ದಾಳೆ. ಈಗ ನಮ್ಮ ತಾಯಿ ತೀರಿಕೊಂಡು ಎರಡು ವರ್ಷ ಆಗಿದೆ.
ಖಾತೆ ನನ್ನ ಹೆಸರಿಗಿದೆ. ಅಮ್ಮ ಒಪ್ಪಿದ್ದಾರೆ, ನಿಮಗೆ ಅದರಲ್ಲಿ ಭಾಗ ಇಲ್ಲ ಎನ್ನುತ್ತಾಳೆ. ಆಸ್ತಿಯ ಬೆಲೆ ತುಂಬಾ ಜಾಸ್ತಿ ಇದೆ. ಈಗ ನಮಗೆ ಹಕ್ಕು ಇಲ್ಲವೇ?
ಉತ್ತರ: ನಿಮ್ಮ ತಾಯಿ ಸಾಯುವಾಗ ಉಳಿಸಿರುವ ಆಸ್ತಿಯಲ್ಲಿ ತಾಯಿಯ ಮೂವರು ಮಕ್ಕಳಿಗೂ ಸಮಾನ ಹಕ್ಕು ಇರುತ್ತದೆ. ನಿಮಗೆಲ್ಲ ತಲಾ ಮೂರನೇ ಒಂದು ಭಾಗ ಬರುತ್ತದೆ. ನೀವು ಧೈರ್ಯವಾಗಿ ವಿಭಾಗದ ದಾವೆ ಹಾಕಿ. ಖಾತೆ ಪಹಣಿಯಲ್ಲಿ ಒಬ್ಬರ ಹೆಸರು ಬಂದ ಮಾತ್ರಕ್ಕೆ ಅವರೇ ಆಸ್ತಿಯ ಮಾಲೀಕರಾಗುವುದಿಲ್ಲ.
ಆಸ್ತಿಯ ಹಕ್ಕು ವಾರಸಾ ಕಾಯ್ದೆಯ ಪ್ರಕಾರ ತೀರ್ಮಾನವಾಗುತ್ತದೆ, ರೆವೆನ್ಯೂ ದಾಖಲೆಗಳಲ್ಲಿರುವ ಮಾಹಿತಿಯ ಆಧಾರದ ಮೇಲೆ ಆಗುವುದಿಲ್ಲ, ನಿಮಗೆ ಹಣಕಾಸು ಖರ್ಚು ಮಾಡಲು ಕಷ್ಟವಾದರೆ ನಿಮ್ಮ ತಾಲೂಕಿನ ಉಚಿತ ಕಾನೂನು ಸೇವಾ ಕೇಂದ್ರವನ್ನು ಸಂಪರ್ಕಿಸಿ.
ಒಂದು ರೂಪಾಯಿಯ ಖರ್ಚೂ ಇಲ್ಲದೇ ವಕೀಲರ ಸಹಾಯವನ್ನೂ ಕೋರ್ಟು ಖರ್ಚನ್ನೂ ಅವರೇ ಮಾಡಿ ನಿಮಗೆ ಆಸ್ತಿಯಲ್ಲಿ ಭಾಗ ಸಿಗುವಂತೆ ಮಾಡುತ್ತಾರೆ.
ಸೂಚನೆ: ಕಾನೂನಿಗೆ ಸಂಬಂಧಿಸಿದ ನಿಮ್ಮ ಪ್ರಶ್ನೆಗಳನ್ನು lalitha.vijayavani@gmail.com ಗೆ ಕಳುಹಿಸಬಹುದು. (ಕೋರ್ಟ್‌ಗಳಲ್ಲಿ ಇತ್ಯರ್ಥಕ್ಕೆ ಬಾಕಿ ಇರುವ ಪ್ರಕರಣಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ದಯವಿಟ್ಟು ಕೇಳಬೇಡಿ)