ನ್ಯೂಸ್

ವಿಚ್ಛೇದನ ಕೊಟ್ಟ ನಂತರ ದಿಢೀರ್​ ಮರುಮದುವೆಯಾಗಲು ಬರುವುದಿಲ್ಲ...

ನಾನು ನನ್ನ ಪತಿಯಿಂದ ವಿಚ್ಛೇದನ ಪಡೆದಿದ್ದೇನೆ. ನನ್ನ ಪೂರ್ವ ಪತಿ ಅಪೀಲು ಹಾಕುವುದಿಲ್ಲ ಎನ್ನುವ ನಂಬಿಕೆ ನನಗಿದೆ.

ಈಗ ನನಗೆ ಮತ್ತೊಬ್ಬರ ಜೊತೆ ಮದುವೆ ಆಗ ಬೇಕಿದೆ. ನಾನು ಎಷ್ಟು ದಿನ ಕಾಯ ಬೇಕು?

ಉತ್ತರ:- ಹಿಂದೂ ವಿವಾಹ ಕಾಯ್ದೆಯ ಕಲಂ 15ರಂತೆ , ವಿಚ್ಛೇದನದ ಆದೇಶ ಆದ ನಂತರ , ಆ ಆದೇಶದ ಮೇಲೆ ಮೇಲ್ಮನವಿ (ಅಪೀಲ್​) ಹಾಕಲು ಇರುವ, ಅಪೀಲಿನ ಗಡುವು ತೀರುವವರೆಗೆ ನೀವು ಮರುಮದುವೆ ಆಗುವಂತಿಲ್ಲ.

ಹಾಗೂ ಒಂದು ವೇಳೆ ನಿಮ್ಮ ಪೂರ್ವ ಪತಿ ಅಪೀಲು ದಾಖಲು ಮಾಡಿದರೆ, ಆ ಅಪೀಲು ವಜಾ ಆಗುವವರೆಗೆ ನೀವು

ಮರುಮದುವೆ ಆಗುವಂತಿಲ್ಲ. ಒಂದುವೇಳೆ ನಿಮ್ಮ ಪತಿ ನಿಗದಿತ ಕಾಲಮಿತಿಯ ಒಳಗೆ ಅಪೀಲೇ ದಾಖಲು ಮಾಡದೇ ಇದ್ದರೆ, ಆಗ ನೀವು ಮರುಮದುವೆ ಆಗಬಹುದು.

ಯಾವುದಕ್ಕೂ ನೀವು ನಿಮ್ಮ ವಿಚ್ಛೇದನದ ಪ್ರಕರಣದ ಸಂಖ್ಯೆಯನ್ನು ಹಾಕಿ, ಆ ಪ್ರಕರಣದ ಆದೇಶದ ಮೇಲೆ ಅಪೀಲು ದಾಖಲಾಗಿದೆಯೇ ಇಲ್ಲವೇ ಎನ್ನುವುದನ್ನು ಕಂಪ್ಯೂಟರಿನ ಸಹಾಯದಿಂದ ಪರೀಕ್ಷಿಸಿ , ಆ ನಂತರ ಮರುಮದುವೆಯ ಬಗ್ಗೆ ತೀರ್ಮಾನ ತೆಗೆದುಕೊಳ್ಳುವುದು ಒಳ್ಳೆಯದು.

ಸೂಚನೆ: ಕಾನೂನಿಗೆ ಸಂಬಂಧಿಸಿದ ನಿಮ್ಮ ಪ್ರಶ್ನೆಗಳನ್ನು susheelasarathi@yahoo.co.in ಅಥವಾ lalitha.vijayavani@gmail.com ಗೆ ಕಳುಹಿಸಬಹುದು. (ಕೋರ್ಟ್‌ಗಳಲ್ಲಿ ಇತ್ಯರ್ಥಕ್ಕೆ ಬಾಕಿ ಇರುವ ಪ್ರಕರಣಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ದಯವಿಟ್ಟು ಕೇಳಬೇಡಿ)

ನ್ಯಾಯದೇವತೆ ಅಂಕಣದ ಹಿಂದಿನ ಪ್ರಶ್ನೋತ್ತರಗಳನ್ನು ನೋಡಲು ಕ್ಲಿಕ್ಕಿಸಿ.