ನ್ಯೂಸ್

ತಾಯಿ ಕಡೆಯಿಂದ ಬಂದ ಆಸ್ತಿ ಕಾಣಿಕೆಯೊ- ಪಿತ್ರಾರ್ಜಿತವೊ? ಮಕ್ಕಳಿಗೆ ಹಂಚಬಹುದಾ?

suchetana
ಪ್ರಶ್ನೆ: ತಾಯಿ ಕಡೆಯಿಂದ ನನಗೆ ಆಸ್ತಿ ಕಾಣಿಕೆಯಾಗಿ ಬಂದಿದೆ. ಇದು ಪಿತ್ರಾರ್ಜಿತ ಆಸ್ತಿಯೇ ಅಥವಾ ಕಾಣಿಕೆಯೋ? ತಿಳಿಸಿ. ಅದನ್ನು ನಾನು ನನ್ನ ಮಕ್ಕಳಿಗೆ ಹೇಗೆ ಹಂಚಬೇಕು ತಿಳಿಸಿ.

ಉತ್ತರ: ನಿಮ್ಮ ತಾಯಿ ಕಡೆಯಿಂದ ನಿಮಗೆ ಯಾವುದೇ ರೂಪದಲ್ಲಿ ಆಸ್ತಿ ಬಂದಿದ್ದರೂ ಅದು ನಿಮ್ಮ ವೈಯಕ್ತಿಕ, ಪ್ರತ್ಯೇಕ ಆಸ್ತಿ ಆಗುತ್ತದೆ. ಅದನ್ನು ನೀವು ನಿಮ್ಮ ಜೀವಿತ ಕಾಲದಲ್ಲಿ ಯಾರಿಗೆ ಬೇಕಾದರೂ ಕ್ರಯ ಅಥವಾ ದಾನ ಮಾಡಬಹುದು.

ನೀವು ಪರಭಾರೆ ಮಾಡದೇ ಹಾಗೇ ಆಸ್ತಿ ಉಳಿಸಿ ತೀರಿಕೊಂಡರೆ, ಆಗ ನಿಮ್ಮ ತಾಯಿಯಿಂದ ನಿಮಗೆ ಬಂದ ಆಸ್ತಿ ನಿಮ್ಮ ಹೆಂಡತಿ ಮತ್ತು ನಿಮ್ಮ ಮಕ್ಕಳಿಗೆ ಸಮವಾಗಿ ಪಾಲಾಗುತ್ತದೆ. ಬೇಕಿದ್ದರೆ ನೀವು ಈಗಲೇ ನಿಮ್ಮ ತಾಯಿಯಿಂದ ನಿಮಗೆ ಬಂದ ಈ ಆಸ್ತಿಯನ್ನು ಯಾರಿಗೆ ಬೇಕೋ ಅವರಿಗೆ ವಿಲ್ ಸಹ ಮಾಡಬಹುದು.

ಸೂಚನೆ: ಕಾನೂನಿಗೆ ಸಂಬಂಧಿಸಿದ ನಿಮ್ಮ ಪ್ರಶ್ನೆಗಳನ್ನು lalitha.vijayavani@gmail.com ಗೆ ಕಳುಹಿಸಬಹುದು. (ಕೋರ್ಟ್‌ಗಳಲ್ಲಿ ಇತ್ಯರ್ಥಕ್ಕೆ ಬಾಕಿ ಇರುವ ಪ್ರಕರಣಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ದಯವಿಟ್ಟು ಕೇಳಬೇಡಿ)

ಕಾನೂನಿಗೆ ಸಂಬಂಧಿಸಿದ ಇತರ ಪ್ರಶ್ನೋತ್ತರಗಳಿಗಾಗಿ https://www.vijayavani.net/ ಗೆ ಭೇಟಿ ಕೊಟ್ಟು ಅಂಕಣ ವಿಭಾಗದಲ್ಲಿ ನ್ಯಾಯದೇವತೆ ಸೆಕ್ಷನ್​ ಮೇಲೆ ಕ್ಲಿಕ್​ ಮಾಡಿ.

.