ನ್ಯೂಸ್

ವಿಚ್ಛೇದನ ಪಡೆಯಲು ಸರ್ಕಾರಿ ನೌಕರರು ಇಲಾಖೆಯ ಒಪ್ಪಿಗೆ ಪಡೆಯಬೇಕಾಗುತ್ತದೆಯೆ?

suchetana
ಪ್ರಶ್ನೆ: ನಾನು ಮತ್ತು ನನ್ನ ಪತ್ನಿ ಇಬ್ಬರೂ ಸರ್ಕಾರೀ ನೌಕರಿಯಲ್ಲಿ ಇದ್ದೇವೆ. ಇಬ್ಬರೂ ಶಿಕ್ಷಕರೇ. ನಾವಿಬ್ಬರೂ ಒಪ್ಪಿ ವಿಚ್ಛೇದನಕ್ಕೆ ಅರ್ಜಿ ಹಾಕಿದ್ದೇವೆ. ಇದಕ್ಕೆ ಇಲಾಖೆಯ ಒಪ್ಪಿಗೆ ಪಡೆಯಬೇಕೇ?

ಉತ್ತರ: ಮದುವೆ, ವಿಚ್ಛೇದನ ಇವೆರಡೂ ನಿಮ್ಮ ವೈಯಕ್ತಿಕ ವಿಷಯ. ಇದಕ್ಕೆ ಇಲಾಖೆಯ ಸಮ್ಮತಿ ಬೇಕಿಲ್ಲ. ನೀವಿಬ್ಬರೂ ಒಪ್ಪಿ ವಿಚ್ಛೇದನ ಪಡೆಯುವುದಕ್ಕೆ ಇಲಾಖೆಯ ಒಪ್ಪಿಗೆ ಬೇಕಾಗಿಲ್ಲ.

ಆದರೆ, ವಿಚ್ಛೇದನದ ನಂತರ ದಾಖಲೆಗಳನ್ನು ಕೊಟ್ಟು , ಇಲಾಖಾ ದಾಖಲೆಗಳಲ್ಲಿ ವಿಚ್ಛೇದಿತ ಪತಿಯ/ಪತ್ನಿಯ ಹೆಸರನ್ನು ತೆಗೆಸಿಬಿಡಿ. ನಾಮಿನೇಷನ್ ಮಾಡಿದ್ದರೂ ತೆಗೆಸಬಹುದು.

(ನ್ಯಾಯದೇವತೆ ಅಂಕಣದ ಹಿಂದಿನ ಪ್ರಶ್ನೋತ್ತರಗಳನ್ನು ನೋಡಲು vijayavani.net ಕ್ಲಿಕ್ಕಿಸಿ. ಅಲ್ಲಿ ಅಂಕಣ ಕಾಲಮ್‌ನಲ್ಲಿ ನ್ಯಾಯದೇವತೆ ಎಂದು ಇದ್ದು ಅದರ ಮೇಲೆ ಕ್ಲಿಕ್‌ ಮಾಡಿದರೆ ಎಲ್ಲವೂ ಲಭ್ಯ.)

ಸೂಚನೆ: ಕಾನೂನಿಗೆ ಸಂಬಂಧಿಸಿದ ನಿಮ್ಮ ಪ್ರಶ್ನೆಗಳನ್ನು susheelasarathi@yahoo.co.in ಅಥವಾ lalitha.vijayavani@gmail.com ಗೆ ಕಳುಹಿಸಬಹುದು. (ಕೋರ್ಟ್‌ಗಳಲ್ಲಿ ಇತ್ಯರ್ಥಕ್ಕೆ  ಬಾಕಿ ಇರುವ ಪ್ರಕರಣಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ದಯವಿಟ್ಟು ಕೇಳಬೇಡಿ)