ನ್ಯೂಸ್

ಕಸದ ತೊಟ್ಟಿಯಲ್ಲಿ ಮುದ್ದುಮೊಗದ ಕಂದ: ಕರಳುಬಳ್ಳಿ ಸಹಿತ ಬಿಟ್ಟುಹೋದ ದುರ್ಗದ ಅಮ್ಮ!

ಚಿತ್ರದುರ್ಗ: ಹೆಣ್ಣುಮಗು ಎಂಬ ಕಾರಣಕ್ಕೆ ಆಗತಾನೇ ಹುಟ್ಟಿದ ಕರುಳಕುಡಿಯನ್ನೇ ಕಸದ ತೊಟ್ಟಿಯಲ್ಲಿ ಎಸೆದು ಹೋಗಿರುವ ಅಮಾನವೀಯ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ.

ಚಳ್ಳಕೆರೆ ಪಟ್ಟಣದ ಹೊರವಲಯದಲ್ಲಿ ಈ ಘಟನೆ ನಡೆದಿದೆ. ಕಸದ ತೊಟ್ಟಿಯಲ್ಲಿ ಮಗು ಅಳುವ ಶಬ್ದ ಕೇಳಿದ ಸ್ಥಳೀಯರು ಬಂದು ನೋಡಿದಾಗ ಮಗು ಕಂಡಿದೆ. ಕೂಡಲೇ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಅಧಿಕಾರಿಗಳು ಬಂದು ಮಗುವನ್ನು ರಕ್ಷಿಸಿದ್ದಾರೆ.

ಕರಳುಬಳ್ಳಿ ಸಮೇತ ಈ ಮಗು ಪತ್ತೆಯಾಗಿದೆ. ಸ್ಥಳಕ್ಕೆ ಶಿಶು ಅಭಿವೃದ್ಧಿ ಅಧಿಕಾರಿಗಳ ಜತೆ ವೈದ್ಯರು ಕೂಡ ಭೇಟಿ ನೀಡಿದ್ದರು. ಶಿಶುವಿನ ಕರಳುಬಳ್ಳಿ ತೆಗೆದು ಮಗುವನ್ನು ಶುಚಿಗೊಳಿಸಿದರು ವೈದ್ಯರು. ರಕ್ತಸಿಕ್ತವಾಗಿದ್ದ ಮಗುವನ್ನು ಶುಚಿಗೊಳಿಸಿ ಅದನ್ನು ಆಸ್ಪತ್ರೆಯಲ್ಲಿ ದಾಖಲು ಮಾಡಿದ್ದಾರೆ.