ನ್ಯೂಸ್

VIDEO: ನಸುಕಿನಲ್ಲಿ ತಾಯ್ನಾಡು ಸೇರಿದ ನವೀನ್‌ ಮೃತದೇಹ: ಸಿಎಂ ಬೊಮ್ಮಾಯಿ, ಸಚಿವ ಸುಧಾಕರ ಅಂತಿಮ ನಮನ

ಬೆಂಗಳೂರು: ಇದೇ ತಿಂಗಳ 2ನೇ ತಾರೀಖಿನಂದು ಯೂಕ್ರೇನ್‌ನಲ್ಲಿ ಬಾಂಬ್‌ಗೆ ಬಲಿಯಾದ ಹಾವೇರಿ ಜಿಲ್ಲೆ ಚಳಗೇರಿ ಗ್ರಾಮದ ಯುವಕ ನವೀನ್‌ನ ಮೃತದೇಹ ನಸುಕಿನ 3.30ರ ಸುಮಾರಿಗೆ ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ಆಗಮಿಸಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಸೇರಿದಂತೆ ಕೆಲ ಗಣ್ಯರು ನವೀನ್‌ನ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು.

ಶಾಸಕ ಅರುಣ್ ಕುಮಾರ ನೇತೃತ್ವದಲ್ಲಿ ನವೀನ್‌ನ ಮೃತದೇಹವನ್ನು ಸಹೋದರ ಹರ್ಷ ಹಾಗೂ ಕುಟುಂಬಸ್ಥರು ಪಡೆಯಲಿದ್ದಾರೆ.

ರಾಣೆಬೇನ್ನೂರು ತಾಲ್ಲೂಕಿನ ಚಳಗೇರಿ ಗ್ರಾಮಕ್ಕೆ ಬೆಳಗ್ಗೆ ಸುಮಾರು 10 ಗಂಟೆಗೆ ಪಾರ್ಥಿವ ಶರೀರ ತರಲಾಗುವುದು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಪಾರ್ಥಿವ ಶರೀರ ಮೆರವಣಿಗೆ ನಡೆಯಲಿದೆ ಎಂದು ಮೃತ ನವೀನ್ ತಂದೆ ಶೇಖರಗೌಡ ಅವರು ದಿಗ್ವಿಜಯ ನ್ಯೂಸ್‌ಗೆ ಮಾಹಿತಿ ನೀಡಿದ್ದಾರೆ.