ನ್ಯೂಸ್

VIDEO: ಗುಂಡಿನ ದಾಳಿಯಲ್ಲಿ ಬರ್ಬರ 'ಹತ್ಯೆ'ಯಾಗಿದ್ದ ಕುಸ್ತಿಪಟು ನಿಶಾ ಜಾಲತಾಣದಲ್ಲಿ ಪ್ರತ್ಯಕ್ಷ: ಪ್ಲೀಸ್ ನನ್ನ ನಂಬಿ ಎಂದ ತಾರೆ...

ಹರಿಯಾಣ: ಹರಿಯಾಣದ ಅಂತಾರಾಷ್ಟ್ರೀಯ ಮಟ್ಟದ ಕುಸ್ತೀಪಟು ನಿಶಾ ದಹಿಯಾ ಹಾಗೂ ಅವರ ಕುಟುಂಬದ ಮೇಲೆ ಎರಡು ದಿನಗಳ ಹಿಂದೆ ಭಯಾನಕ ಗುಂಡಿನ ದಾಳಿ ನಡೆದಿತ್ತು. ಈ ಸಮಯದಲ್ಲಿ ನಿಶಾ ಮತ್ತು ಸಹೋದರ ಮೃತಪಟ್ಟಿದ್ದರೆ, ಕುಟುಂಬಸ್ಥರು ಗಂಭೀರವಾಗಿ ಗಾಯಗೊಂಡಿದ್ದರು.

ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿತ್ತು. ಹತ್ಯೆಯಾಗಿರುವ ನಿಶಾ ಅವರ ಫೋಟೋ ಸಹಿತ ಮಾಧ್ಯಮಗಳಲ್ಲಿ ವರದಿಯಾಗಿದ್ದವು. ಆದರೆ ಇದೀಗ ನಿಶಾ ದಹಿಯಾ ಜಾಲತಾಣದಲ್ಲಿ ಪ್ರತ್ಯಕ್ಷರಾಗಿ ಅಚ್ಚರಿ ಮೂಡಿಸಿದ್ದಾರೆ. ನಿಶಾ ದಹಿಯಾ ಗುಂಡಿನ ದಾಳಿಯಲ್ಲಿ ಸತ್ತಿದ್ದು ನಿಜ. ಆಕೆ ರಾಷ್ಟ್ರೀಯ ಮಟ್ಟದ ಕುಸ್ತಿ ಪಟು ಕೂಡ ಹೌದು. ಆದರೆ ಆಕೆ ನಾನಲ್ಲ ಎಂದಿದ್ದಾರೆ!

ಇದರಿಂದ ಜನರು ಗಲಿಬಿಲಿಗೊಂಡಿದ್ದಂತೂ ನಿಜ. ಅಷ್ಟಕ್ಕೂ ಆಗಿರುವುದು ಏನೆಂದರೆ ಹರಿಯಾಣದಲ್ಲಿ ಇಬ್ಬರು ನಿಶಾ ದಹಿಯಾ ಇದ್ದು, ಇಬ್ಬರೂ ಅಂತಾರಾಷ್ಟ್ರೀಯ ಮಟ್ಟದ ಕುಸ್ತಿಪಟುಗಳೇ ಆಗಿರುವುದು ಇಷ್ಟೆಲ್ಲಾ ಗೊಂದಲಕ್ಕೆ ಕಾರಣವಾಗಿದೆ. ಬದುಕಿರುವ ನಿಶಾ ದಹಿಯಾ ಅವರ ಫೋಟೋಗಳನ್ನು ಹಾಕಿ ಅವರ ಹತ್ಯೆ ಎಂದು ಬರೆಯಲಾಗಿತ್ತು.

ಅದಕ್ಕೆ ಅವರು, 'ಪ್ಲೀಸ್‌ ಈವಿಷಯ ನಂಬಿ, ಸರಿಯಾಗಿ ಕೇಳಿ. ನನ್ನ ಮೇಲೆ ಗುಂಡಿನ ದಾಳಿ ಆಗಿಲ್ಲ. ನನ್ನ ಕುಟುಂಬದ ಜತೆ ಸುರಕ್ಷಿತವಾಗಿದ್ದೇನೆ. ರಾಷ್ಟ್ರೀಯ ಮಟ್ಟದ ಕ್ರೀಡಾಕೂಟಕ್ಕಾಗಿ ಸದ್ಯ ಗೊಂಡಾಕ್ಕೆ ಬಂದಿದ್ದೇನೆ. ಗುಂಡಿನಲ್ಲಿ ಮೃತಪಟ್ಟಿದ್ದು, ಯು-23 ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕಂಚು ಗೆದ್ದವರು. ಅವರು ನಾನಲ್ಲ. ಇಬ್ಬರ ಹೆಸರೂ ಒಂದೇ ಆಗಿದ್ದ ಕಾರಣ ಈ ಗೊಂದವಾಗಿದೆ. ಅದ್ದರಿಂದ ಸತ್ತಿದ್ದು ನಾನಲ್ಲ’ ಎಂದಿದ್ದಾರೆ.

ನಿಶಾ ಮಾತನಾಡಿರುವ ವಿಡಿಯೋ ಇಲ್ಲಿದೆ: