ನ್ಯೂಸ್

ಸುಂದರ ಆಂಟಿಯ ಮಾತಿಗೆ ಮರುಳಾದ 73ರ ಅಜ್ಜ ಮದ್ವೆನೂ ಆದ... ರಾತ್ರಿ ನಡೆಯಿತೊಂದು ದುರಂತ!

ಮುಂಬೈ: ಮದುವೆಯಾಗುವ ವಿಷಯದಲ್ಲಿ ಪುರುಷರು ಮಹಿಳೆಯರನ್ನು ಮೋಸ ಮಾಡುವುದು ಹೆಚ್ಚು. ಆದರೆ ಇಲ್ಲೊಂದು ಪ್ರಕರಣ ಉಲ್ಟಾ ಆಗಿದೆ. ವಿಚಿತ್ರ ಎಂದರೆ ಈ ಪ್ರಕರಣದಲ್ಲಿ ಮಹಿಳೆಯೊಬ್ಬಳು 73 ವರ್ಷದ ವೃದ್ಧರೊಬ್ಬರನ್ನು ಮದುವೆಯ ಹೆಸರಿನಲ್ಲಿ ಮೋಸ ಮಾಡಿದ್ದಾಳೆ!

ಈ ಘಟನೆ ನಡೆದಿರುವುದು ಮುಂಬೈನಲ್ಲಿ. 73 ವರ್ಷದ ಇಳಿಸಂಜೆಯಲ್ಲಿ ತನಗೊಂದು ಆಸರೆ ಬೇಕೆಂದು ಜೆರೋನ್ ಡಿಸೋಜಾ ಅಂಧೇರಿ ಎಂಬುವವರು ಅಂದುಕೊಂಡಿದ್ದರು. ಇವರು ಕೋಟ್ಯಧೀಶ್ವರರು. ಇಷ್ಟೊಂದು ಕೋಟಿ ಕೋಟಿ ಆಸ್ತಿ ಇಟ್ಟುಕೊಂಡರೂ ತಮಗೊಂದು ಸಂಗಾತಿ ಇಲ್ಲವಲ್ಲ ಎಂಬ ಬೇಸರ ಇವರದ್ದಾಗಿತ್ತು.

ಅಷ್ಟೊತ್ತಿಗಾಗಲೇ ಶಾಲಿನಿ ಸಿಂಗ್‌ ಎಂಬ ಮಹಿಳೆಯ ಪರಿಚಯವಾಗಿದೆ ಇವರಿಗೆ. ಇವರ ಇಂಗಿತವನ್ನು ನೋಡಿದ ಆ ಮಹಿಳೆ ಖತರ್ನಾಕ್‌ ಪ್ಲ್ಯಾನ್‌ ಮಾಡಿದ್ದಾಳೆ. ನಾನು ನಿಮಗೆ ಆಸರೆ ಕೊಡುತ್ತೇನೆ. ನಿಮ್ಮ ಇಳಿವಯಸ್ಸಿನಲ್ಲಿ ನಾನು ಸಾಥ್‌ ನೀಡುತ್ತೇನೆ. ನನಗೂ ಮದುವೆಯಾಗಿಲ್ಲ, ನಿಮ್ಮನ್ನು ಮದುವೆಯಾಗಿ ನಿಮ್ಮ ಪತ್ನಿಯಾಗಿ ಸೇವೆ ಸಲ್ಲಿಸುತ್ತೇನೆ ಅಂದಿದ್ದಾಳೆ.

ಆಕೆಯನ್ನು ನೋಡಿದ ಡಿಸೋಜಾ ಅವರಿಗೆ ತಮಗೊಂದು ಇಷ್ಟು ಸುಂದರ ಹೆಣ್ಣು ಆಸರೆಯಾಗಿ ಬರುತ್ತಿರುವುದನ್ನು ಕಂಡು ಖುಷಿಯಾಗಿದೆ. ತಮ್ಮ ಆಸೆ ಈಡೇರಿತು ಎಂದುಕೊಂಡ ಅವರು, ಮದುವೆಗೆ ಒಪ್ಪಿಕೊಂಡಿದ್ದಾರೆ. ಹೀಗೆ ಇಬ್ಬರ ಮದುವೆಯೂ ಆಗಿದೆ.

ಕೆಲ ದಿನ ಅವರ ಜತೆ ಇದ್ದ ಶಾಲಿನಿ, ತಮ್ಮ ಪ್ಲ್ಯಾನ್‌ ಶುರುಹಚ್ಚಿಕೊಂಡಿದ್ದಾಳೆ. ಅದೊಂದು ದಿನ ಪತಿರಾಯ ಮಲಗಿದ್ದಾಗ ಸದ್ದಿಲ್ಲದೇ ಮನೆಯಲ್ಲಿದ್ದ ಒಂದೂವರೆ ಕೋಟಿ ರೂಪಾಯಿಗಳನ್ನು ಯಾಮಾರಿಸಿ ಪರಾರಿಯಾಗಿದ್ದಾಳೆ. ಮಾರನೆಯ ದಿನ ಎದ್ದಾಗ ಪಕ್ಕದಲ್ಲಿ ಪತ್ನಿಯೇ ಇರಲಿಲ್ಲ. ಎಲ್ಲೆಡೆ ಹುಡುಕಾಡಿದ ಅವರಿಗೆ ಸಂದೇಹ ಬಂದಿದೆ. ನಂತರ ತಮ್ಮ ಕಪಾಟಿನಲ್ಲಿದ್ದ ಒಂದೂವರೆ ಕೋಟಿ ರೂಪಾಯಿ ಮಾಯ ಆಗಿರುವುದು ತಿಳಿದಿದೆ.

ಕೂಡಲೇ ಅವರಿಗೆ ತಾವು ಮೋಸ ಹೋಗಿದ್ದು ತಿಳಿದು ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಪೊಲೀಸರು ತನಿಖೆ ಕೈಗೊಂಡಾಗ ಆಕೆ ಇದಾಗಲೇ ಬೇರೆ ಮದುವೆಯಾಗಿ ಹಾಯಾಗಿ ಇರುವುದು ತಿಳಿದಿದೆ! ತಮಗೆ ನ್ಯಾಯ ಬೇಕು ಎಂದು ಡಿಸೋಜಾ ಈಗ ಹೋರಾಟ ನಡೆಸುತ್ತಿದ್ದಾರೆ.