ನ್ಯೂಸ್

ಬ್ರಿಟನ್‌ನ ಜಗತ್ಪ್ರಸಿದ್ಧ ರೆಸಾರ್ಟ್‌ ಖರೀದಿ ಮಾಡಿದ್ರು ಮುಕೇಶ್‌ ಅಂಬಾನಿ- ಇದರ ಬೆಲೆ ಎಷ್ಟು ಗೊತ್ತಾ?

ನವದೆಹಲಿ: ಈ ವರ್ಷವೂ ಜಗತ್ತಿನ ಶ್ರೀಮಂತರ ಪಟ್ಟಿಯಲ್ಲಿ ಅಗ್ರಸ್ಥಾನ ಗಳಿಸಿರುವ ಉದ್ಯಮಿ ಮುಕೇಶ್‌ ಅಂಬಾನಿ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಅದೇನೆಂದರೆ ಅವರ ಒಡೆತನದ ರಿಲಯನ್ಸ್‌ ಇಂಡಸ್ಟ್ರೀಸ್‌ ಬ್ರಿಟನ್‌ನ ಪ್ರತಿಷ್ಠಿತ ವಿಶ್ವವಿಖ್ಯಾತ ಕಂಟ್ರಿ ಕ್ಲಬ್‌ನ ಐಷಾರಾಮಿ ಗಾಲ್ಫ್ ರೆಸಾರ್ಟ್‌ ಹಾಗೂ ಸ್ಟೋಕ್‌ ಪಾರ್ಕ್‌ಗಳನ್ನು ಖರೀದಿ ಮಾಡಿದ್ದಾರೆ.

ಇದರ ಮೌಲ್ಯ ಭಾರತೀಯ ಲೆಕ್ಕಾಚಾರದಲ್ಲಿ 592 ಕೋಟಿ ರೂಪಾಯಿಗಳಾಗಿವೆ. ಬ್ರಿಟನ್‌ನ ಬಕಿಂಗ್‌ಶೈರ್‌ನಲ್ಲಿ ಇದು ಇದೆ. ಯುರೋಪ್‌ನಲ್ಲಿಯೇ ಅತ್ಯುನ್ನತ ಮಟ್ಟದ ಗಾಲ್ಫ್‌ ಕ್ಲಬ್‌ ಇದು ಎನಿಸಿಕೊಂಡಿದೆ.

ಬ್ರಿಟನ್‌ನ ಚಿತ್ರರಂಗದ ಜತೆಗೂ ಈ ರೆಸಾರ್ಟ್‌ ನಂಟು ಹೊಂದಿದ್ದು, ಜೇಮ್ಸ್‌ ಬಾಂಡ್‌ ಚಿತ್ರಗಳು ಇಲ್ಲೇ ಚಿತ್ರೀಕರಣಗೊಳ್ಳುತ್ತಿರುವುದು ವಿಶೇಷ.ಕಳೆದ ನಾಲ್ಕು 4 ವರ್ಷಗಳಲ್ಲಿ ರಿಯಲನ್ಸ್‌ ಕಂಪೆನಿ ಚಿಲ್ಲರೆ ವ್ಯಾಪಾರ ಕ್ಷೇತ್ರದಲ್ಲಿ ಶೇ.14, ತಂತ್ರಜ್ಞಾನ ಕ್ಷೇತ್ರಕ್ಕೆ ಶೇ.80 ಹಾಗೂ ಇಂಧನ ಕ್ಷೇತ್ರದಲ್ಲಿ ಶೇ6ರಷ್ಟುಹಣವನ್ನು ರಿಯಲನ್ಸ್‌ ಕಂಪೆನಿ ವೆಚ್ಚ ಮಾಡಿದ್ದು, ಇವುಗಳ ಸಂಪೂರ್ಣ ಖರ್ಚು 24,740 ಕೋಟಿ ರೂ ಎನ್ನಲಾಗಿದೆ.