ಕಳೆದ ಒಂದೂವರೆ ವರ್ಷಗಳಿಂದ ಕಂಡಕಂಡಲ್ಲಿ ಮಾಸ್ಕ್‌ಗಳದ್ದೇ ಕಾರುಬಾರು. ಮಾಸ್ಕ್ ಧರಿಸಿಲ್ಲ ಎಂದು ಶಿಕ್ಷೆ ಅನುಭವಿಸಿದವರು, ಅನುಭವಿಸುತ್ತಿರುವವರು ಎಷ್ಟೋ ಮಂದಿ, ದಂಡ ಕಟ್ಟಿಸಿಕೊಂಡವರಿಗೆ ಲೆಕ್ಕವೇ ಇಲ್ಲ. ಮಾಸ್ಕ್‌ನಿಂದ ಏನೂ ಪ್ರಯೋಜನ ಇಲ್ಲ ಎನ್ನುತ್ತಿರುವವರು ಕೆಲವರು.
ಅವುಗಳ ನಡುವೆ ಮನುಷ್ಯರಿಗೆ ಬುದ್ಧಿ ಇಲ್ಲದಿದ್ದರೂ ಮಂಗಗಳಿಗಂತೂ ಬುದ್ಧಿ ಇದೆ ಎನ್ನುವುದನ್ನು ಈ ವಿಡಿಯೋ ಸಾಬೀತು ಮಾಡಿದೆ. ಜಾಲತಾಣದಲ್ಲಿ ವೈರಲ್ ಆಗಿರೋ ಈ ವಿಡಿಯೋದಲ್ಲಿ ಮಂಗನ ಮಾಸ್ಕ್ ಬುದ್ಧಿ ನೆಟ್ಟಿಗರನ್ನು ಫಿದಾ ಮಾಡಿದೆ.
27 ಸೆಕೆಂಡ್ ಗಳ ಈ ವಿಡಿಯೋ ತುಣುಕನ್ನು ಮಾಜಿ ಬ್ಯಾಸ್ಕೆಟ್ ಬಾಲ್ ಆಟಗಾರ ರೆಕ್ಸ್ ಚ್ಯಾಪ್‍ಮೆನ್ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ ರಸ್ತೆಯಲ್ಲಿ ಹೋಗುತ್ತಿರುವ ಮಂಗನಿಗೆ ಮಾಸ್ಕ್ ಸಿಗುತ್ತದೆ. ಅದನ್ನು ಅದು ತನ್ನ ಮುಖಕ್ಕೆ ಮುಚ್ಚಿಕೊಂಡು ಹೋಗುತ್ತದೆ. ಒಟ್ಟಿನಲ್ಲಿ ಮಾಸ್ಕ್ ಮುಖದ ಮೇಲೆ ಹಾಕಿಕೊಳ್ಳಬೇಕು ಎಂದು ಮಂಗ ಎಷ್ಟೊಂದು ಚೆನ್ನಾಗಿ ಅರ್ಥ ಮಾಡಿಕೊಂಡಿದೆ ಎಂದು ಎಲ್ಲರೂ ಭೇಷ್ ಭೇಷ್ ಎಂದರೆ, ಮನುಷ್ಯರು ಇದರಿಂದ ಬುದ್ಧಿ ಕಲಿಯಬೇಕಿದೆ ಎಂದು ಹಲವರು ಕಮೆಂಟ್ ಮಾಡಿದ್ದಾರೆ.
ನೀವೂ ನೋಡಿ ಮಂಗನ ಈ ವಿಡಿಯೋ: