ಮಿಜೋರಾಂ: ಭಾರತದಲ್ಲಿ ಪ್ರಾಕೃತಿಯ ಸೌಂದರ್ಯ ತಾಣಗಳು ಹಲವಾರು. ಅಂಥದ್ದೇ ಒಂದು ರಾಜ್ಯ ಮಿಜೋರಾಂ. ಪ್ರಾಕೃತಿಯ ಸೌಂದರ್ಯದಿಂದ ಮನಸೂರೆಗೊಳ್ಳುವ ಮಿಜೋರಾಂನ ಒಂದು ನಯನ ಮನೋಹರ ದೃಶ್ಯ ಸಾಮಾಜಿ ಜಾಲತಾಣದಲ್ಲಿ ವೈರಲ್ ಆಗಿದೆ.
ರಾಜಧಾನಿ ಐಜಾಲ್ ಬಳಿ ಇರುವ ಘಟ್ಟ ಪ್ರದೇಶವೊಂದರಲ್ಲಿ ಮೋಡಗಳು ಬೆಟ್ಟಗಳ ನಡುವೆ ಹರಿದು ಬರುತ್ತಿರುವ ಕಣ್ಮನ ಸೆಳೆಯುವ ವಿಡಿಯೋ ಇದಾಗಿದೆ. ಈ ಮೋಡಗಳು ನೋಡಲು ಜಲಪಾತದಂತೆ ಕಾಣುತ್ತಿದ್ದು, ಸೌಂದರ್ಯ ರಾಶಿಯನ್ನೇ ಹರಿಸಿದೆ.
ಈ ವಿಡಿಯೋವನ್ನು ಉದ್ಯಮಿ ಹರ್ಷ್ ಗೊಯೆಂಕಾ ಶೇರ್ ಮಾಡಿದ್ದಾರೆ.
ನೀವೂ ನೋಡಿ ಈ ಅದ್ಭುತ ತಾಣ.