ನ್ಯೂಸ್

VIDEO: ಮಯೂರಿ ಮಗನಿಗೆ ಅರ್ಧವಾರ್ಷಿಕ ಹುಟ್ಟುಹಬ್ಬದ ಸಂಭ್ರಮ: ವಿಡಿಯೋ ಶೇರ್‌ ಮಾಡಿದ ನಟಿ

ಬೆಂಗಳೂರು: ಅಶ್ವಿನಿ ನಕ್ಷತ್ರ ಧಾರಾವಾಹಿ ಮೂಲಕ ಭಾರಿ ಜನಪ್ರಿಯತೆ ಗಳಿಸಿರುವ ನಟಿ ಮಯೂರಿ ಅವರೀಗ ಅಮ್ಮನಾಗು ಆರು ತಿಂಗಳು. ತಮ್ಮ ಮುದ್ದು ಮಗನ ಆರು ತಿಂಗಳ ಹುಟ್ಟುಹಬ್ಬ ಆಚರಿಸಿರುವ ಮಯೂರಿ ಇದರ ವಿಡಿಯೋ ಅನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

ಒಳ್ಳೆಯದರೊಂದಿಗೆ ಒಳ್ಳೆಯ ಕೊನೆಗೊಳ್ಳುತ್ತದೆ. ಆರವ್‍ಗೆ 6 ತಿಂಗಳು ಎಂದು ಬರೆದುಕೊಂಡಿರುವ ಮಯೂರಿ ಮಗ ಹಾಗೂ ಗಂಡನ ಜತೆ ಫೋಟೋಶೂಟ್‍ ಮಾಡಿಸಿಕೊಂಡಿದ್ದು ಅದನ್ನು ಶೇರ್‌ ಮಾಡಿಕೊಂಡಿದ್ದಾರೆ. ಈ ವಿಡಿಯೋ ಇದೀಗ ಭಾರಿ ವೈರಲ್‌ ಆಗಿದ್ದು, ಮಯೂರಿ ಅವರ ಅಭಿಮಾನಿಗಳಿಗೆ ಸಕತ್‌ ಖುಷಿ ಕೊಡುತ್ತಿದೆ.

ಧಾರಾವಾಹಿ ನಂತರ ಚಿತ್ರದಲ್ಲಿಯೂ ನಟಿಸಿದ ಮಯೂರಿ ಅವರ ಮದುವೆ ಅರುಣ್ ಜತೆ ಆಗಿತ್ತು. ಬಾಲ್ಯದ ಗೆಳೆಯ ಅರುಣ್ ಅವರನ್ನು ಮಯೂರಿ ಕಳೆದ ವರ್ಷ ಜೂನ್ ತಿಂಗಳಲ್ಲಿ ಮದುವೆಯಾಗಿದ್ದಾರೆ. ನಂತರ ಆರವ್‌ನ ಅಮ್ಮನಾದ ಮಯೂರಿ, ಆರನೇ ತಿಂಗಳ ಹುಟ್ಟುಹಬ್ಬದ ಖುಷಿಯಲ್ಲಿದ್ದಾರೆ. ಸದಾ ಮಗುವಿನ ಫೋಟೋ ಶೇರ್‌ ಮಾಡಿಕೊಳ್ಳುತ್ತಿರುವ ಮಯೂರಿ ಹುಟ್ಟುಹಬ್ಬದ ಫೋಟೋ ಹಾಗೂ ವಿಡಿಯೋಗಳನ್ನು ಶೇರ್‌ ಮಾಡಿದ್ದಾರೆ.