ಒಬ್ಬಳನ್ನೇ ಕಟ್ಟಿಕೊಂಡು ಸಾಕೋಸಾಕು ಎನ್ನುತ್ತಿರುವ ಪತಿಯಂದಿರೇ ಹೆಚ್ಚುಮಂದಿಯಾದರೆ ಒಂದೇ ಒಂದು ಮದುವೆಯೂ ಆಗಿಲ್ಲ ಎನ್ನುತ್ತಿದ್ದಾರೆ ಹಲವು ಯುವಕರು. ಅಂಥದ್ದರಲ್ಲಿ ಇಲ್ಲೊಬ್ಬ ಪತಿ ಮಹಾಶಯ ಒಂದಲ್ಲ... ಎರಡಲ್ಲ... ಇದಾಗಲೇ 36 ಮದುವೆಯಾಗಿದ್ದು, ಇದೀಗ 37ನೇ ಮದುವೆಯನ್ನು ಭರ್ಜರಿಯಿಂದ ಆಚರಿಸಿಕೊಂಡಿದ್ದಾನೆ! ಈ ಮದುವೆಗೆ ಸಾಕ್ಷಿಯಾಗಿದ್ದಾರೆ ಆತನ 28 ಬದುಕಿರುವ ಪತ್ನಿಯರು, 35 ಮಕ್ಕಳು ಮತ್ತು 126 ಮೊಮ್ಮಕ್ಕಳು!
ಹಿಂದೆಲ್ಲಾ ರಾಜರು ಈ ರೀತಿ ಬೇಕಾದಷ್ಟು ಮದುವೆಯಾಗಿರುವ ಬಗ್ಗೆ ಎಲ್ಲರೂ ಕೇಳಿದ್ದೇವೆ. ಆದರೆ ಇದೀಗ 21ನೇ ಶತಮಾನದಲ್ಲಿಯೂ ಇಂಥವರು ಇದ್ದಾರೆಯೇ ಎಂದು ಅಚ್ಚರಿ ಪಡುವ ರೀತಿಯಲ್ಲಿ ಈತ ಮದುವೆಯಾಗಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.
ಇದು ಎಲ್ಲಿ ನಡೆದದ್ದು ಎಂಬ ಬಗ್ಗೆ ಸ್ಪಷ್ಟವಾದ ಮಾಹಿತಿ ಇಲ್ಲ. ಆದರೆ 28 ಪತ್ನಿಯರು, 35 ಮಕ್ಕಳು ಮತ್ತು 126 ಮೊಮ್ಮಕ್ಕಳ ಮುಂದೆ ತಮ್ಮ 37ನೇ ಪತ್ನಿಯೊಂದಿಗೆ ಮದುವೆಯಾಗುತ್ತಿದ್ದಾರೆ ಎಂಬ ಮಾಹಿತಿ ಅದರಲ್ಲಿ ಇದೆ. ಈ ವಿಡಿಯೋ 45 ಸೆಕೆಂಡ್ ಇದ್ದು, ಇದನ್ನು ಐಪಿಎಸ್ ಅಧಿಕಾರಿ ರೂಫಿನ್ ಶರ್ಮಾ ಅವರು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.
'ಬ್ರೇವ್ಸ್ಟ್ ಮ್ಯಾನ್….. . 28 ಪತ್ನಿಯರು, 135 ಮಕ್ಕಳು ಮತ್ತು 126 ಮೊಮ್ಮಕ್ಕಳ ಮುಂದೆ 37ನೇ ಮದುವೆ ಎಂದು ಅವರು ಶೀರ್ಷಿಕೆ ಕೊಟ್ಟಿದ್ದಾರೆ. ಇದಕ್ಕೆ ಕಮೆಂಟ್‌ಗಳ ಸುರಿಮಳೆಯೇ ಬರತೊಡಗಿದೆ. ಒಬ್ಬಳನ್ನೇ ಸಂಭಾಳಿಸುವುದು ಕಷ್ಟ ಎಂದಿರುವಾಗ ಈತನನ್ನು ಮೆಚ್ಚಲೇಬೇಕು ಎಂದು ಹಲವರು ಹೇಳಿದ್ದಾರೆ. ಇನ್ನು ಕೆಲವರು ಲಕ್ಕಿ ಮ್ಯಾನ್ ಎಂದಿದ್ದಾರೆ. ಪತ್ನಿ ಎದುರು ಇನ್ನೊಬ್ಬಳನ್ನು ಮಾತನಾಡಿಸುವುದೇ ಕಷ್ಟ, ಅಂಥದ್ದರಲ್ಲಿ 28 ಪತ್ನಿಯರೂ ಮದುವೆಗೆ ಸಾಕ್ಷಿಯಾಗಿದ್ದಾರೆ ಎಂದರೆ ಗ್ರೇಟ್ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಇದನ್ನು ಕನಿಷ್ಠ 10 ಮಂದಿಗೆ ಶೇರ್ ಮಾಡಿದರೆ ಮದುವೆಯಾಗದಿದ್ದವರಿಗೂ ಬೇಗ ಮದುವೆಯಾಗುತ್ತದೆ ಎಂಬ ತಮಾಷೆಯ ಕಮೆಂಟ್‌ಗಳೂ ಬಂದಿವೆ.
ನೀವೂ ನೋಡಿ ಈ ವಿಡಿಯೋ... ನಿಮಗೇನೆನ್ನಿಸಿತು ತಿಳಿಸಿ...