ಇರಾನ್: ಗಿನ್ನೆಸ್ ದಾಖಲೆಯ ಪುಟ ಸೇರುವುದು ಎಂದರೆ ಅಷ್ಟು ಸುಲಭದ ಮಾತಲ್ಲ. ಹಲವಾರು ರೀತಿಯಲ್ಲಿ ಹೊಸಹೊಸ ಪ್ರಯೋಗಗಳನ್ನು ಮಾಡುತ್ತ ಈ ದಾಖಲೆಯ ಪುಸ್ತಕವನ್ನು ಸೇರಲು ಅದೆಷ್ಟೋ ಮಂದಿ ತವಕಿಸುತ್ತಲೇ ಇರುತ್ತಾರೆ. ಆದರೆ ಕೆಲವರು ಮಾತ್ರ ದಾಖಲೆ ಮಾಡಲು ಸಾಧ್ಯವಾಗುತ್ತದೆ.
ಅಂಥ ದಾಖಲೆ ಮಾಡಿರುವ ವ್ಯಕ್ತಿ ಇರಾನ್‌ನ ಅಬೋಲ್‌ಫಜಲ್ ಸ್ಯಾಬರ್ ಮೊಖ್ತಾರಿ. ಇವರು ತಮ್ಮ ದೇಹದ ಮೇಲೆ ಯಾವುದೇ ಆಧಾರದವಿಲ್ಲದೇ 85 ಚಮಚಗಳನ್ನು ಅಂಟಿಸಿಕೊಂಡು ದಾಖಲೆ ನಿರ್ಮಾಣ ಮಾಡಿದ್ದಾರೆ.
50 ವರ್ಷದ ಇವರು ದೇಹದ ಮೇಲೆ 85 ಚಮಚಗಳನ್ನು ಇರಿಸಿಕೊಂಡು ಗಿನ್ನಿಸ್ ವಿಶ್ವ ದಾಖಲೆ ಮಾಡಿರುವುದಾಗಿ ಅದರ ವಿಡಿಯೋವನ್ನು ಗಿನ್ನೆಸ್ ವರ್ಲ್ಡ್ ಬುಕ್ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದೆ.
ಮೊಖ್ತಾರಿ ಅವರು ಬಾಲ್ಯದಿಂದಲೂ ಈ ಅಭ್ಯಾಸ ರೂಢಿಸಿಕೊಂಡಿದ್ದಾರಂತೆ. ಸ್ಟೀಲ್ ಮಾತ್ರವಲ್ಲದೇ ಇವರ ದೇಹದ ಮೇಲೆ ಪ್ಲಾಸ್ಟಿಕ್, ಕಲ್ಲು, ಮರದ ಮಸ್ತುಗಳೂ ಅಂಟುತ್ತವಂತೆ. ಇಂಥದ್ದೊಂದು ಶಕ್ತಿಯನ್ನು ಕಂಡು ನನಗೇ ಅಚ್ಚರಿಯಾಗಿತ್ತು. ನಂತರ ಅದೇ ನಿಟ್ಟಿನಲ್ಲಿ ಮುಂದುವರೆದು ಹೊಸ ಹೊಸ ಪ್ರಯೋಗ ಮಾಡಲು ಶುರು ಮಾಡಿದೆ. ಈ ಹಿಂದೆ ಸ್ಪೇನ್‌ನ ವ್ಯಕ್ತಿಯೊಬ್ಬ 64 ಚಮಚ ಇಟ್ಟುಕೊಂಡು ದಾಖಲೆ ನಿರ್ಮಿಸಿದ್ದರು. ಅದನ್ನು ಮುರಿಯುವ ದೃಷ್ಟಿಯಿಂದ ದೇಹದ ಮೇಲೆ ಸಂಪೂರ್ಣ ನಿಗಾ ವಹಿಸಿ ಈಗ ದಾಖಲೆಯ ಪುಟ ಸೇರಿದ್ದೇನೆ ಎಂದಿದ್ದಾರೆ ಮೊಖ್ತಾರಿ.
ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, 50 ಸಾವಿರಕ್ಕೂ ಅಧಿಕ ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇಲ್ಲಿದೆ ನೋಡಿ ವಿಡಿಯೋ: