ನ್ಯೂಸ್

VIDEO: ಬೆಳ್ಳಂಬೆಳಗ್ಗೆ ರೌಡಿಗಳಿಗೆ ಶಾಕ್‌ ನೀಡಿದ ಖಾಕಿಪಡೆ: ಮನೆ ಮೇಲೆ ದಾಳಿ ನಡೆಸಿ ಪರೇಡ್‌ ಮಾಡಿಸಿದ್ರು!

ಕಲಬುರಗಿ: ಕಲಬುರಗಿ ನಗರದಲ್ಲಿ ಬೆಳ್ಳಂಬೆಳಗ್ಗೆ ರೌಡಿಗಳಿಗೆ ಪೊಲೀಸರು ಶಾಕ್‌ ನೀಡಿದ್ದಾರೆ. ಈಗಾಗಲೇ ಕೆಲವು ಕೃತ್ಯಗಳಲ್ಲಿ ಭಾಗಿಯಾಗಿರುವ ಆರೋಪ ಹೊತ್ತ ರೌಡಿಗಳ ಮನೆಗಳ ಮೇಲೆ ಪೊಲೀಸ್ ದಾಳಿ ಇಟ್ಟಿದ್ದು, ಎಲ್ಲರನ್ನೂ ಎಳೆದು ತಂದಿದ್ದಾರೆ.

ಡಿಸಿಪಿ ಅಡ್ಡೂರು ಶ್ರೀನಿವಾಸುಲು ನೇತೃತ್ವದಲ್ಲಿ ರೌಡಿ ನಿಗ್ರಹ ದಳದಿಂದ ದಾಳಿ ನಡೆದಿದೆ. ಐವತ್ತಕ್ಕೂ ಅಧಿಕ ರೌಡಿಗಳನ್ನ ಕರೆತಂದು ಪರೇಡ್ ಮಾಡಿಸಿದ್ದಾರೆ ಪೊಲೀಸರು.

ಎರಡು ದಿನಗಳ ಹಿಂದೆ ಕೇಂದ್ರ ಬಸ್‌ ನಿಲ್ದಾಣದಲ್ಲಿ ಪೊಲೀಸ್‌ ಕಾನ್ಸ್‌ಟೆಬಲ್‌ ಅವರ ಮಗ ಅಭಿಷೇಕ್ ಹತ್ಯೆಯಿಂದ ಎಚ್ಚೆತ್ತುಕೊಂಡಿರುವ ಪೊಲೀಸರು ಈ ಭಾಗದಲ್ಲಿ ರೌಡಿಗಳ ಕಾಟ ಹೆಚ್ಚಾಗುತ್ತಿರುವ ಬಗ್ಗೆ ದೂರನ್ನು ಆಧರಿಸಿ ಈ ಪ್ರಯೋಗ ಮಾಡಿದ್ದಾರೆ. ಅಭಿಷೇಕ್‌ನನ್ನು ರೌಡಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದರು.

ಸಮಾಜಘಾತುಕ ಕೃತ್ಯಗಳಲ್ಲಿ ಭಾಗಿಯಾಗಿದ್ದರೆ ಇವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಡಿಸಿಪಿ ಶ್ರೀನಿವಾಸಲು ಎಚ್ಚರಿಕೆ ನೀಡಿದ್ದಾರೆ.

ಇಲ್ಲಿದೆ ನೋಡಿ ವಿಡಿಯೋ: