ನ್ಯೂಸ್

ಕೈಗಾ ಅಣುಶಕ್ತಿ ಘಟಕದಲ್ಲಿ ಇಂಜಿನಿಯರ್​ಗಳಿಗೆ ಆಹ್ವಾನ: 26 ಹುದ್ದೆಗಳು ಖಾಲಿ

suchetana

ಉತ್ತರಕನ್ನಡ ಜಿಲ್ಲೆ ಕೈಗಾದಲ್ಲಿರುವ ನ್ಯೂಕ್ಲಿಯರ್​ ಪವರ್​ ಕಾಪೋರ್ರೇಷನ್​ ಆಫ್‌ ಇಂಡಿಯಾ ಲಿಮಿಟೆಡ್​ನ (ಎನ್​ಪಿಸಿಐಎಲ್​) ಟಕದಲ್ಲಿ ವಿವಿಧ ಇಂಜಿನಿಯರ್​ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತಿದೆ. ಸೈಟ್​ ಆಯ್ಕೆ, ವಿನ್ಯಾಸ, ನಿರ್ಮಾಣ, ನಿರ್ವಹಣೆ, ನವೀಕರಣ, ಆಧುನೀಕರಣ ಮತ್ತು ಉನ್ನತಿಕರಣ, ಸಸ್ಯ ಜೀವ ವಿಸ್ತರಣೆ, ತ್ಯಾಜ್ಯ ನಿರ್ವಹಣೆ ಸೇರಿ ಪರಮಾಣು ತಂತ್ರಜ್ಞಾನಕ್ಕೆ ಸಂಬಂಧಿಸಿದ ಇತರ ಕೆಲಸಗಳನ್ನು ನಿರ್ವಹಿಸುವ ಹುದ್ದೆಗಳಿಗೆ ಆಯ್ಕೆ ಪ್ರಕ್ರಿಯೆ ನಡೆಯಲಿದೆ.

ಒಟ್ಟು ಹುದ್ದೆಗಳು: 26

ಪರಮಾಣು ಇಂಧನ ಇಲಾಖೆಯ ಅಧೀನದಲ್ಲಿ ಕಾರ್ಯನಿರ್ವಹಿಸುವ ಸಾರ್ವಜನಿಕ ವಲಯ ಉದ್ಯಮವಾಗಿರು ಎನ್​ಪಿಸಿಐಎಲ್​ನಿಂದ 2 ವರ್ಷದ ಅವಧಿಗೆ ಅಥವಾ ರೆಗ್ಯುಲರ್​ ಆಧಾರದಲ್ಲಿ ನೇಮಕ ಮಾಡಿಕೊಳ್ಳುವ ವರೆಗೆ, ಇವೆರಡರಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಕಾರ್ಯಾವಧಿ ಇರಲಿದೆ.

ಹುದ್ದೆ ವಿವರ

- ಫಿಕ್ಸಡ್​ ಟರ್ಮ್‌ ಇಂಜಿನಿಯರ್​

* ಸಿವಿಲ್​ - 11

* ಮೆಕಾನಿಕಲ್​ - 8

* ಎಲೆಕ್ಟ್ರಿಕಲ್​ - 4

* ಸಿ ಆ್ಯಂಡ್​ ಐ- ಇಸಿ - 2

* ಸಿ ಆ್ಯಂಡ್​ ಐ- ಸಿಎಸ್​/ ಐಎಸ್​ - 1

ಶೈಕ್ಷಣಿಕ ಅರ್ಹತೆ: ಸಿವಿಲ್​, ಮೆಕಾನಿಕಲ್​, ಎಲೆಕ್ಟ್ರಿಕಲ್​, ಎಲೆಕ್ಟ್ರಾನಿಕ್ಸ್​ ಆ್ಯಂಡ್​ ಕಮ್ಯುನಿಕೇಷನ್​, ಕಂಪ್ಯೂಟರ್​ ಸೈನ್ಸ್​/ ಇನ್​ಮೇರ್ಷನ್​ ಸೈನ್ಸ್​ ಇಂಜಿನಿಯರಿಂಗ್​ನಲ್ಲಿ ಬಿಇ/ ಬಿ.ಟೆಕ್​/ ಬಿಎಸ್ಸಿ ಪದವಿ ಪಡೆದಿದ್ದು, ಕನಿಷ್ಠ ಶೇ.60 ಅಂಕ ಪಡೆದಿರಬೇಕು. ದೂರ ಶಿಕ್ಷಣ ಮೂಲಕ ಪಡೆದ ಪದವಿಗೆ ಮಾನ್ಯತೆ ಇಲ್ಲ.

ವಯೋಮಿತಿ: 29.7.2021ಕ್ಕೆ ಅನ್ವಯವಾಗುವಂತೆ ಕನಿಷ್ಠ 18 ವರ್ಷ, ಗರಿಷ್ಠ 35 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.

ವೇತನ: ಮಾಸಿಕ 61,400 ರೂ. ವೇತನ ಇದ್ದು, ಈ ಮೊತ್ತವು ಅವಧಿ ಮುಗಿಯುವವರೆಗೂ ಏಕೀಕೃತವಾಗಿರುತ್ತದೆ. ಹೆಚ್ಚಳ ಇರುವುದಿಲ್ಲ.

ಇತರ ಸೌಲಭ್ಯಗಳು: ಫಿಕ್ಸಡ್​ ಟಮ್​ರ್ ಅಪಾಯಿಂಟ್​ಮೆಂಟ್​ ಅನ್ವಯ ನೇಮಕವಾದ ಅಭ್ಯರ್ಥಿಗಳಿಗೆ ಬ್ಯಾಚುಲರ್​ ರೀತಿಯ ವಸತಿ ಸೌಲಭ್ಯ ನೀಡಲಾಗುವುದು. ವಸತಿಯಿಂದ ಕಚೇರಿಗೆ ಕನಿಷ್ಠ ವೆಚ್ಚದಲ್ಲಿ ಸಾರಿಗೆ ಸೌಲಭ್ಯ, ಕೈಗಾ ನಗರ ಪ್ರದೇಶದಲ್ಲಿ ವೈದ್ಯಕಿಯ ಸೌಲಭ್ಯ, ಕ್ಯಾಂಟೀನ್​ ಸೌಲಭ್ಯ, ಸಂಸ್ಥೆಯ ಕೆಲಸಕ್ಕಾಗಿ ಪ್ರಯಾಣ ಬೆಳೆಸಿದರೆ ಪ್ರಯಾಣ ಭತ್ಯೆ ನೀಡಲಾಗುವುದು.

ಆಯ್ಕೆ ಪ್ರಕ್ರಿಯೆ: ಶಾರ್ಟ್​ಲಿಸ್ಟ್​ ಮಾಡಲಾದ ಅಭ್ಯರ್ಥಿಗಳಿಗೆ ಸಂದರ್ಶನ ನಡೆಸಿ ವೈದ್ಯಕಿಯ ಪರೀಕ್ಷೆ ಹಾಗೂ ದಾಖಲೆಗಳ ಪರಿಶೀಲನೆ ನಡೆಸಲಾಗುವುದು.

ಮೀಸಲಾತಿ: ಸಾಮಾನ್ಯವರ್ಗದ ಅಭ್ಯರ್ಥಿಗೆ 13, ಇತರ ಹಿಂದುಳಿದ ವರ್ಗಕ್ಕೆ 7, ಎಸ್ಸಿಗೆ 3, ಎಸ್ಟಿಗೆ 1, ಆರ್ಥಿಕವಾಗಿ ದುರ್ಬಲವಾಗಿರುವ ಅಭ್ಯರ್ಥಿಗೆ 2, ಅಂಗವಿಕಲರಿಗೆ 2 ಸ್ಥಾನ ಕಾಯ್ದಿರಿಸಲಾಗಿದೆ.

ಅರ್ಜಿ ಸಲ್ಲಿಸಲು ಕೊನೇ ದಿನ: 29.7.2021

ಅಧಿಸೂಚನೆಗೆ: https://bit.ly/3hIzklh

ಮಾಹಿತಿಗೆ: http://npcilcareers.co.in