ದೆಹಲಿಯಲ್ಲಿರುವ ಆಯುಷ್ ಸಚಿವಾಲಯದಲ್ಲಿ 5ನೇ ತರಗತಿ ಉತ್ತೀರ್ಣರಿಗೆ ಉದ್ಯೋಗಾವಕಾಶದ ಬಾಗಿಲು ತೆರೆದಿದ್ದು, ಬ್ರಾಡ್ಕಾಸ್ಟ್ ಇಂಜಿನಿಯರಿಂಗ್ ಕನ್ಸಲ್ಟಂಟ್ಸ್ ಇಂಡಿಯಾ ಲಿಮಿಟೆಡ್ನಿಂದ (ಬಿಇಸಿಐಎಲ್) ನೇಮಕಾತಿ ಪ್ರಕ್ರಿಯೆ ನಡೆಯಲಿದೆ. ಅರ್ಜಿ ಸಲ್ಲಿಕೆ ಅಥವಾ ಅರ್ಜಿ ಸಲ್ಲಿಸುವಾಗ ಯಾವುದೇ ತಾಂತ್ರಿಕ ಸಮಸ್ಯೆ ಎದುರಾದರೆ khuswindersingh@becil.com ಮೇಲ್ ಐಡಿಗೆ ನಿಮ್ಮ ಸಮಸ್ಯೆ ಕುರಿತು ಮಾಹಿತಿ ನೀಡಿ ಪರಿಹಾರ ಕಂಡುಕೊಳ್ಳಬಹುದು. ಹುದ್ದೆಗೆ ಅನುಗುಣವಾಗಿ ಲಿಖಿತ ಪರೀಕ್ಷೆ/ ಪರೀಕ್ಷೆ/ ಸಂದರ್ಶನ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯಲಿದೆ.
ಒಟ್ಟು ಹುದ್ದೆಗಳು: 55
ಹುದ್ದೆ ವಿವರ
* ಮಲ್ಟಿ ಟಾಸ್ಕಿಂಗ್ ಸ್ಟಾಫ್ (ಎಂಟಿಎಸ್) - 32
ಎಸ್ಸೆಸ್ಸೆಲ್ಸಿ ಉತ್ತೀರ್ಣರಾಗಿರಬೇಕು. ಮಾಸಿಕ 17,537 ರೂ. ವೇತನ ಇದೆ.
* ಹೌಸ್ ಕೀಪಿಂಗ್ ಸ್ಟಾಫ್ - 20
5ನೇ ತರಗತಿ ಉತ್ತೀರ್ಣರಾಗಿರುವ ಅಭ್ಯರ್ಥಿಗಳು ಅರ್ಹರಾಗಿದ್ದು, ಮಾಸಿಕ 15,908 ರೂ. ವೇತನ ನೀಡಲಾಗುವುದು.
* ಮಾಲಿ- 1
5ನೇ ತರಗತಿ ಉತ್ತೀರ್ಣರಾಗಿರಬೇಕು. ಮಾಸಿಕ 15,908 ರೂ. ವೇತನ ಇದೆ.
* ಸೂಪರ್ವೈಸರ್ - 1
ಯಾವುದೇ ಪದವಿ ಪಡೆದಿದ್ದು, ಕನಿಷ್ಠ 2 ವರ್ಷದ ವೃತ್ತಿ ಅನುಭವ ಕೇಳಲಾಗಿದೆ. ಮಾಸಿಕ 20,976 ರೂ. ವೇತನ ಇದೆ.
* ಗಾರ್ಬೆಜ್ ಕಲೆಕ್ಟರ್ - 1
ಎಸ್ಸೆಸ್ಸೆಲ್ಸಿ ಉತ್ತೀರ್ಣರಾಗಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದ್ದು, ಮಾಸಿಕ 15,908 ರೂ. ವೇತನ ನೀಡಲಾಗುವುದು.
ಅರ್ಜಿ ಶುಲ್ಕ: ಸಾಮಾನ್ಯವರ್ಗ, ಇತರ ಹಿಂದುಳಿದ ವರ್ಗ, ಮಹಿಳಾ, ಮಾಜಿ ಸೈನಿಕ ಅಭ್ಯರ್ಥಿಗಳಿಗೆ 750 ರೂ. (ಪ್ರತಿ ಪ್ರತ್ಯೇಕ ಹುದ್ದೆಗೆ ಅರ್ಜಿ ಸಲ್ಲಿಸುವುದಾದರೆ 500 ರೂ. ಪ್ರತ್ಯೇಕವಾಗಿ ಪಾವತಿಸಬೇಕು), ಎಸ್ಸಿ, ಎಸ್ಟಿ, ಆರ್ಥಿಕವಾಗಿ ಹಿಂದುಳಿದ ವರ್ಗ ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ 450 ರೂ. ( ಎರಡನೇ ಹುದ್ದೆಗೆ ಅರ್ಜಿ ಸಲ್ಲಿಸುವುದಾದರೆ 300 ರೂ. ಪ್ರತ್ಯೇಕ) ಇದ್ದು, ಜಿಎಸ್ಟಿ ಹಾಗೂ ಬ್ಯಾಂಕ್ ಶುಲ್ಕ ಸೇರಬಹುದು. ಅಭ್ಯರ್ಥಿಗಳು ಆನ್ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸತಕ್ಕದ್ದು ಎಂದು ಸೂಚಿಸಲಾಗಿದೆ.
ಅರ್ಜಿ ಸಲ್ಲಿಸಲು ಕೊನೇ ದಿನ: 10.12.2021
ಅಧಿಸೂಚನೆಗೆ: https://bit.ly/3EbveMI
ಮಾಹಿತಿಗೆ: https://www.vijayavani.net/s-udyogamitra-vayupade-commissioned-officer/http://www.becil.com