ನ್ಯೂಸ್

ಕೇಂದ್ರ ಸರ್ಕಾರದ ಭೂ ವಿಜ್ಞಾನ ಸಚಿವಾಲಯದಲ್ಲಿವೆ 46 ಹುದ್ದೆಗಳು: 67 ಸಾವಿರ ರೂ.ವರೆಗೆ ಸಂಬಳ

ಭೂ ವಿಜ್ಞಾನ ಸಚಿವಾಲಯದಡಿ ಕಾರ್ಯನಿರ್ವಹಿಸುವ ಹಮಾವಾನ ಕೇಂದ್ರವಾಗಿರುವ ನ್ಯಾಷನಲ್​ ಸೆಂಟರ್​ ಫಾರ್​ ಮೀಡಿಯಂ ರೇಂಜ್​ ವೆದರ್​ ಫೋರ್​ಕಾಸ್ಟಿಂಗ್​ನಲ್ಲಿ ವಿವಿಧ ಪ್ರಾಜೆಕ್ಟ್​ಗಳಲ್ಲಿ ಕೆಲಸ ಮಾಡಲು ಸೈಂಟಿಸ್ಟ್​ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಲಾಗಿದೆ. ಆನ್​ಲೈನ್​ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಭಾರತೀಯ ನಾಗರಿಕರು ಮಾತ್ರ ಅರ್ಜಿ ಸಲ್ಲಿಸಲು ಅರ್ಹರು. ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳುತ್ತಿದ್ದು, ಅಭ್ಯರ್ಥಿಯ ಕಾರ್ಯಕ್ಷಮತೆ ಆಧರಿಸಿ ಮಾರ್ಚ್​ 2026ರವರೆಗೆ ಅವಧಿ ವಿಸ್ತರಣೆ ಆಗಲಿದೆ.

ಹುದ್ದೆಗಳ ವಿವರ

ಎನ್​ಎಂಡಬ್ಲುಸಿ ಪ್ರಾಜೆಕ್ಟ್​

* ಪ್ರಾಜೆಕ್ಟ್​ ಸೈಂಟಿಸ್ಟ್​-ಐಐಐ-12

* ಪ್ರಾಜೆಕ್ಟ್​ ಸೈಂಟಿಸ್ಟ್​-ಐಐ-26

ಬಿಸಿಡಬ್ಲುಸಿ ಪ್ರಾಜೆಕ್ಟ್​

ಪ್ರಾಜೆಕ್ಟ್​ ಸೈಂಟಿಸ್ಟ್​-ಐಐಐ-2

ಪ್ರಾಜೆಕ್ಟ್​ ಸೈಂಟಿಸ್ಟ್​-ಐಐ-6

ಶೈಣಿಕ ಅರ್ಹತೆ

ಹುದ್ದೆಗಳಿಗೆ ಅನುಗುಣವಾಗಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಲ್ಲಿ ಕನಿಷ್ಠ ಶೇ.60 ಅಂಕದೊಂದಿಗೆ ಪವನಶಾಸ್ತ್ರ/ಸಮುದ್ರಶಾಸ್ತ್ರ/ಹವಾಮಾನ ವಿಜ್ಞಾನ/ಭೌತಶಾಸ್ತ್ರ/ಭೂಭೌತಶಾಸ್ತ್ರ/ಅನ್ವಯಿಕ ಗಣಿತದಲ್ಲಿ ಸ್ನಾತಕೋತ್ತರ ಪದವಿ, ಸಿವಿಲ್​/ಮೆಕ್ಯಾನಿಕಲ್​/ಕಂಪ್ಯೂಟರ್​ ಸೈನ್ಸ್​ನಲ್ಲಿ ಪದವಿ, ಪಿಎಚ್​ಡಿ ಪದವಿ ಕೇಳಲಾಗಿದೆ.

ಹುದ್ದೆಯ ಜವಾಬ್ದಾರಿ

ಹವಾಮಾನ ದತ್ತಾಂಶ ಸಂಸ್ಕರಣೆ ಮತ್ತು ಗುಣಮಟ್ಟ ನಿಯಂತ್ರಣ ತಂತ್ರಗಳ ಮೇಲೆ ಸಂಶೋಧನೆ ಮತ್ತು ಅಭಿವೃದ್ಧಿ, ಡೇಟಾ ಸಮೀಕರಣ, ಮಾದರಿ ಔಟ್​ಪುಟ್​ಗಳನ್ನು ಬಳಸಿಕೊಂಡು ಹೊಸ ಮತ್ತು ನೂತನ ಅಪ್ಲಿಕೇಷನ್​ಗಳ ಅಭಿವೃದ್ಧಿ, ತರಬೇತಿ ಮತ್ತು ಕಾರ್ಯಾಗಾರ ಆಯೋಜನೆ ಇತ್ಯಾದಿ ಕೆಲಸಗಳನ್ನು ನಿರ್ವಹಿಸಬೇಕಿರುತ್ತದೆ.

ವಯೋಮಿತಿ

ಅರ್ಜಿ ಸಲ್ಲಿಸುವ ದಿನಾಂಕಕ್ಕೆ ಅನ್ವಯವಾಗುವಂತೆ ಅಭ್ಯರ್ಥಿಯ ವಯಸ್ಸು 40 ವರ್ಷ ಮೀರಿರಬಾರದು. ಮೀಸಲಾತಿ ಅಭ್ಯರ್ಥಿಗಳಿಗೆ ವಯೋಸಡಿಲಿಕೆ ಇರಲಿದೆ.

ವೇತನ

ಪ್ರತಿ ಹುದ್ದೆಗಳಿಗೆ ಅನುಸಾರ ಮಾಸಿಕ ವೇತನ 67,000 ರೂ. ನಿಗದಿಪಡಿಸಲಾಗಿದೆ. ವೃತ್ತಿ ಅನುಭವಕ್ಕೆ ತಕ್ಕಂತೆ ವರ್ಷದಿಂದ ವರ್ಷಕ್ಕೆ ಶೇ.5ರಷ್ಟು ವೇತನ ಹೆಚ್ಚಳವಾಗಲಿದೆ.

ಅರ್ಜಿ ಸಲ್ಲಿಕೆ ಹೇಗೆ

ಸಂಸ್ಥೆಯ ಅಧಿಕೃತ ವೆಬ್​ಸೈಟ್​ನಲ್ಲಿ ನೀಡಲಾದ ವಿಳಾಸಕ್ಕೆ ಅಗತ್ಯ ದಾಖಲೆಗಳೊಂದಿಗೆ ನಿಗದಿತ ದಿನಾಂಕದೊಳಗೆ ಅರ್ಜಿ ಸಲ್ಲಿಸಬೇಕು. ಮೀಸಲಾತಿ ಕೋರುವವರು ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು. ಯಾವುದೇ ಅರ್ಜಿ ಶುಲ್ಕ ನಿಗದಿಯಾಗಿಲ್ಲ.

ಆಯ್ಕೆ ವಿಧಾನ

ಶಾರ್ಟ್​ಲಿಸ್ಟ್​ ಮಾಡಲಾದ ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು. ಸಂದರ್ಶನ ನಡೆಯುವ ದಿನವನ್ನು ಸಂಸ್ಥೆಯ ಅಧಿಕೃತ ವೆಬ್​ಸೈಟ್​ನಲ್ಲಿ ತಿಳಿಸಲಾಗುವುದು. ಸಂದರ್ಶನಕ್ಕೆ ಹಾಜರಾಗಲು ಸಂಸ್ಥೆಯ ಕಡೆಯಿಂದ ಯಾವುದೇ ಭತ್ಯೆ ನೀಡುವುದಿಲ್ಲ.

ಅರ್ಜಿ ಸಲ್ಲಿಸಲು ಕೊನೇ ದಿನ: 22.7.2022

ಅಧಿಸೂಚನೆಗೆ: https://bit.ly/3apNsQH

ಮಾಹಿತಿಗೆ: http://www.ncmrwf.gov.in