ನ್ಯೂಸ್

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಲ್ಲಿ ಯುವಕರಿಗೆ ಉದ್ಯೋಗಾವಕಾಶ: ಕನಿಷ್ಠ 60,000 ರೂ. ಸಂಬಳ

ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರ (ನ್ಯಾಷನಲ್​ ಹೈವೇಸ್​ ಅಥಾರಿಟಿ ಆಫ್ ಇಂಡಿಯಾ- ಎನ್​ಎಚ್​ಎಐ) ಯಂಗ್​ ಪ್ರೊಫೆಷನಲ್​ ಹುದ್ದೆಗಳ ಭರ್ತಿಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ. ಗುತ್ತಿಗೆ ಆಧಾರದಲ್ಲಿ ನೇಮಕಾತಿ ಮಾಡಿಕೊಳ್ಳುತ್ತಿದ್ದು, ಆನ್​ಲೈನ್​ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಹುದ್ದೆಯ ವಿವರ

30 ಯಂಗ್​ ಪ್ರೊಫೆಷನಲ್​ ಹುದ್ದೆಗಳಲ್ಲಿ ಸಾಮಾನ್ಯ ಅಭ್ಯರ್ಥಿಗೆ 14, ಒಬಿಸಿ ಅಭ್ಯರ್ಥಿಗಳಿಗೆ 8, ಎಸ್ಸಿ ಅಭ್ಯರ್ಥಿಗೆ 4, ಎಸ್ಟಿಗೆ 2 ಮತ್ತು ಆರ್ಥಿಕವಾಗಿ ಹಿಂದುಳಿದ ಅಭ್ಯರ್ಥಿಗಳಿಗೆ 2 ಹುದ್ದೆ ಮೀಸಲಿಡಲಾಗಿದೆ. ಸಂಸ್ಥೆಯ ನಿಯಮದ ಪ್ರಕಾರ ಹುದ್ದೆಗಳ ಸಂಖ್ಯೆ ಏರಿಕೆ ಅಥವಾ ಕಡಿಮೆ ಆಗಬಹುದು.

ವಿದ್ಯಾರ್ಹತೆ

ಮಾನ್ಯತೆ ಪಡೆದ ವಿಶ್ವವಿದ್ಯಾಲಯದಲ್ಲಿ ಕಾನೂನು ಪದವಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು. ಕಾಮನ್​ ಲಾ ಅಡ್ಮಿಷನ್​ ಟೆಸ್ಟ್​ (ಕ್ಲಾಟ್​) ನಲ್ಲಿ ತೇರ್ಗಡೆಯಾಗಿರಬೇಕು. ಸಂಬಂಧಪಟ್ಟ ೇತ್ರದಲ್ಲಿ ವೃತ್ತಿ ಅನುಭವ ಪಡೆದಿರುವವರಿಗೆ ಮೊದಲ ಆದ್ಯತೆ ನೀಡಲಾಗುವುದು.

ವಯೋಮಿತಿ

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕಕ್ಕೆ ಅನ್ವಯವಾಗುವಂತೆ ಅಭ್ಯರ್ಥಿಯ ವಯೋಮಿತಿ 32 ವರ್ಷ ಮೀರಿರಬಾರದು. ಅದಕ್ಕಿಂತ ಹೆಚ್ಚಿನ ವಯೋಮಿತಿಯುಳ್ಳ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಲ್ಲ.

ವೇತನ

ಸಂಸ್ಥೆಯ ನಿಯಮದ ಅನುಸಾರ ಭತ್ಯೆಗಳೆಲ್ಲ ಸೇರಿ 60 ಸಾವಿರ ರೂ. ಮಾಸಿಕ ವೇತನ ನಿಗದಿಪಡಿಸಲಾಗಿದೆ. ಕಾರ್ಯಕ್ಷಮತೆ ಆಧರಿಸಿ ಪ್ರತಿ ವರ್ಷ ಶೇ.5ರಷ್ಟು ವೇತನ ಹೆಚ್ಚಳ ಮಾಡಲಾಗುವುದು.

ಅರ್ಜಿ ಸಲ್ಲಿಕೆ ವಿಧಾನ

ಆನ್​ಲೈನ್​ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದ್ದು, ಅಧಿಸೂಚನೆಯಲ್ಲಿ ತಿಳಿಸಿದ ಮಾಹಿತಿಯನ್ನು ಓದಿಕೊಂಡು ಅರ್ಜಿ ಭರ್ತಿ ಮಾಡಬೇಕು. ಅಪೂರ್ಣ ಅರ್ಜಿಗಳನ್ನು ಪರಿಗಣಿಸುವುದಿಲ್ಲ. ಮೀಸಲಾತಿ ಕೋರುವವರು ಅಗತ್ಯ ದಾಖಲೆ ಸಲ್ಲಿಸತಕ್ಕದ್ದು. ಅರ್ಜಿಯಲ್ಲಿ ಇ-ಮೇಲ್​ ವಿಳಾಸವನ್ನು ನಮೂದಿಸಬೇಕು. ಸಂದರ್ಶನದ ದಿನಾಂಕವನ್ನು ಇ-ಮೇಲ್​ ಮೂಲಕ ತಿಳಿಸಲಾಗುವುದು.

ಆಯ್ಕೆ ಪ್ರಕ್ರಿಯೆ

ಎರಡು ವರ್ಷದ ಅವಧಿಗೆ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳುತ್ತಿದ್ದು, ಇನ್ನೊಂದು ವರ್ಷ ಅವಧಿಗೆ ವಿಸ್ತರಣೆ ಆಗುವ ಸಾಧ್ಯತೆ ಇದೆ. ಕೆಲಸ ತೃಪ್ತಿದಾಯಕ ಎನಿಸದಿದ್ದರೆ ಗುತ್ತಿಗೆ ಅವಧಿಯಲ್ಲಿರುವಾಗಲೇ ಕೆಲಸದಿಂದ ವಜಾಗೊಳಿಸುವ ಅಧಿಕಾರ ಸಂಸ್ಥೆಗಿದೆ. ಕ್ಲಾಟ್​ ಅಂಕ ಮತ್ತು ಇತರ ಶೈಣಿಕ ಅಂಕಗಳನ್ನು ಆಧರಿಸಿ ಅರ್ಹ ಅಭ್ಯರ್ಥಿಗಳನ್ನು ಶಾರ್ಟ್​ಲಿಸ್ಟ್​ ಮಾಡಲಾಗುವುದು. ನಂತರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

ಅರ್ಜಿ ಸಲ್ಲಿಸಲು ಕೊನೇ ದಿನ: 9.9.2022

ಅಧಿಸೂಚನೆಗೆ: https://bit.ly/3QGyiWY

ಮಾಹಿತಿಗೆ: http://www.nhai.gov.in