ಬೆಂಗಳೂರಿನ ವಿಮಾನಪುರದಲ್ಲಿರುವ ಎಚ್ಎಎಲ್ ಶಾಲೆಯಲ್ಲಿ ಶಿಕ್ಷಕರ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಸಿಬಿಎಸ್ಇ ಹಾಗೂ ಐಸಿಎಸ್ಇ ಪಠ್ಯಕ್ರಮ ಬೋಧನೆಯ ಟ್ರೇನ್ಡ್ ಗ್ರಾಜುಯೇಟ್ ಟೀಚರ್ (ಟಿಜಿಟಿ) ಪೆಮರಿ ಟೀಚರ್ (ಪಿಆರ್ಟಿ) ಹಾಗೂ ನರ್ಸರಿ ಶಾಲಾ ಶಿಕ್ಷಕ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ. 2022-23ನೇ ಶೈಕ್ಷಣಿಕ ಸಾಲಿನಲ್ಲಿ ಭರ್ತಿ ಮಾಡಿಕೊಳ್ಳಲಾಗುತ್ತಿದೆ. ಐದು ವರ್ಷಗಳ ಅವಧಿ ಇರಲಿದೆ. ಸಮರ್ಪಕ ಕಾರ್ಯನಿರ್ವಹಣೆ, ಆಡಳಿತ ಮಂಡಳಿ ಅನುಮತಿ ಮೇರೆಗೆ ಅವಧಿಯನ್ನು ವಿಸ್ತರಿಸಲು ಅವಕಾಶವಿದೆ. ಹೈಸ್ಕೂಲ್ನಲ್ಲಿ ಬೋಧನಾನುಭವ ಇರುವವರಿಗೆ ಆದ್ಯತೆ ಇರಲಿದೆ.
ಒಟ್ಟು ಹುದ್ದೆಗಳು: 21
*ಹುದ್ದೆಗಳ ವಿವರ
ಕನ್ನಡ: ಟಿಜಿಟಿ-2, ಪಿಆರ್ಟಿ-3
ಹಿಂದಿ: ಟಿಜಿಟಿ-1
ಇಂಗ್ಲಿಷ್: ಟಿಜಿಟಿ-3, ಪಿಆರ್ಟಿ-1
ಗಣಿತ: ಟಿಜಿಟಿ-1, ಪಿಆರ್ಟಿ-1
ವಿಜ್ಞಾನ(ಭೌತಶಾಸ್ತ್ರ, ರಸಾಯನಶಾಸ್ತ್ರ): ಟಿಜಿಟಿ-1
ಸಮಾಜ ವಿಜ್ಞಾನ: ಪಿಆರ್ಟಿ-1
ಭೂಗೋಶಶಾಸ್ತ್ರ: ಟಿಜಿಟಿ-1
ಕಂಪ್ಯೂಟರ್ ಸೈನ್ಸ್: ಪಿಆರ್ಟಿ-1
ದೈಹಿಕ ಶಿಕ್ಷಣ ಶಿಕ್ಷಕಿ: ಪಿಆರ್ಟಿ-1
ಸಂಗೀತ ಶಿಕ್ಷಕರು: ಪಿಆರ್ಟಿ-1
ನರ್ಸರಿ ಶಿಕ್ಷಕರು- 3
ವಿದ್ಯಾರ್ಹತೆ: ಆಯಾ ವಿಷಯಗಳಲ್ಲಿ ಪದವಿ ಪಡೆದಿದ್ದು, ಪದವಿಯ ಮೂರು ವರ್ಷಗಳಲ್ಲಿ ವಿಷಯವನ್ನು ಅಧ್ಯಯನ ಮಾಡಿರತಕ್ಕದ್ದು. ಅದೇ ವಿಷಯವನ್ನು ಬೋಧನಾ ವಿಷಯವನ್ನಾಗಿಸಿಕೊಂಡು ಬಿ.ಇಡಿ ಪದವಿ ಪಡೆದಿರಬೇಕು. ಸಮಾಜವಿಜ್ಞಾನ ಶಿಕ್ಷಕರು ಪದವಿಯಲ್ಲಿ ಇತಿಹಾಸ, ರಾಜ್ಯಶಾಸ್ತ್ರ, ಅರ್ಥಶಾಸ್ತ್ರ, ಸಮಾಜಶಾಸ್ತ್ರ, ಭೂಗೋಶಶಾಸ್ತ್ರ ಓದಿರಬೇಕು ಅಥವಾ ಈ ವಿಷಯಗಳಲ್ಲಿ ಆನರ್ಸ್ ಪದವಿ ಪಡೆದವರು ಅರ್ಹರಾಗಿದ್ದಾರೆ.
ಕಂಪ್ಯೂಟರ್ ಸೈನ್ಸ್ ವಿಷಯಕ್ಕೆ ಬಿಇ, ಬಿ.ಟೆಕ್, ಎಂಎಸ್ಸಿ ಇನ್ ಕಂಪ್ಯೂಟರ್ ಸೈನ್ಸ್, ಎಂಸಿಎ ಅಥವಾ ಬಿಸಿಎ ಪದವಿ ಪಡೆದಿರಬೇಕು. ಜತೆಗೆ, ಆಯಾ ಬೋಧನಾ ವಿಷಯಗಳಲ್ಲಿ ಶೇ.50 ಅಂಕಗಳನ್ನು ಪಡೆದಿರಬೇಕು.
*ಇತರ ಅರ್ಹತೆಗಳೇನು?
ಟಿಜಿಟಿ ಹುದ್ದೆಗಳಿಗೆ ಕನಿಷ್ಠ 5 ವರ್ಷಗಳ ಬೋಧನಾನುಭವವನ್ನು ಕೋರಲಾಗಿದೆ. ಈ ಹುದ್ದೆಗಳಿಗೆ ಸಂಚಿತ ವೇತನವಾಗಿ 61 ಸಾವಿರ ರೂ. ಪ್ರೊಬೇಷನರಿ ಅವಧಿ ಮುಗಿದ ಬಳಿಕ 76 ಸಾವಿರ ರೂ. ನಿಗದಿಪಡಿಸಲಾಗಿದೆ.
ಪಿಆರ್ಟಿ ಹುದ್ದೆಗಳಿಗೆ 2 ವರ್ಷದ ಅನುಭವ ಕೋರಲಾಗಿದ್ದು, ಆರಂಭದಲ್ಲಿ 51 ಸಾವಿರ ರೂ. ಹಾಗೂ ಪ್ರೊಬೇಷನ್ ಅವಧಿ ಬಳಿಕ 61 ಸಾವಿರ ರೂ. ಸಂಬಳ ನೀಡಲಾಗುತ್ತದೆ. ಎರಡೂ ಹುದ್ದೆಗಳಿಗೆ 2022ರ ಜೂನ್ 1ಕ್ಕೆ ಅನ್ವಯವಾಗುವಂತೆ ಗರಿಷ್ಠ 45 ವರ್ಷ ವಯೋಮಿತಿ ವಿಧಿಸಲಾಗಿದೆ.
ನರ್ಸರಿ ಶಿಕ್ಷಕರಿಗೆ ಗರಿಷ್ಠ 40 ವರ್ಷ ವಯೋಮಿತಿ ನಿಗದಿಪಡಿಸಿದ್ದು, 5 ವರ್ಷಗಳ ಬೋಧನಾನುಭವ ಅಪೇಕ್ಷಿಸಲಾಗಿದೆ. ಆರಂಭಿಕವಾಗಿ 33,500 ರೂ. ನಂತರದಲ್ಲೂ ಇದೇ ವೇತನ ನೀಡಲಾಗುತ್ತದೆ.
ಆಯ್ಕೆ ಪ್ರಕ್ರಿಯೆ ಹೇಗೆ?
ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆನಡೆಸಲಾಗುತ್ತದೆ. ಪ್ರಾತ್ಯಕ್ಷಿಕೆ ಹಾಗೂ ಸಂದರ್ಶನ ಇರಲಿದೆ. ಆಯ್ದ ಅಭ್ಯರ್ಥಿಗಳಿಗೆ ಈ ಮಾಹಿತಿ ನೀಡಲಾಗುತ್ತದೆ. ಆನ್ಲೈನ್ ಮೂಲಕವೇ ಅರ್ಜಿ ಸಲ್ಲಿಸತಕ್ಕದ್ದು. 250 ರೂ. ಶುಲ್ಕ ಪಾವತಿಸಬೇಕು.
*ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ
ಫೆ..20
*ಅಧಿಸೂಚನೆ: https://bit.ly/3AYBqXl
ಅರ್ಜಿ ಸಲ್ಲಿಕೆ ಲಿಂಕ್: https://bit.ly/34yrwPZ