ಕಿಲಿಮಾಂಜರೋ (ಆಫ್ರಿಕಾ): ಕರೊನಾ ಮೊದಲ ಅಲೆ ಭಾರತವನ್ನು ಪ್ರವೇಶಿಸಿದ ದಿನದಿಂದ ಇಲ್ಲಿಯವರೆಗೆ ಸಂಕಷ್ಟಕ್ಕೆ ಸಿಲುಕಿರುವವರ ರಕ್ಷಣೆ ಮಾಡಿ, ಅವರಿಗೆ ನೆರವಾದರು ಹಲವಾರು. ಅಂಥವರಲ್ಲಿ ಒಬ್ಬರು ಬಾಲಿವುಡ್ ನಟ ಸೋನು ಸೂದ್. ಅದರಲ್ಲಿಯೂ ಕಳೆದ ವರ್ಷ ಇವರು ಹಲವಾರು ಜನರಿಗೆ ನೆರವಾಗಿದ್ದು, ಸಂತ್ರಸ್ತರಿಗೆ ದೇವರೇ ಎನಿಸಿಕೊಂಡವರು.
ಇದೀಗ ಭಾರತದ ಪರ್ವತಾರೋಹಿ ಉಮಾ ಸಿಂಗ್ ಅವರು ಸೋನು ಸೂದ್ ಅವರನ್ನು ನೆನೆದಿದ್ದಾರೆ. ಆದರೆ ಅವರು ಸೋನು ಸೂದ್ ಅವರನ್ನು ನೆನಪು ಮಾಡಿಕೊಂಡಿರುವುದು ಆಫ್ರಿಕಾದ ಅತ್ಯಂತ ಎತ್ತರದ ಪರ್ವತ ಮೌಂಟ್ ಕಿಲಿಮಾಂಜರೋದ ತುತ್ತ ತುದಿ ಏರಿದ ಸಂದರ್ಭದಲ್ಲಿ.
ಇಂಥ ಸಾಧನೆ ಮಾಡಿದಾಗ ತನ್ನ ದೇಶದ ಬಾವುಟವನ್ನು ಅಲ್ಲಿ ಹಾರಿಸಲಾಗುತ್ತದೆ. ಆದರೆ ಉಮಾ ಸಿಂಗ್ ಅವರು ತಮ್ಮೊಟ್ಟಿಗೆ ಸೋನು ಸೂದ್ ಅವರ ಚಿತ್ರವನ್ನೂ ತೆಗೆದುಕೊಂಡು ಹೋಗಿದ್ದು, ತುತ್ತು ತುದಿಯಲ್ಲಿ ಅದರ ಜತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.
"ಆಗಸ್ಟ್ 5ರಂದು ನಾನು ಆಫ್ರಿಕಾ ಖಂಡದ ಅತಿ ಎತ್ತರದ ಶಿಖರವಾದ ಮೌಂಟ್ ಕಿಲಿಮಾಂಜರೋವನ್ನು ಬೈಸಿಕಲ್‌ನಲ್ಲಿ ಏರಿದ್ದೆ. ನನ್ನ ಈ ಸಾಧನೆಯನ್ನು ಏಕೈಕ ರಿಯಲ್ ಹೀರೋ ಸೋನು ಸೂದ್ ಸರ್‌ಗೆ ಈ ವಿಜಯವನ್ನು ಅರ್ಪಿಸುತ್ತಿದ್ದೇನೆ. ಯಾವಾಗಲೂ ಸ್ಫೂರ್ತಿಯಾಗಿರುವ ಸೋನು ಸರ್‌ಗೆ ಧನ್ಯವಾದ ಎಂದು ಉಮಾ ಸಿಂಗ್ ಟ್ವೀಟ್ ಮಾಡಿದ್ದಾರೆ.
ಇದನ್ನು ನೋಡಿ ಸೋನು ಸೂದ್ ತುಂಬಾ ಸಂತೋಷಗೊಂಡಿದ್ದರು, "ವಾವ್. ನಾನು ಸಹ ಮೌಂಟ್ ಕಿಲಿಮಾಂಜರೋ ಏರಿದಂತಾಯಿತು. ಇದು ನನಗೆ ಹೆಮ್ಮೆಯಾಗುತ್ತಿದೆ’ ಎಂದಿದ್ದಾರೆ.
ಇಲ್ಲಿದೆ ನೋಡಿ ವಿಡಿಯೋ: