ನ್ಯೂಸ್

ಕಣ್ಣೀರು ಕೇಳೋರ‍್ಯಾರು? ಕೈಯಾರೆ ಬೆಳೆದು ಸೊಂಪಾಗಿ ನಿಂತ ಹೂಕೋಸು ಬೆಳೆ ನಾಶ ಮಾಡಿದ ರೈತ!

suchetana

ಹಾವೇರಿ: ಮಾರುಕಟ್ಟೆಯಲ್ಲಿ ಬೆಲೆ ಸಿಗದ ಹಿನ್ನೆಲೆಯಲ್ಲಿ ರೈತನೊಬ್ಬ ಮನನೊಂದು ಬೆಳೆ ನಾಶ ಮಾಡಿರುವ ಘಟನೆ ಹಾವೇರಿ ಜಿಲ್ಲೆಯ ಹಿರೆಕೇರೂರು ತಾಲೂಕಿನ ಹಿರೇಬುದಿಹಾಳ ಗ್ರಾಮದಲ್ಲಿ ನಡೆದಿದೆ.

ಸೊಂಪಾಗಿ ಬೆಳೆದಿದ್ದ ಹೂ ಕೋಸಿನ ಫಸಲನ್ನು ಸಂಪೂರ್ಣವಾಗಿ ನಾಶ ಮಾಡಿದ್ದಾರೆ ರೈತ ಶಿವರಾಜ್ ಕೆಂಚಣ್ಣನವರ.

ಟ್ಯಾಕ್ಟರ್ ಮೂಲಕ ರೂಟರ್ ಹೊಡೆದು ಸಂಪೂರ್ಣ ಬೆಳೆಯನ್ನು ನಾಶ ಮಾಡಿದ್ದಾರೆ. ಈ ಫಸಲು ತೆಗೆಯಲು 70 ಸಾವಿರ ಖರ್ಚು ಮಾಡಿದ್ದರು ಶಿವರಾಜ್​. ಆದರೆ ಮಾರುಕಟ್ಟೆಯಲ್ಲಿ ಕೊಂಡುಕೊಳ್ಳುವವರು ಯಾರು ಇಲ್ಲ ಎನ್ನುವ ಕಾರಣಕ್ಕೆ ನೊಂದು ಬೆಳೆ ಹಾನಿಗೊಳಿಸಿದ್ದಾರೆ.