ನ್ಯೂಸ್

ಭೌತಶಾಸ್ತ್ರಜ್ಞ ಐನ್‌ಸ್ಟೀನ್‌ನ ಈ ಪತ್ರ 10 ಕೋಟಿ ರೂ.ಗೆ ಹರಾಜು! ಅದರಲ್ಲೇನಿದೆ ಅಂಥ ವಿಶೇಷತೆ?

suchetana

ಕ್ಯಾಲಿಫೋರ್ನಿಯಾ: ವಿಶ್ವವಿಖ್ಯಾತರಾದವರ ಕೈಬರಹಕ್ಕೆ ಇರುವ ಬೆಲೆ ಇನ್ನಾವ ಬೆಲೆಬಾಳುವ ವಸ್ತುಗಳಿಗೂ ಇರಲು ಸಾಧ್ಯವಿಲ್ಲ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಭೌತಶಾಸ್ತ್ರಕ್ಕೆ ಹೊಸ ಆಯಾಮವನ್ನೇ ಕೊಟ್ಟ ವಿಶ್ವಖ್ಯಾತ ವಿಜ್ಞಾನಿ ಆಲ್ಬರ್ಟ್ ಐನ್‌ಸ್ಟೀನ್‌ ಅವರ ಕೈಬರಹ ಇರುವ ಪತ್ರವೊಂದು ಸುಮಾರು 10 ಕೋಟಿ ರೂಪಾಯಿಗೆ ಹರಾಜಾಗಿದೆ!

ಇದು ಐನ್‌ಸ್ಟೀನ್‌ ಅವರ ಸೂತ್ರ. E=mc2 ಎನ್ನುವ ಸೂತ್ರವಿದು. ಇದರ ಅರ್ಥ ಶಕ್ತಿಯು ಬೆಳಕಿನ ವರ್ಗದ ವೇಗಕ್ಕೆ ಸಮನಾಗಿರುತ್ತದೆ ಎಂದು. ಈ ಕೈಬರಹ ಇರುವ ಪತ್ರ ಅಮೆರಿಕದ ಬೋಸ್ಟನ್ ಹರಾಜಿಗೆ ಇಡಲಾಗಿತ್ತು. ಇದು $1.2 ಮಿಲಿಯನ್‌ಗೆ (ಸುಮಾರು 9 ಕೋಟಿ 13 ಲಕ್ಷ 35 ಸಾವಿರ ರೂಪಾಯಿ) ಹರಾಜಾಗಿದೆ ಎಂದು ಬೋಸ್ಟನ್ ಮೂಲದ ಹರಾಜುದಾರ ಸಂಸ್ಥೆ ತಿಳಿಸಿದೆ. ಅಂದುಕೊಂಡಿದ್ದಕ್ಕಿಂತಲೂ ಮೂರು ಪಟ್ಟು ಹೆಚ್ಚಿನ ಬೆಲೆಗೆ ಇದು ಹರಾಜಾರಿಗೆ ಎಂದು ಸಂಸ್ಥೆ ಹೇಳಿದೆ.

ಅಷ್ಟಕ್ಕೂ ಇದಕ್ಕೆ ಇಷ್ಟೊಂದು ಬೆಲೆ ಏಕೆ ಎಂದರೆ ಐನ್‌ಸ್ಟೀನ್‌ ಅವರ ಕೈಬರಹದಲ್ಲೇ ಇರುವ ಈ ಸೂತ್ರದ ಮೂರೇ ಮೂರು ಪತ್ರಗಳು ಸದ್ಯ ಜಗತ್ತಿನಲ್ಲಿ ಇದ್ದು, ಇದು ನಾಲ್ಕನೆಯದ್ದಾಗಿದೆ. ಮಾತ್ರವಲ್ಲದೇ ಉಳಿದವು ಸರ್ಕಾರಿ ಒಡೆತನದಲ್ಲಿ ಇದ್ದರೆ, ಈ ಪತ್ರ ಮಾತ್ರ ಖಾಸಗಿ ಒಡೆತನದಲ್ಲಿದೆ.

ಈ ಕುರಿತು ಕ್ಯಾಲಿಫೋರ್ನಿಯಾದ ತಾಂತ್ರಿಕ ವಿಶ್ವವಿದ್ಯಾಲಯ ಹಾಗೂ ಜೆರುಸಲೇಂನ ಹೆಬ್ರೂ ವಿಶ್ವವಿದ್ಯಾಲಯಗಳ ‘ಐನ್‌ಸ್ಟೀನ್‌ ಪೇಪರ್ಸ್ ಪ್ರಾಜೆಕ್ಟ್‌’ನ ಆರ್ಕಿವಿಸ್ಟ್‌ಗಳು ಮಾಹಿತಿ ನೀಡಿದ್ದು, ಈ ಪತ್ರವನ್ನು $400,000ಕ್ಕೆ ಮಾರಾಟ ಮಾಡುವ ನಿರೀಕ್ಷೆಯನ್ನು ಇಟ್ಟುಕೊಳ್ಳಲಾಗಿತ್ತು. ಆದರೆ ಇದೀಗ ಮೂರು ಪಟ್ಟು ಹೆಚ್ಚಿನ ಮೊತ್ತಕ್ಕೆ ಪತ್ರ ಮಾರಾಟವಾಗಿದೆ ಎಂದಿದೆ.