ಮುಂಬೈ: ಇದೀಗ ಡ್ರಗ್ಸ್ ಕೇಸ್‌ನಲ್ಲಿ ಶಾರುಖ್ ಖಾನ್ ಪುತ್ರ ಆರ್ಯ ಖಾನ್ ಸಿಕ್ಕಿಬೀಳುತ್ತಿದ್ದಂತೆಯೇ ಒಂದೊಂದೇ ಇತಿಹಾಸ ಬೆಳಕಿಗೆ ಬರುತ್ತಿದೆ.
ಕೆಲ ವರ್ಷಗಳ ಹಿಂದೆ ಶಾರುಖ್ ಖಾನ್ ಅವರ ಪತ್ನಿ ಗೌರಿ ಖಾನ್ ಅವರಿಗೂ ಡ್ರಗ್ಸ್ ನಂಟು ಇತ್ತು ಎಂಬ ಸುದ್ದಿಯೊಂದು ಇದೀಗ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದಕ್ಕೆ ಕಾರಣ ಕೆಲವು ವರ್ಷಗಳ ಹಿಂದೆ ಗೌರಿ ಅವರು ಬರ್ಲಿನ್ ಏರ್‌ಪೋರ್ಟ್‌ನಲ್ಲಿ ಅಧಿಕಾರಿಗಳಿಗೆ ಸಿಕ್ಕಿಬಿದ್ದ ಸುದ್ದಿ ಬಹಳ ಚರ್ಚೆಗೆ ಗ್ರಾಸವಾಗಿತ್ತು.
ಇವರು ಗಾಂಜಾ ಹೊಂದಿದ್ದಾರೆ ಎಂಬ ಅನುಮಾನದ ಮೇಲೆ ಬರ್ಲಿನ್ ಏರ್‌ಪೋರ್ಟ್‌ನಲ್ಲಿ ಅವರನ್ನು ಅಧಿಕಾರಿಗಳು ತಡೆದಿದ್ದರು, ಆಗ ಅವರನ್ನು ತಪಾಸಣೆಗೆ ಒಳಪಡಿಸಲಾಗಿತ್ತು. ಈ ಬಗ್ಗೆ ಸಾಕಷ್ಟು ವರದಿಗಳು ಬಂದಿದ್ದರೂ ಕೊನೆಗೂ ಅಧಿಕಾರಿಗಳು ಮಾತ್ರ ಗಪ್‌ಚುಪ್ ಆಗಿದ್ದರು. ಇವರ ಬಳಿ ಗಾಂಜಾ ಸಿಕ್ಕಿತ್ತೋ ಇಲ್ಲವೋ ಎಂಬ ಬಗ್ಗೆ ಸತ್ಯಾಂಶ ಹೊರಕ್ಕೆ ಬರಲೇ ಇಲ್ಲ. ಇವರ ಬಳಿ ಗಾಂಜಾ ಇಲ್ಲ ಎಂದು ಕೂಡ ಅಧಿಕಾರಿಗಳು ತಿಳಿಸದೇ ಇದ್ದುದು ಭಾರಿ ಅನುಮಾನಕ್ಕೆ ಕಾರಣವಾಗಿತ್ತು.
ಈ ಘಟನೆ ಬಳಿಕ ಗೌರಿ ಅವರ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡಿದ್ದು, ಅವರು ಕೂಡ ಮಾದಕ ವ್ಯಸನಿ ಎಂದೇ ಬಿಂಬಿಸಲಾಗಿತ್ತು. ಆದರೆ ಈ ಬಗ್ಗೆ ಸಂದರ್ಶನವೊಂದರಲ್ಲಿ ಖಡಕ್ ಆಗಿ ಉತ್ತರಿಸಿದ್ದ ಗೌರಿ ಖಾನ್, ಎಲ್ಲ ಆರೋಪಗಳನ್ನು ನಿರಾರಕರಿಸಿದ್ದರು ಹಾಗೂ ಇಂಥ ಸುದ್ದಿಗಳಿಗೆ ತಾವು ರಿಯಾಕ್ಟ್ ಮಾಡುವುದೂ ಇಲ್ಲ, ತಲೆ ಕೆಡಿಸಿಕೊಳ್ಳುವುದೂ ಇಲ್ಲ ಎಂದಿದ್ದರು.
ಸದ್ಯ ಇವರ ಪುತ್ರ ಬಂಧನಕ್ಕೆ ಒಳಗಾಗುತ್ತಿದ್ದಂತೆಯೇ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದು, ಅವರ ಪರ ವಕೀಲರು ಮಾತ್ರ ಆರ್ಯನ್‌ಗೆ ಡ್ರಗ್ಸ್ ನಂಟು ಇಲ್ಲ, ಅವನು ಡ್ರಗ್ಸ್ ಸೇವಿಸಿಲ್ಲ ಎನ್ನುತ್ತಿದ್ದಾರೆ. ಸತ್ಯ ಇನ್ನಷ್ಟೇ ಹೊರಬರಬೇಕಿದೆ. ಒಂದು ವೇಳೆ ಆರೋಪ ಸಾಬೀತಾದರೆ ಕಾನೂನಿನ ಪ್ರಕಾರ ಇಂಥ ಕೇಸ್‌ಗೆ 10 ವರ್ಷಗಳ ಜೈಲುಶಿಕ್ಷೆ ಇದೆ.