ನ್ಯೂಸ್

ವಿವಿಧ ಪದವೀಧರರಿಗೆ 'ಗೇಲ್​'ನಲ್ಲಿ ಉದ್ಯೋಗಾವಕಾಶ: 220 ಹುದ್ದೆಗಳಿಗೆ ಆಹ್ವಾನ

ಗೇಲ್ (ಜಿಎಐಎಲ್) ಇಂಡಿಯಾ ಎಂದೇ ಹೆಸರಾಗಿರುವ ಗ್ಯಾಸ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ ಶುದ್ಧ ಇಂಧನ ಆಧಾರಿತ ಕೈಗಾರಿಕೀಕರಣಕ್ಕಾಗಿ ಶ್ರಮಿಸುತ್ತಿದ್ದು, ಪ್ರಮುಖ ಅನಿಲ ಕ್ಷೇತ್ರಗಳು, ಎಲ್​ಎನ್​ಜಿ ಟರ್ವಿುನಲ್ ಹಾಗೂ ಇತರ ಗಡಿಯಾಚೆಗಿನ ಅನಿಲ ಪೂರೈಕೆ ಕೇಂದ್ರಗಳೊಂದಿಗೆ ಸೇರಿ ಇಂಧನ ಕಾರಿಡಾರ್ ರಚಿಸುವತ್ತ ಹೆಜ್ಜೆ ಹಾಕಿದೆ. ಈ ಹಿನ್ನೆಲೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆಯ್ಕೆಯಾದ ಅಭ್ಯರ್ಥಿಗಳನ್ನು ದೇಶದ ಯಾವುದೇ ಭಾಗದಲ್ಲಿ ನಡೆಯುವ ಅಥವಾ ಇರುವ ಗೇಲ್ ಘಟಕಕ್ಕೆ/ ಯೋಜನೆಗೆ ನೇಮಿಸಬಹುದಾಗಿದೆ.

ಹುದ್ದೆ ವಿವರ

- ಮ್ಯಾನೇಜರ್

* ಮಾರ್ಕೆಟಿಂಗ್ ಕಮಾಡಿಟಿ ರಿಸ್ಕ್ ಮ್ಯಾನೇಜ್​ವೆುಂಟ್ - 4

* ಮಾರ್ಕೆಟಿಂಗ್ ಇಂಟರ್​ನ್ಯಾಷನಲ್ ಎನ್​ಎನ್​ಜಿ ಆಂಡ್ ಶಿಪ್ಪಿಂಗ್ - 6

- ಸೀನಿಯರ್ ಇಂಜಿನಿಯರ್

* ಕೆಮಿಕಲ್ - 7

* ಮೆಕಾನಿಕಲ್ - 51

* ಎಲೆಕ್ಟ್ರಿಕಲ್ - 26

* ಇನ್​ಸ್ಟ್ರುಮೆಂಟೇಷನ್ - 3

* ಸಿವಿಲ್ - 15

* ಜಿಎಐಎಲ್ ಟೆಲ್ ಟಿಸಿ/ಟಿಎಂ - 10

* ಬಾಯ್ಲರ್ ಆಪರೇಷನ್ - 5

* ಎನ್ವಿರಾನ್​ವೆುಂಟಲ್ ಇಂಜಿನಿಯರಿಂಗ್ - 5

- ಸೀನಿಯರ್ ಆಫೀಸರ್

* ಎಕ್ಸ್​ಪ್ಲೋರೇಷನ್ ಆಂಡ್ ಪ್ರೊಡಕ್ಷನ್ (ಇ ಆಂಡ್ ಪಿ) - 3

* ಫೈರ್ ಆಂಡ್ ಸೇಫ್ಟಿ - 10

* ಕಾಂಟ್ರಾಕ್ಟ್ ಆಂಡ್ ಪ್ರೊಕ್ಯೂರ್​ವೆುಂಟ್ - 10

* ಬಿಜಿನೆಸ್ ಇನ್​ಫಮೇಷನ್ ಸಿಸ್ಟಂ (ಬಿಐಎಸ್) - 9

* ಮಾರ್ಕೆಟಿಂಗ್ - 8

* ಹ್ಯೂಮನ್ ರಿಸೋರ್ಸ್ (ಎಚ್​ಆರ್) - 18

* ಕಾಪೋರೇಟ್ ಕಮ್ಯುನಿಕೇಷನ್ - 2

* ಕಾನೂನು - 4

* ಫೈನಾನ್ಸ್ ಆಂಡ್ ಅಕೌಂಟ್ಸ್ (ಎಫ್ ಆಂಡ್ ಎ) - 5

- ಆಫೀಸರ್

* ಲ್ಯಾಬೊರೇಟರಿ - 10

* ಸೆಕ್ಯುರಿಟಿ - 5

* ಅಫಿಷಿಯಲ್ ಲಾಂಗ್ವೇಜ್ - 4

ವಿದ್ಯಾರ್ಹತೆ: ಮ್ಯಾನೇಜರ್ ಹುದ್ದೆಗೆ ಸಿಎ/ ಸಿಎಂಎ/ ಬಿಕಾಂ/ ಬಿಎ (ಎಕನಾಮಿಕ್ಸ್)/ ಬಿಎಸ್ಸಿ (ಮ್ಯಾಥ್ಸ್)/ ಬಿಇ/ ಬಿ.ಟೆಕ್ ಜತೆ ಎಂಬಿಎ ಮಾಡಿರಬೇಕು. ಉಳಿದ ಹುದ್ದೆಗಳಿಗೆ ಸಂಬಂಧಿತ ವಿಷಯದಲ್ಲಿ ಇಂಜಿನಿಯರಿಂಗ್ ಪದವಿ, ಹಿಂದಿ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಕನಿಷ್ಠ ಶೇ.60 ರಿಂದ 65 ಅಂಕ ಪಡೆದಿರಬೇಕು. ದೂರಶಿಕ್ಷಣ ಮೂಲಕ ಪಡೆದ ಪದವಿಗೆ ಮಾನ್ಯತೆ ಇಲ್ಲ.

ವಯೋಮಿತಿ: ಹುದ್ದೆಗಳಿಗೆ ಅನುಗುಣವಾಗಿ ಗರಿಷ್ಠ 28 ರಿಂದ 45 ವರ್ಷ ನಿಗದಿಪಡಿಸಲಾಗಿದೆ. ಮೀಸಲಾತಿ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮದನ್ವಯ ವಯೋಸಡಿಲಿಕೆ ಇದೆ.

ವೇತನ: ಹುದ್ದೆಗಳಿಗೆ ಅನುಗುಣವಾಗಿ ಮಾಸಿಕ 50,000 ರೂ. ನಿಂದ 2,00,000 ರೂ. ವೇತನ ಜತೆ ಇತರ ಭತ್ಯೆಗಳನ್ನು ನೀಡಲಾಗುವುದು.

ಅರ್ಜಿ ಶುಲ್ಕ: ಎಸ್ಸಿ, ಎಸ್ಟಿ, ಅಂಗವಿಕಲ ಅಭ್ಯರ್ಥಿಗಳನ್ನು ಹೊರತುಪಡಿಸಿ ಉಳಿದ ಅಭ್ಯರ್ಥಿಗಳು 200 ರೂ. ಪಾವತಿಸಬೇಕು.

ಅರ್ಜಿ ಸಲ್ಲಿಸಲು ಕೊನೇ ದಿನ: 5.8.2021

ಅಧಿಸೂಚನೆಗೆ: https://bit.ly/3xDMRBs

ಮಾಹಿತಿಗೆ: http://www.gailonline.com