ಗಾಜಿಯಾಬಾದ್ (ಉತ್ತರ ಪ್ರದೇಶ): ಒಬ್ಬನ ಪ್ರಾಣವನ್ನು ಕಾಪಾಡಲು ಹೋಗಿ ಐದು ಮಂದಿ ದಾರುಣವಾಗಿ ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ನಡೆದಿದೆ. ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ವಿದ್ಯುತ್ ಕಂಬ ಮುಟ್ಟಿದುದರ ಪರಿಣಾಮವಾಗಿ ಈ ದುರ್ಘಟನೆ ನಡೆದಿದೆ. ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಭಾರಿ ಮಳೆ ಸುರಿಯುತ್ತಿದ್ದಾಗ ಅಂಗಡಿವೊಂದರ ಮುಂದಿನ ಶೆಡ್ನ ಕಂಬವೊಂದರಲ್ಲಿ ವಿದ್ಯುತ್ ಪ್ರವಹಿಸಿದೆ. ಇದೇ ಸಂದರ್ಭದಲ್ಲಿ ಅಂಗಡಿಗೆ ಹೋಗಿದ್ದ ಮಕ್ಕಳಿಬ್ಬರು ಮಳೆಯಿಂದ ರಕ್ಷಣೆ ಪಡೆಯಲು ವಿದ್ಯುತ್ ಕಂಬ ಹಿಡಿದುಕೊಂಡಿದ್ದಾರೆ. ಆದರೆ ಅದರಲ್ಲಿ ವಿದ್ಯುತ್ ಸಂಚರಿಸುತ್ತಿದ್ದ ಕಾರಣ, ಅಲ್ಲಿಯೇ ಇಬ್ಬರೂ ಮೃತಪಟ್ಟಿದ್ದಾರೆ.
ಇದನ್ನು ಅರಿಯದ ಬಾಲಕನೊಬ್ಬ ಅವರ ರಕ್ಷಣೆಗೆ ಧಾವಿಸಿದ್ದಾನೆ. ಅವನಿಗೂ ವಿದ್ಯುತ್ ತಗುಲಿದ್ದು, ಮೃತಪಟ್ಟಿದ್ದಾನೆ. ಇಷ್ಟಾದರೂ ಅಲ್ಲಿ ವಿದ್ಯುತ್ ಪ್ರಹರಿಸುತ್ತಿದೆ ಎಂಬುದು ತಿಳಿಯದೇ ಅವರ ರಕ್ಷಣೆಗೆ ಧಾವಿಸಿದ ಓರ್ವ ಮಹಿಳೆ ಮತ್ತು ಮತ್ತಿಬ್ಬರು ಕೂಡ ಮೃತಪಟ್ಟಿರುವ ಘಟನೆ ಇದಾಗಿದೆ. ಮೃತಪಟ್ಟವರಲ್ಲಿ ಮೂವರು ಮಕ್ಕಳಾಗಿದ್ದು ಇಬ್ಬರು ಒಂದೇ ಕುಟುಂಬದವರು ಎನ್ನಲಾಗಿದೆ.