ನ್ಯೂಸ್

ನಿರೂಪಕನ ಮೇಲೆ ಕಳಚಿ ಬಿದ್ದ ಸ್ಟುಡಿಯೊ ಗೋಡೆ! ನೇರ ಪ್ರಸಾರದಲ್ಲಿ ಅವಘಡ- ವಿಡಿಯೋ ವೈರಲ್

ಕೊಲಂಬಿಯಾ: ನೇರಪ್ರಸಾರದ ಕಾರ್ಯಕ್ರಮ ನಡೆಯುತ್ತಿದ್ದ ವೇಳೆಯೇ ಟೀವಿ ಸ್ಟುಡಿಯೋದ ಸೆಟ್​ ಕಳಚಿಬಿದ್ದು ಕೆಲ ಕಾಲ ಆತಂಕದ ಸ್ಥಿತಿ ನಿರ್ಮಾಣವಾದ ಘಟನೆ ಕೊಲಂಬಿಯಾದಲ್ಲಿ ನಡೆದಿದೆ.

ನೇರಪ್ರಸಾರದಲ್ಲಿ ಈ ದುರ್ಘಟನೆ ಸಂಭವಿಸಿರುವ ಕಾರಣ, ಇದು ವೈರಲ್​ ಆಗಿದೆ. ಇಎಸ್​ಪಿಎನ್​ ಚಾನೆಲ್​ನಲ್ಲಿ ನೇರಪ್ರಸಾರ ನಡೆಯುತ್ತಿತ್ತು, ಈ ಸಂದರ್ಭದಲ್ಲಿ ಟಿವಿ ನಿರೂಪಕನ ಮೇಲೆ ಸ್ಟುಡಿಯೋದ ಒಂದು ಭಾಗ ಕಳಚಿ ಬಿದ್ದಿದೆ.

ಕ್ರಿಕೆಟ್​ಗೆ ಸಂಬಂಧಿಸಿದ ನೇರ ಪ್ರಸಾರ ಕಾರ್ಯಕ್ರಮ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ನಿರೂಪಕ ಕ್ರೀಡಾ ವಿಶ್ಲೇಷಣೆಯನ್ನು ಮಾಡುತ್ತಿದ್ದ,. ಜತೆಗೆ ಕ್ರೀಡಾ ಕ್ಷೇತ್ರದ ಕೆಲವು ದಿಗ್ಗಜರು ಅಲ್ಲಿ ಇದ್ದರು. ಈ ಸಂದರ್ಭದಲ್ಲಿ ಅವಘಡ ಸಂಭವಿಸಿದೆ. ಕ್ರೀಡಾ ವಿಶ್ಲೇಷಕನ ಮುಖದ ಹತ್ತಿರದಲ್ಲಿಯೇ ಇದ್ದ ಬೆಂಚ್ ಒಂದಕ್ಕೆ ಈ ಗೋಡೆ ಬಿದ್ದಿದೆ.

ಅದೃಷ್ಟವಶಾತ್ ಯಾರಿಗೂ ಯಾವುದೇ ರೀತಿಯ ಅನಾಹುತ ಸಂಭವಿಸಿಲ್ಲ ಎನ್ನಲಾಗಿದೆ. ನೇರಪ್ರಸಾರ ಆಗಿದ್ದ ಕಾರಣ, ಯಾರೂ ಆ ಕ್ಷಣದಲ್ಲಿ ಅಲ್ಲಿಗೆ ಧಾವಿಸಲು ಸಾಧ್ಯವಾಗಲಿಲ್ಲ. ನಂತರ ತಕ್ಷಣವೇ ನಿರೂಪಕರು ಬ್ರೇಕ್ ತೆಗೆದುಕೊಳ್ಳುವ ಮೂಲಕ ಕಾರ್ಯಕ್ರಮವನ್ನು ಮೊಟಕುಗೊಳಿಸಿದ್ದಾರೆ. ನಂತರ ಅವರಿಗೆ ಚಿಕಿತ್ಸೆ ನೀಡಲಾಗಿದೆ. ಅವರ ಮೂಗಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಹೆಚ್ಚಿನ ಅನಾಹುತ ಸಂಭವಿಸಿಲ್ಲ ಎನ್ನಲಾಗಿದೆ.

ನೇರಪ್ರಸಾರ ಕಾರ್ಯಕ್ರಮ ನಡೆಯುತ್ತಿರುವುದನ್ನು ನೋಡುತ್ತಿದ್ದ ಅಪಾರ ವೀಕ್ಷಕರು ಆರೋಗ್ಯದ ಬಗ್ಗೆ ವಿಚಾರಿಸಿದುದಕ್ಕೆ ಕ್ರೀಡಾ ವಿಶ್ಲೇಷಕ ಟ್ವೀಟ್​ ಮೂಲಕ ಧನ್ಯವಾದ ಸಲ್ಲಿಸಿದ್ದಾರೆ.