ನ್ಯೂಸ್

ಪತ್ನಿ ಮನೆಗೂ ಬರಲ್ಲ, ವಿಚ್ಛೇನದಕ್ಕೂ ಒಪ್ತಿಲ್ಲ- ಒಂಟಿಯಾಗಿರುವ ನನಗೆ ಕಾನೂನು ನೆರವು ನೀಡಬಲ್ಲದೆ?

ನನ್ನ ಮದುವೆಯಾಗಿ ಮೂರು ವರ್ಷಗಳಾಗಿದೆ. ನನ್ನ ಹೆಂಡತಿ ಮದುವೆಯಾದ ಮೂರು ದಿನಕ್ಕೆ ತವರಿಗೆ ಹೋದವಳು ಈವರೆಗೂ ಬಂದಿರುವುದಿಲ್ಲ. ವಿಚ್ಛೇದನಕ್ಕೂ ಒಪ್ಪುತ್ತಿಲ್ಲ. ಒಂದೇ ಊರಿನಲ್ಲೇ ಇದ್ದರೂ , ತನ್ನ ತವರಿನಲ್ಲೇ ಇದ್ದಾಳೆ. ನಾನು ವಿಚ್ಛೇದನ ಕೇಳಲು ಸಾಧ್ಯವೆ?

ಉತ್ತರ: ನೀವು ವಿಚ್ಛೇದನಕ್ಕೆ ಪ್ರಕರಣ ದಾಖಲಿಸಬಹುದು. ದಾಂಪತ್ಯ ಜೀವನದ ಸಾಂಗತ್ಯ ಕೊಡದಿರುವುದೂ ಕ್ರೂರತೆಯೇ ಆಗುತ್ತದೆ.

ಜೊತೆಗೆ ಎರಡು ವರ್ಷಕ್ಕೂ ಮೀರಿ ಆಕೆ ನಿಮ್ಮಿಂದ ಯಾವುದೇ ಸಕಾರಣವಿಲ್ಲದೆ , ಬೇರೆ ಇದ್ದಾಳೆ ಎನ್ನುವುದನ್ನು ನೀವು ಸಾಬೀತು ಪಡಿಸಿದರೆ ಆ ಆಧಾರದ ಮೇಲೂ ನಿಮಗೆ ವಿಚ್ಛೇದನ ಸಿಗುತ್ತದೆ.

ಯಾವುದಕ್ಕೂ ಮೊದಲು ಒಮ್ಮೆ ನಿಮ್ಮ ತಾಲ್ಲೂಕಿನ ನ್ಯಾಯಾಲಯದ ಮಧ್ಯಸ್ಥಿಕಾ ಕೇಂದ್ರಕ್ಕೆ ನಿಮ್ಮಿಬ್ಬರ ಮಧ್ಯೆ ಇರುವ ದಾಂಪತ್ಯ ಜೀವನದ ಸಮಸ್ಯೆ ಪರಿಹರಿಸಲು ವ್ಯಾಜ್ಯ ಪೂರ್ವ ಮಧ್ಯಸ್ಥಿಕೆ ಮಾಡಿಕೊಡಿ ಎಂದು ಅರ್ಜಿ ಕೊಡಿ. ಅಲ್ಲಿ ಇಬ್ಬರನ್ನೂ ಕರೆಯಿಸುತ್ತಾರೆ. ನುರಿತ ಮಧ್ಯಸ್ಥಿಕೆಗಾರರ ಸಹಾಯದಿಂದ ನಿಮ್ಮ ಸಮಸ್ಯೆಗೆ ಸುಲಭವಾದ ಪರಿಹಾರ ಸಿಗಲೂ ಬಹುದು.