ನ್ಯೂಸ್

ಸ್ನೇಹಿತನ ಕೊಂದು ಶವದ ಜತೆ ಊರೆಲ್ಲಾ ಸುತ್ತಾಡಿದ: ಸಿಸಿಟಿವಿಯಲ್ಲಿ ದೃಶ್ಯ ಸೆರೆ

ನವದೆಹಲಿ: ಸ್ನೇಹಿತ ಪಡೆದುಕೊಂಡಿದ್ದ ಸಾಲವನ್ನು ವಾಪಸು ಮಾಡಿಲ್ಲ ಎನ್ನುವ ಕಾರಣಕ್ಕೆ ಆತನನ್ನು ಕೊಲೆ ಮಾಡಿದ್ದೂ ಅಲ್ಲದೇ ಆತನ ಮೃತದೇಹವನ್ನು ಇಟ್ಟುಕೊಂಡು ಊರೆಲ್ಲಾ ಸುತ್ತಾಡಿದ ಭಯಾನಕ ಘಟನೆ ದೆಹಲಿಯಲ್ಲಿ ನಡೆದಿದೆ.

ಇಲ್ಲಿಯ ರೋಹಿಣಿ ಎಂಬ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಆರೋಪಿ ಮೃತದೇಹವನ್ನ ಬ್ಯಾಗ್​ನಲ್ಲಿ ತುಂಬಿಕೊಂಡು ಬೈಕ್​ನಲ್ಲಿ ಓಡಾಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಅಂಕಿತ್​ ಎಂಬ 24 ವರ್ಷದ ಯುವಕ ಈ ಕೃತ್ಯ ಎಸಗಿರುವ ಆರೋಪ ಹೊತ್ತಿದ್ದು, ಸದ್ಯ ಅವನನ್ನು ಬಂಧಿಸಲಾಗಿದೆ. ಶವವನ್ನು ಎಲ್ಲಿ ಎಸೆಯುವುದು ಎಂದು ತಿಳಿಯದೇ ಊರೆಲ್ಲಾ ಸುತ್ತಾಡಿ ನಂತರ ಖಾಲಿ ಜಮೀನಿನಲ್ಲಿ ಎಸೆದು ಪರಾರಿಯಾಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಪ್ರೇಮ್​ ನಗರದ ಸಿಸಿಟಿವಿ ಫೂಟೇಜ್​ ಪರಿಶೀಲಿಸಿರುವ ಪೊಲೀಸರು ಆರೋಪಿಯನ್ನು ಸೆರೆಹಿಡಿದ್ದಾರೆ. ಮೃತದೇಹದಿಂದ ಬೀಳುತ್ತಿರುವ ರಕ್ತದ ಕಲೆಗಳನ್ನು ನೋಡಿದ ಸ್ಥಳೀಯರು ಪೊಲೀಸರಿಗೆ ಕರೆ ಮಾಡಿದ್ದಾರೆ.

ಅದರ ಆಧಾರದ ಮೇಲೆ ಸುತ್ತಲಿನ ಸಿಸಿಟಿವಿ ಪರಿಶೀಲಿಸಿದ ಪೊಲೀಸರಿಗೆ ಶವವು ಸಿಕ್ಕಿದೆ. ಮೃತದೇಹವನ್ನ ವಶಕ್ಕೆ ಪಡೆದು ಸಂಜಯ್​ ಗಾಂಧಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ನೀಡಲಾಗಿದೆ ಎಂದು ಡಿಸಿಪಿ ಪಿ.ಕೆ ಮಿಶ್ರಾ ಹೇಳಿದ್ರು.

ಅಂಕಿತ್​ನನ್ನು ಬಂಧಿಸಿದಾಗ ತಾನು ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ. ತಾನು ಸಾಲ ಕೊಟ್ಟಿದ್ದು, ಅದನ್ನು ಎಷ್ಟು ಮಾಡಿದರೂ ಆತ ವಾಪಸ್​ ಕೊಡುತ್ತಿರಲಿಲ್ಲ. ಇದರಿಂದ ಸಿಟ್ಟಿನಿಂದ ಕೊಲೆ ಮಾಡಿರುವುದಾಗಿ ಹೇಳಿದ್ದಾನೆ.

ಈ ಲಿಂಕ್​ ಕ್ಲಿಕ್​ ಮಾಡಿ ವಿಡಿಯೋ ನೋಡಬಹುದು.