ಮುಂಬೈ: ಮಹಾರಾಷ್ಟ್ರದ ಸಾಕಿನಾಕ ಪ್ರದೇಶದಲ್ಲಿ 2021ರ ಸೆಪ್ಟೆಂಬರ್ನಲ್ಲಿ ನಡೆದಿದ್ದ ರೇಪ್ ಆ್ಯಂಡ್ ಮರ್ಡರ್ ಕೇಸ್ನಲ್ಲಿ ಅಪರಾಧಿಗೆ ಗಲ್ಲು ಶಿಕ್ಷೆ ವಿಧಿಸಿ ಮುಂಬೈ ಕೋರ್ಟ್ ಆದೇಶಿಸಿದೆ.
34 ವರ್ಷದ ಮಹಿಳೆಯ ಮೇಲೆ ನಡೆದ ಅತ್ಯಾಚಾರ ನಡೆಸಿ, ಖಾಸಗಿ ಭಾಗಕ್ಕೆ ಕಬ್ಬಿಣದ ರಾಡ್ ತೂರಿಸಿ ಚಿತ್ರಹಿಂಸೆ ಕೊಟ್ಟು ಕೊಲೆ ಮಾಡಿದ್ದ ಮೋಹನ್ ಕಥ್ವಾರು ಚೌಹಾಣ್ (45) ಎಂಬಾತನಿಗೆ ಸೆಷನ್ಸ್ ಕೋರ್ಟ್ ಮರಣದಂಡನೆ ವಿಧಿಸಿದೆ. ರಸ್ತೆ ಬದಿ ನಿಲ್ಲಿಸಲಾಗಿದ್ದ ಟೆಂಪೊ ಒಂದರಲ್ಲಿ ಈ ಅತ್ಯಾಚಾರ ನಡೆದಿತ್ತು.
ಆಕೆಯನ್ನು ಕೂಡಿ ಹಾಕಿ ಬಳಿಕ ಆಕೆಯ ಖಾಸಗಿ ಭಾಗಕ್ಕೆ ಕಬ್ಬಿಣದ ರಾಡ್ ಹಾಕಿ ಕ್ರೂರವಾಗಿ ಹಿಂಸಿಸಿದ್ದ. ನಂತರ ರೇಪ್ ಮಾಡಿ ಕೊಲೆ ಮಾಡಿದ್ದ. ಇದು ಅತ್ಯಂತ ಹೀನಾಯ ಕೃತ್ಯ. ಇಂಥ ಪಾತಕಿಗಳಿಗೆ ಮರಣದಂಡನೆಯೇ ಸರಿಯಾದ ಶಿಕ್ಷೆ ಎಂದು ನ್ಯಾಯಾಧೀಶ ಎಚ್. ಸಿ. ಶೆಂಡೆ ಅಭಿಪ್ರಾಯ ಪಟ್ಟಿದ್ದಾರೆ. ಈತ ಅತ್ಯಾಚಾರಕ್ಕೂ ಮುನ್ನ ನಡೆದುಕೊಂಡು ಹೋಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.