ನ್ಯೂಸ್

ಸಾವಿರಾರು ಅನಾಥ ಮಕ್ಕಳ ತಾಯಿ ಸಿಂಧುತಾಯಿ ಸಪಕಾಳ ಇನ್ನಿಲ್ಲ

ಪುಣೆ: ಸಾವಿರಾರು ಅನಾಥ ಮಕ್ಕಳ ತಾಯಿ ಎಂದೇ ಪರಿಗಣಿಸಲ್ಪಟ್ಟಿರುವ, ಖ್ಯಾತ ಸಮಾಜಸೇವಕಿ ಸಿಂಧುತಾಯಿ ಸಪಕಾಳ ಅವರು ಇಂದು ರಾತ್ರಿ ಹೃದಯಾಘಾತದಿಂದ ನಿಧನರಾದರು. ಅವರಿಗೆ 75 ವರ್ಷ ವಯಸ್ಸಾಗಿತ್ತು. ಅನಾಥ ಮಕ್ಕಳಿಗಾಗಿ ಅವರು ಮಾಡಿದ ಸೇವೆಯನ್ನು ಗುರುತಿಸಿ ಕಳೆದ ವರ್ಷ ಅವರಿಗೆ ಕೇಂದ್ರ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು.

ಒಂದೂವರೆ ತಿಂಗಳ ಹಿಂದೆ ಅವರಿಗೆ ಹರ್ನಿಯಾ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ನಂತರ ಬೇಗ ಚೇತರಿಸಿಕೊಳ್ಳಲಾಗದೇ, ತೀವ್ರ ಅನಾರೋಗ್ಯ ಕಾಡಿದ ಹಿನ್ನೆಲೆಯಲ್ಲಿ ಇತ್ತೀಚೆಗೆ ಇಲ್ಲಿನ ಗ್ಯಾಲಕ್ಸಿ ಕೇರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕ್ಕಂದಿನಿಂದಲೂ ಸ್ವತಃ ಬಡತನದಲ್ಲಿ ಬೆಳೆದು, ಅದರ ಕಷ್ಟ-ನಷ್ಟಗಳನ್ನು ಅರಿತಿದ್ದ ಸಿಂಧುತಾಯಿ, ಅನಾಥ ಮಕ್ಕಳಿಗಾಗಿ ಹಲವು ಸಂಸ್ಥೆಗಳನ್ನು ಕಟ್ಟಿ ಬೆಳೆಸಿದ್ದರು.