ನ್ಯೂಸ್

ಮೆರವಣಿಗೆ ವೇಳೆ ಭಾರಿ ಅವಘಡ: ಆಲದ ಮರದ ಕೊಂಬೆ ಬಿದ್ದು ಇಬ್ಬರ ಸಾವು- 25 ಮಂದಿ ಗಂಭೀರ

suchetana

ತ್ರಿಶೂರ್: ತ್ರಿಶೂರ್ ಪೂರಂನ ಅಂಗವಾಗಿ ನಡೆದ ಮದತಿಲ್ ಮೆರವಣಿಗೆಯಲ್ಲಿ ಭಾರಿ ಅವಘಡ ಸಂಭವಿಸಿದ್ದು, ಮೆರವಣಿಗೆ ನಡೆಯುತ್ತಿದ್ದ ವೇಳೆಯೇ ಆಲದ ಮರ ಬಿದ್ದು ಇಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ. ತಿರುವಂಬಡಿ ದೇವಸ್ಥಾನ ಪೂರಂನ ಸಂಘಟನಾ ಸಮಿತಿ ಸದಸ್ಯರಾದ ರಮೇಶ್ ಮತ್ತು ಪಣಿಯತ್ ರಾಧಾಕೃಷ್ಣನ್ ಮೃತಪಟ್ಟಿದ್ದಾರೆ.

ಭಕ್ತರು ಮತ್ತು ತಾಳವಾದ್ಯ ಕಲಾವಿದರು ಸಾಗುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ. ಘಟನೆಯಲ್ಲಿ 25 ಮಂದಿಗೆ ಗಾಯಗಳಾಗಿದ್ದು, ಹಲವರ ಸ್ಥಿತಿ ಚಿಂತಾಜನಕವಾಗಿದೆ. ರಮೇಶ್‌ ಮತ್ತು ರಾಧಾಕೃಷ್ಣನ್‌ ಅವರ ತಲೆಯ ಮೇಲೆ ಕೊಂಬೆ ಬಿದ್ದ ಕಾರಣ ಅವರು ಮೃತಪಟ್ಟಿರುವುದಾಗಿ ಮೂಲಗಳು ಹೇಳಿವೆ.

ಈ ಘಟನೆ ನಿನ್ನೆ ಮಧ್ಯರಾತ್ರಿ ನಡೆದಿದ್ದು, ದುರ್ಘಟನೆ ಹಿನ್ನೆಲೆಯಲ್ಲಿ ಭವ್ಯ ಪಟಾಕಿ ಸಿಡಿಸುವ ಪ್ರದರ್ಶನವನ್ನು ರದ್ದುಪಡಿಸಲಾಗಿದೆ. ದುರ್ಘಟನೆ ಸಂಭವಿಸಿದರೂ ಮೆರವಣಿಗೆಯನ್ನು ರದ್ದು ಪಡಿಸುವುದು ಕಷ್ಟ ಎಂದಿರುವ ಆಡಳಿತ ಮಂಡಳಿ ತಲಾ ಒಂದು ಆನೆಯ ಪಕಲಪೂರಮ್ ಮೆರವಣಿಗೆ ನಡೆಸಲಾಗುತ್ತದೆ ಎಂದು ಹೇಳಿದೆ.