ನ್ಯೂಸ್

ಪೆಟ್ರೋಲ್​, ಗ್ಯಾಸ್​ ನಂತ್ರ ಈಗ ರಾಜ್ಯದ ಜನತೆಗೆ ಕರೆಂಟ್​ ಶಾಕ್​: ಜುಲೈ 1ರಿಂದ ದರ ಏರಿಕೆ!

suchetana

ಬೆಂಗಳೂರು: ದಿನದಿನಕ್ಕೆ ಏರುತ್ತಿರುವ ಬೆಲೆಯಿಂದ ತತ್ತರಿಸಿರುವ ರಾಜ್ಯದ ಜನತೆಗೆ ಈಗ ವಿದ್ಯುತ್​ ಶಾಕ್​ ನೀಡಿದೆ. ಪೆಟ್ರೋಲ್, ಡೀಸೆಲ್, ಗ್ಯಾಸ್ ಇವೆಲ್ಲವುಗಳ ನಂತರ ಈಗ ವಿದ್ಯುತ್ ದರವನ್ನು ಏರಿಕೆ ಮಾಡಲಾಗಿದೆ. ಜುಲೈ 1ರಿಂದಲೇ ಈ ಹೊಸ ದರ ನಿಗದಿಯಾಗಿದೆ.

ಕಳೆದ 2 ವರ್ಷಗಳಲ್ಲಿ ಕಲ್ಲಿದ್ದಲು ದರ ಹೆಚ್ಚಳವಾಗಿರುವ ಹಿನ್ನೆಲೆ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗಕ್ಕೆ(ಕೆಇಆರ್‌ಸಿ) ಎಸ್ಕಾಂಗಳು (ಬೆಸ್ಕಾಂ, ಮೆಸ್ಕಾಂ, ಹೆಸ್ಕಾಂ, ಗೆಸ್ಕಾಂ, ಸೆಸ್ಕಾಂನಿಂದ ಪ್ರಸ್ತಾವ ಸಲ್ಲಿಸಲು ಅನುಮೋದಿಸಲಾಗಿತ್ತು. ಇದರ ಅನ್ವಯ ಇದೀಗ ದರ ಹೆಚ್ಚು ಮಾಡಲಾಗಿದೆ.

ವಿದ್ಯುತ್ ದರ 19 ರೂಪಾಯಿಯಿಂದ 31 ರೂಪಾಯಿವರೆಗೆ ಹೆಚ್ಚಾಗಲಿದೆ. ಪ್ರತಿ ತಿಂಗಳು 100 ಯೂನಿಟ್ ಬಳಸುವ ಗ್ರಾಹಕರು, ಇನ್ಮುಂದೆ ಹೆಚ್ಚುವರಿಯಾಗಿ 19 ರೂಪಾಯಿಯಿಂದ 31 ರೂಪಾಯಿ ಪಾವತಿಸಬೇಕಾಗಿದೆ.

ಶಾಖೋತ್ಪನ್ನ ವಿದ್ಯುತ್ ಘಟಕಗಳಲ್ಲಿ ಉತ್ಪಾದನೆಯ ವೆಚ್ಚ ಹೆಚ್ಚಾಗಿದೆ, ಕಲ್ಲಿದ್ದಲು, ಅಭಾವ ಹಾಗೂ ದರ ಹೆಚ್ಚಳವಾಗಿದೆ ಹಾಗೂ ಎಸ್ಕಾಂಗಳು ಆರ್ಥಿಕವಾಗಿ ನಷ್ಟದಲ್ಲಿರುವ ಕಾರಣ, ದರ ಹೆಚ್ಚಳ ಅನಿವಾರ್ಯವಾಗಿದೆ ಎಂಬ ಕಾರಣ ನೀಡಲಾಗಿದೆ.

ಎಸ್ಕಾಂ ಕೋರಿದ್ದ ದರ ಇಂತಿದ್ದವು (ಪ್ರತಿ ಯೂನಿಟ್​​ಗೆ)

* ಬೆಸ್ಕಾಂ – 55.28

* ಮೆಸ್ಕಾಂ – 38.98

* ಸೆಸ್ಕ್ – 40.47

* ಹೆಸ್ಕಾಂ – 49.54

* ಗೆಸ್ಕಾಂ – 39.36

ಆದರೆ ಇಷ್ಟು ದರವನ್ನು ಹೆಚ್ಚು ಮಾಡಲಾಗಿಲ್ಲ. ಕೋವಿಡ್‌ನಿಂದಾಗಿ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಗ್ರಾಹಕರಿಗೆ ಎಸ್ಕಾಂ ನಿಗದಿಪಡಿಸಿರುವ ನೂತನ ದರದಿಂದ ಹೊರೆಯಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದು, ದರವನ್ನು 19 ರೂಪಾಯಿಯಿಂದ 31 ರವರೆಗೆ ಹೆಚ್ಚಿಸಲಾಗಿದೆ.

ಇದು ತಾತ್ಕಾಲಿಕ ಮಾತ್ರ. ವಸೂಲಿ ಸಂಪುರ್ಣ ಮುಕ್ತಾಯವಾದರೆ ಮತ್ತೆ ದರಗಳು ಯಥಾಸ್ಥಿತಿಗೆ ಬದಲಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.