ನ್ಯೂಸ್

ಹೆಂಡ್ತಿ ಮಾತು ಕೇಳಿ ಮಗ ನಮ್​ ಜತೆ ಇರಲು ಒಪ್ತಿಲ್ಲ: ಅಪ್ಪ-ಅಮ್ಮನಾದ ನಮಗೆ ಕಾನೂನು ಹೇಗೆ ನೆರವಾಗಬಲ್ಲುದು?

ನನ್ನ ಮಗ ಮತ್ತು ಸೊಸೆ ಬೇರೆಯಾಗಿ ಮೂರು ವರ್ಷ ಆಗಿದೆ. ಇಬ್ಬರೂ ದೊಡ್ಡ ಕೆಲಸದಲ್ಲಿ ಸಿಟಿಯಲ್ಲಿ ಇದ್ದಾರೆ. ತುಂಬಾ ಓದಿಕೊಂಡಿದ್ದಾರೆ. ಅವರಿಬ್ಬರಿಗೆ ಸರಿ ಹೋಗುತ್ತಿಲ್ಲ ಎನ್ನುತ್ತಾರೆ. ವಿಚ್ಛೇದನವನ್ನೂ ಪಡೆಯುತ್ತಿಲ್ಲ,

ನಮಗೆ ಒಬ್ಬನೇ ಮಗ. ನಮಗೆ ಆಸ್ತಿ ಪಾಸ್ತಿ ತುಂಬಾ ಇದೆ. ಈಗ ನನ್ನ ಸೊಸೆ ಬಂದು ನನ್ನ ಮಗನ ಜೊತೆ ಮತ್ತು ನಮ್ಮ ಜೊತೆ ಇರಬೇಕು ಎಂದು ನನ್ನ ಆಸೆ. ನನ್ನ ಮಗ ಕೇಸು ಹಾಕಲು ಸಿದ್ಧನಿಲ್ಲ. ಹೆಂಡತಿ ಮಾತು ಕೇಳಿ ಅಲ್ಲಿಯೇ ಇದ್ದಾನೆ. ನಮಗೆ ವಯಸ್ಸಾಗಿರುವುದರಿಂದ, ಅವರಿಬ್ಬರೂ ನಮ್ಮ ಜೊತೆ ಇರಬೇಕು ಎಂದು ನಾವು ಕೇಸು ಹಾಕಬಹುದೇ? 

ಉತ್ತರ: ನಿಮ್ಮ ಮಗ ಬೇಕಿದ್ದರೆ, ನನ್ನ ಪತ್ನಿ ಬಂದು ನನ್ನ ಜೊತೆ ದಾಂಪತ್ಯ ಜೀವನ ನಡೆಸಬೇಕು. ಎಂದು ಪ್ರಕರಣ ನಡೆಸಬಹುದು. ಆದರೆ ನೀವು ನ್ಯಾಯಾಲಯದಲ್ಲಿ ನನ್ನ ಮಗ ಅಥವಾ ಸೊಸೆ ಅಥವಾ ಇಬ್ಬರೂ ಬಂದು ನಮ್ಮ ಜೊತೆ ಇರಬೇಕು ಎಂದು ಪ್ರಕರಣ ಹಾಕಲು ಅವಕಾಶವಿಲ್ಲ.